ಬ್ಯಾಡ್ಗಿ

ಮಾನ್ಯ ಶಾಸಕರಿಂದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

ಮಾನ್ಯ ಶಾಸಕರಿಂದ  ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ


        ಬ್ಯಾಡಗಿ 07 ; ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಜೋಯಿಸರಹರಳಲ್ಲಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಗೂ ಗ್ರಾಮ ಪಂಚಾಯಿತಿ ಜೋಯಿಸರಹರಳಲ್ಲಿ ಸಹಯೋಗದೊಂದಿಗೆ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿದರು.  ಈ ವೇಳೆ ಮಾತನಾಡಿದವರು.

    ಫ್ಲೋರೈಡ್ ನೀರನ್ನು ಕುಡಿದು ಆರೋಗ್ಯವನ್ನು ಕೆಡಿಸಿಕೊಳ್ಳದೆ ಶುದ್ಧ ನೀರನ್ನು ಕುಡಿದು ಆರೋಗ್ಯವನನ್ನು ಕಾಪಾಡಿಕೊಳ್ಳಬೇಕೆಂದು ಗ್ರಾಮದ ಜನರಿಗೆ ಕರೆ ನೀಡಿದರು.   ಪ್ರತಿಯೊಬ್ಬ ಮನುಷ್ಯನಿಗೂ ಶುದ್ಧ ಕುಡಿಯುವ ನೀರು ಬಹಳ ಮುಖ್ಯ ಆದ್ದರಿಂದ ಗ್ರಾಮದ ಎಲ್ಲ ಜನರು ಶುದ್ಧ ನೀರನ್ನು ಉಪಯೋಗಿಸಬೇಕೆಂದು ತಿಳಿಸಿದರು.

        ಇಂತಹ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಹೃದಯಪೂರ್ವಕ ಧನ್ಯವಾದಗಳು, ಎಂದು ಶಾಸಕರು ಶುಭ ಕೋರಿದರು.... ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ತಾಲೂಕಿನಲ್ಲಿ ನಡೆಯುತ್ತಿರುವ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ತಾಲೂಕಿನ ಯೋಜನಾಧಿಕಾರಿಗಳಾದ ಮಹಾದೇವ ನಾಯಕ್ ವಿವರವಾದ ಮಾಹಿತಿ ಒದಗಿಸಿದರು....

         ಯೋಜನೆಯಲ್ಲಿ ನಡೆಯುವ ಶುದ್ಧ ಗಂಗಾ ಕುಡಿಯುವ ನೀರಿನ ಘಟಕದ ಕಾರ್ಯಕ್ಷಮತೆಯ ಬಗ್ಗೆ ಶುದ್ಧ ಗಂಗಾ ಯೋಜನಾಧಿಕಾರಿಯಾದ ಫಕ್ಕೀರ​‍್ಪ ಬೆಲ್ಲಾಮುದ್ದಿ ಯವರು ತಿಳಿಸಿದರು... ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ಪ್ರವೀಣ್ ಕುಮಾರ್, ಊರಿನ ಗಣ್ಯರಾದ ಬಸವರಾಜ್, ಶಂಕರ್ ಚಕ್ರಶಾಲಿ, ಶುದ್ಧ ಗಂಗಾ ವಿಭಾಗ ಲೆಕ್ಕಪರಿಶೋದಕರಾದ ಶಶಿಕಿರಣ್, ಮೇಲ್ವಿಚಾರಕರಾದ ಸುರೇಶ್, ಮಂಜುನಾಥ ಜೋಹಿಸರಹರಳಹಳ್ಳಿ, ಸೇವಾಪ್ರತಿನಿಧಿ, ಗ್ರಾಮಸ್ಥರು ಹಾಗೂ ಸ್ವಸಾಯ ಸಂಘದ ಸದಸ್ಯರು ಭಾಗವಹಿಸಿದ್ದರು. 


ಸುದ್ದಿ ಓದಿ