ವಿದ್ಯಾರ್ಥಿಗಳು ವಿಜ್ಞಾನ, ಕಲೆ, ಸಂಸ್ಕೃತಿಯಲ್ಲೂ ಆಸಕ್ತಿ ಬೆಳೆಸಿಕೊಳ್ಳಲಿ: ಶಶಿರೇಖಾ ಚೆಲುವಪ್ಪಾ
ಲೋಕದರ್ಶನ ವರದಿ
ಬೆಳಗಾವಿ 07: ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ಶಿಕ್ಷಣದ ಜೊತೆಗೆ ವಿಜ್ಞಾನದ ಮಹತ್ವ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ತೊಡಗಿಸಕೋಳ್ಳಬೇಕೆಂದು ಸಾಮಾಜಿಕ ಜಾಲತಾಣ ಮತ್ತು ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಹೊಂದಿರುವ ಕು. ಶಶಿರೇಖಾ ಚೆಲುವಪ್ಪಾ ಅವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ನಗರದ ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂಧ್ರನಾಥ ಟ್ಯಾಗೋರ ಪ.ಪೂ.ಮಹಾವಿದ್ಯಾಲಯ ಆಯೋಜಿಸಿರುವ “ಇನ್ಪೋತ್ಸವ-2026” ವಿಜ್ಞಾನ ವಸ್ತು ಪ್ರದರ್ಶನವನ್ನು ಶನಿವಾರ ದಿನಾಂಕ 07-11-2026 ರಂದು ಮರಾಠಾ ಮಂದಿರ ಕಾರ್ಯಾಲಯದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಓದುತ್ತಿರುವಾಗಲೇ ತಮ್ಮ ಅಧ್ಯಯನ ಜೊತೆಗೆ ವಿಜ್ಞಾನ, ಕಲೆ ಹಾಗೂ ಸಂಸ್ಕ್ರತಿಗಳ ವಿಷಯಗಳಲ್ಲೂ ಆಸಕ್ತಿ ವಹಿಸಿಸಬೇಕು. ವಿದ್ಯಾರ್ಥಿಗಳು ಪ್ರೌಢಶಾಲಾ ಹಂತದಲ್ಲೆ ವಿಜ್ಞಾನದತ್ತ ಆಕರ್ಷಿತರಾಗಲು ಜೀವನದಲ್ಲಿ ಸಾಧನೆ ಮಾಡಬೇಕು ಹಾಗೂ ಇಂದಿನ ಆಧುನಿಕ ಒತ್ತಡದ ಜಗತ್ತಿನಲ್ಲಿ ವಿದ್ಯಾರ್ಥಿಗಳು ಮೊಬೈಲ ಬಳಕೆ ಕಡಿಮೆ ಮಾಡಿ ಯೋಗದೊಂದಿಗೆ ಆರೋಗ್ಯಕರ ಜೀವನ ನಡೆಸಲು ಕರೆ ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ.ಸಿ.ಎನ್.ನಾಯ್ಕರ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ನಿರಂತರ ಅದ್ಯಯನದೊಂದಿಗೆ ಸತತ ಪ್ರಯತ್ನಮಾಡಿ ಗುರುಗಳ ಮಾರ್ಗದರ್ಶನವನ್ನು ಗುರಿಯಾಗಿ ಇಟ್ಟುಕೊಂಡು ಅಭ್ಯಾಸ ಮಾಡಿದರೆ ಶೈಕ್ಷಣಿಕ ಜೀವನದಲ್ಲಿ ಯಶಸ್ಸುಸಾಧ್ಯ ಎಂದು ಅಭಿಪ್ರಾಯಪಟ್ಟರು. ವಿಜ್ಞಾನ ವಸ್ತು ಪ್ರದರ್ಶನಕ್ಕೆ ವಿವಿಧ ಶಾಲೆಗಳಿಂದ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಬೆಳಗಾವಿ ನಗರ, ಗ್ರಾಮೀಣ ಭಾಗದ ಸುಮಾರು 1500 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ವೇದಿಕೆಯ ಮೇಲೆ ಮುಖ್ಯ ಆತಿಥಿಗಳಾದ ಕು. ಶಶಿರೇಖಾ ಚೆಲುವಪ್ಪಾ, ಮಾಜಿ ಸಚಿವರಾದ. ಶ್ಯಾಮ ಘಾಟಗೆ, ಪ್ರಾಂಶುಪಾಲ ಡಾ.ಸಿ.ಎನ್.ನಾಯ್ಕರ ಹಾಗೂ ನಾಯ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶ್ವೇತಾ ಸಿ.ನಾಯ್ಕರ, ಮತ್ತು ಕಾರ್ಯದರ್ಶಿ .ಎಸ್.ಎಸ್ ಅಣ್ಣಿಗೇರಿ ವೇದಿಕೆಯ ಮೇಲೆ ಉಪಸ್ಥಿತರಿದ್ದಾರೆ.