ಹೋರಾಟಕ್ಕೆ ಭಾಗವಹಿಸುವಂತೆ ಅನುಮತಿ ಕೋರಿ ಕಾರ್ಯನಿರ್ವಾಹ ಅಧಿಕಾರಿಗಳಿಗೆ ಮನವಿ ಪತ್ರ
ಬ್ಯಾಡಗಿ 28 ; ಬೆಂಗಳೂರಿನಲ್ಲಿ ರಾಜ್ಯಮಟ್ಟದ ಎಂಬಿಕೆ ಎಲ್ ಸಿ ಆರ್ ಪಿ ಕೃಷಿ ಸಖಿ ಪಶು ಸಖಿ ಅವರ ವಿವಿಧ ಬೇಡಿಕೆಗೆ ಈಡೇರಿಸುವಂತೆ ರಾಜ್ಯಮಟ್ಟದ ಹೋರಾಟ ನಡೆಯುತ್ತಿದ್ದು ಹೋರಾಟದಲ್ಲಿ ಭಾಗವಹಿಸಲು ಅನುಮತಿ ಕೋರಿ ತಾಲೂಕಿನ ಎಂಬಿಕೆ ಎಲ್ ಸಿ ಆರ್ ಪಿ ಕೃಷಿ ಸಖಿ ಪಶು ಸಖಿ ಅವರು ಇಂದು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಮಲ್ಲಿಕಾರ್ಜುನ ಅವರಿಗೆ ಮನವಿಪತ್ರ ನೀಡಿದರು.
ಈ ವೇಳೆ ಮತ್ತೂರು ಪಂಚಾಯತಿಯ ಕೃಷಿ ಸಖಿ ರಜಿಯಾಬಾನು ನದಾಫ್ ಮಾತನಾಡಿ ಎಲ್ಲ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಒಳಪಡುವ ಎಂಬಿಕೆ ಎಲ್ ಜಿ ಆರ್ ಹಾಗೂ ಕೃಷಿ ಸಖಿ ಮತ್ತು ಪಶುಸಕ್ಕಿ ಸದಸ್ಯರೆಲ್ಲರೂ ವಿವಿಧ ಬೇಡಿಕೆಗೆರೆಗಳನ್ನು ಈಡೇರಿಸುವಂತೆ ಬೆಂಗಳೂರಿನಲ್ಲಿ ನಾಳೆ ದಿನಾಂಕ 28/10/26 ರಿಂದ ಬೃಹತ್ ರಾಜ್ಯ ಮಟ್ಟದ ಅನಿದಿಷ್ಟಾವಧಿ ಧರಣಿ ಸತ್ಯಾಗ್ರಹ ಹೋರಾಟವನ್ನು ಹಮ್ಮಿಕೊಂಡಿದ್ದು ಈ ಮೂಲಕ ಎಲ್ಲಾ ಸಖಿಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತಂಗಿ ಪಂಚಾಯಿತಿಯ ಮಂಗಳಾ ದೊಡ್ಡಮನಿ. ಮಧುಮತಿ ಎನ್ಕೆ. ಶೋಭಾ ಗಿಡ್ಡಣ್ಣನವರ್. ಕವಿತಾ ಗುತ್ತಲ್. ನೇತ್ರಾವತಿ ಶೇಲಾರ. ಲಕ್ಷ್ಮಿ ಮೇಗಳಮನಿ.ಹಾಗೂ ಅನೇಕರು ಉಪಸ್ಥಿತರಿದ್ದರು.