ಬ್ಯಾಡ್ಗಿ

ಬೈಕ್ ಅಪಘಾತದಲ್ಲಿ ಗಾಯಗೊಂಡ ಯುವಕನಿಗೆ ಧರ್ಮಸ್ಥಳ ಸಂಸ್ಥೆಯಿಂದ ವೀಲ್ಚೇರ್ ವಿತರಣೆ

ಬೈಕ್ ಅಪಘಾತದಲ್ಲಿ ಗಾಯಗೊಂಡ ಯುವಕನಿಗೆ ಧರ್ಮಸ್ಥಳ ಸಂಸ್ಥೆಯಿಂದ ವೀಲ್ಚೇರ್ ವಿತರಣೆ


ಬ್ಯಾಡಗಿ, ಅ. 9: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬ್ಯಾಡಗಿ ವಲಯದ ಕಾಕೋಳ ಕಾರ್ಯಕ್ಷೇತ್ರದ ಸರಸ್ವತಿ ಸಂಘದ ಸದಸ್ಯೆ ದ್ರಾಕ್ಷಾಯಿಣಿ ಅವರ ಪುತ್ರ ವಸಂತ ಮಲ್ಲಾಪುರ ಅವರಿಗೆ ವೀಲ್ಚೇರ್ ವಿತರಿಸಲಾಯಿತು.  

ಇತ್ತೀಚೆಗೆ ಬೈಕ್ ಅಪಘಾತದಲ್ಲಿ ವಸಂತ ಅವರ ಕಾಲು ಮುರಿದ ಹಿನ್ನೆಲೆಯಲ್ಲಿ, ಧರ್ಮಸ್ಥಳ ಸಂಸ್ಥೆಯ ಜನಮಂಗಲ ಕಾರ್ಯಕ್ರಮದಡಿ ವೀಲ್ಚೇರ್ ನೀಡಲಾಯಿತು. ಯೋಜನಾಧಿಕಾರಿ ಮಹಾದೇವ ನಾಯ್ಕ ಅವರು ವೀಲ್ಚೇರ್ ವಿತರಿಸಿ, ಅದರ ಸದುಪಯೋಗ ಪಡೆದುಕೊಂಡು ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.  

ಸಂಸ್ಥೆಯ ಈ ನೆರವಿಗೆ ಫಲಾನುಭವಿ ವಸಂತ ಮಲ್ಲಾಪುರ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕಿ ನೇತ್ರಾವತಿ ಗೌಡ, ಸೇವಾಪ್ರತಿನಿಧಿ ಸರಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ