ಬ್ಯಾಡ್ಗಿ

ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ: ಶಾಸಕ ಬಸವರಾಜ ಶಿವಣ್ಣನವರ

ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ: ಶಾಸಕ ಬಸವರಾಜ ಶಿವಣ್ಣನವರ
The contribution of the cooperative sector to the country's economic development is immense: MLA Bas


     ಬ್ಯಾಡಗಿ 21 : ಸಹಕಾರ ಕ್ಷೇತ್ರ ಬಲಿಷ್ಠವಾದರೆ ಗ್ರಾಮೀಣ ಆರ್ಥಿಕತೆ ಮತ್ತಷ್ಟು ಸದೃಢ. ದೇಶದ ಆರ್ಥಿಕತೆ ಅಭಿವೃದ್ಧಿ ಹೊಂದುವಲ್ಲಿ ಸಹಕಾರಿ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.ಪಟ್ಟಣದ ಟೀಚರ್ ಸೊಸೈಟಿಯಲ್ಲಿ ನಡೆದ 73 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದವರು ಸಹಕಾರ ಸಂಘಗಳು ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಗ್ರಾಮೀಣ ಜನರಿಗೆ ಆರ್ಥಿಕ ನೆರವು ನೀಡುವ ಮೂಲಕ ಸ್ವಾವಲಂಬನೆಗೆ ದಾರಿ ಮಾಡಿಕೊಡುತ್ತಿವೆ.

         ವಿಶೇಷವಾಗಿ ಕೃಷಿ ಕ್ಷೇತ್ರದ ಬೆಳವಣಿಗೆ, ರೈತರಿಗೆ ಸಾಲ ಸೌಲಭ್ಯ, ಉಳಿತಾಯದ ಮನೋಭಾವ ಬೆಳೆಸುವುದು ಹಾಗೂ ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಮೂಲಕ ಗ್ರಾಮೀಣ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ವೇಗ ನೀಡಬಹುದು. ಸಹಕಾರದ ತತ್ವದಡಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದಾಗ ಸಮಾಜದ ಹಾಗೂ ದೇಶದ ಪ್ರಗತಿ ಸಾಧ್ಯ ಎಂದು  ಹೇಳಿದರು.

          ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ  ಮಾತನಾಡಿ ದೇಶದ ಆರ್ಥಿಕತೆ ಹಾಗೂ ಅಭಿವೃದ್ಧಿ ಹೊಂದಲು ಸಹಕಾರಿ ಕ್ಷೇತ್ರ ಒಂದು ಶಕ್ತಿಯಾಗಿದ್ದು ಸಹಕಾರಿ ವ್ಯವಸ್ಥೆಯಲ್ಲಿ ಹಲವು ಬದಲಾವಣೆಯಾಗಿದೆ ಬ್ಯಾಂಕಿಂಗ್ ಕ್ಷೇತ್ರ ಇಂದು ದೊಡ್ಡ ಶಕ್ತಿಯಾಗಿ ಬೆಳೆದಿದೆ ಎಂದು ಹೇಳಿದರು. ಕೆಎಂಎಫ್ ನಿರ್ದೇಶಕ ಪ್ರಕಾಶ್ ಬನ್ನಿಹಟ್ಟಿ ಮಾತನಾಡಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ.ಹೈನುಗಾರಿಕೆಯ ಬೆಳವಣಿಗೆಯಲ್ಲಿ ಸ್ತ್ರೀ ಶಕ್ತಿಯ ಪಾತ್ರವೂ ಪ್ರಮುಖವಾದುದು. ರೈತರಿಗೆ ಸ್ವಾವಲಂಬಿಯಾಗಿ ಬದುಕಲು ಅವಕಾಶ ಕಲ್ಪಿಸಿದ ಸಂಸ್ಥೆ ಕೆಎಂಎಫ್ ಆಗಿದೆ.

            ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಇನ್ನಷ್ಟು ಹೆಚ್ಚಿನ ಮಂದಿ ಬರುವ ಅವಶ್ಯಕತೆಯಿದೆ. ದ.ಕ. ಹಾಲು ಒಕ್ಕೂಟವು ಸಹಕಾರಿ ಕ್ಷೇತ್ರದಲ್ಲಿ ಗಣನೀಯವಾದ ಸಾಧನೆಗೈದಿದೆ ಎಂದರು.ಕಾರ್ಯಕ್ರಮದ ಪ್ರಾಥಮಿಕವಾಗಿ ಎಮ್‌ಆರ್‌ಸಿ ವಿಕ್ರಂ ಕುಲಕರ್ಣಿ ಮಾತನಾಡಿದರು. ಕಾರ್ಯಕ್ರಮದ ಉಪನ್ಯಾಸ  ಜೀವರಾಜ್ ಛತ್ರದ ಮಾಡಿದರು.ಕಾರ್ಯಕ್ರಮದಲ್ಲಿ ಗಂಗಣ್ಣ ಎಲಿ.ಶಂಭನಗೌಡ ಪಾಟೀಲ.ವಕೀಲರಾದ ಅಂಬಲಿ. ವಿಜಯ್ ಮಾಳಗಿ. ಮಲ್ಲಿಕಾರ್ಜುನ್ ಕರಿ ಲಿಂಗಪ್ಪನವರ್‌. ಮಂಜನ ಗೌಡ ಲಿಂಗನಗೌಡ. ಬಿಸಿ ಲೋಕೇಶ್‌. ಶಿವರಾಜ್ ಗುಡಗೂರ. ಸುಭಾಷ್ ಗೌಡ ದ್ಯಾಮನಗೌಡ.ಬಸವರಾಜ ಸವಣೂರ. ಶಿವನಗೌಡ ಪಾಟೀಲ. ತಾಲೂಕಿನ  ಎಲ್ಲಾ ಸಹಕಾರಿ ಸಂಘಗಳ ಅಧ್ಯಕ್ಷರು.ಅಡಳಿತ ಮಂಡಳಿ ಸದಸ್ಯರು.ಮುಖ್ಯ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು. 


ಸುದ್ದಿ ಓದಿ