ಬ್ಯಾಡ್ಗಿ

ಬ್ಯಾಡಗಿ 13 ಕೋಟಿ ರೂ.ಗಳ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ರುದ್ರ​‍್ಪ ಲಮಾಣಿ ಚಾಲನೆ

ಬ್ಯಾಡಗಿ 13 ಕೋಟಿ ರೂ.ಗಳ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ರುದ್ರ​‍್ಪ ಲಮಾಣಿ  ಚಾಲನೆ


        ಬ್ಯಾಡಗಿ 20  : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಶ್ರಯದಲ್ಲಿ  ಪಟ್ಟಣದ ವ್ಯಾಪ್ತಿಯಲ್ಲಿ 13 ಕೋಟಿ.ರೂ.ಗಳ ವೆಚ್ಚದ ಗಜೇಂದ್ರಗಡ -ಸೊರಬ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ರುದ್ರ​‍್ಪ ಲಮಾಣಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಹಿಂದೆ ನಾನು ಇಲ್ಲಿಯ ಶಾಕನಾಗಿದ್ದಲೇ ಈ ರಸ್ತೆ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚೆ ನಡೆದಿತ್ತು,

         ಆದರೇ ಜನರ ಸಹಕಾರದ ಬಗ್ಗೆ ಅನುಮಾನಗೊಂಡು ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೈ ಹಾಕದೇ ಬೈ ಪಾಸ್ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು ಆದರೇ ಅನೇಕರು ಬೈ ಪಾಸ್ ರಸ್ತೆಗೆ ವಿರೊಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಮುಂದೂಡಿದ ಬಗ್ಗೆ ವಿವರಿಸಿದರಲ್ಲದೇ ಇಂದು ಸುಂದರವಾದ ರಸ್ತೆ ನಿರ್ಮಾಣವಾಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. 

             ಮಾಜಿ ಸಚಿವ ಶಿವಾನಂದ ಪಾಟೀಲೂ ಮಾತನಾಡಿ ನಾನು ಸಚಿವರಾಗಿದ್ದ ಅವಧಿಯಲ್ಲಿ ಎಪಿಎಂಸಿ ವತಿಯಿಂದ ಈ ರಸ್ತೆ ಅಭಿವೃದ್ಧಿಗೆ 13 ಕೋಟಿ ರೂ.ಗಳ ಅನುದಾನ ನೀಡಲಾಗಿತ್ತು, ಇಂದು ರಸ್ತೆ ಅಭಿವೃದ್ಧಿಯಾಗುತ್ತಿರುವುದು ಸಂತಸ ತಂದಿದೆ ಎಂದರು.ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ ಬ್ಯಾಡಗಿ ಮೆಣಸಿನಕಾಯಿ ಹೊಸ ತಳಿ ಅಭಿವೃದ್ಧಿ ಪಡಿಸಲು ಸರ್ಕಾರ ಸಚಿವರು ಮುಂದಾಗಬೇಕು.

             ಮಾರುಕಟ್ಟೆಗೆ ಸಧ್ಯ ಬರಲಿರುವ ಮೆಣಸಿನಕಾಯಿ 3 ತಿಂಗಳ ನಂತರ ಬಣ್ಣ ಮತ್ತು ರುಚಿ ಕಳೆದುಕೊಳ್ಳುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ 13 ಕೋಟಿ.ರೂ.ಗಳ ವೆಚ್ಚದ ಗಜೇಂದ್ರಗಡ -ಸೊರಬ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪಟ್ಟಣದ ಅನೇಕರು ತಮ್ಮ ಸ್ವಂತ ಜಾಗೆಯನ್ನು ಬಿಟ್ಟು ಕೊಟ್ಟು ತ್ಯಾಗ ಮಾಡಿದ್ದನ್ನು ಸ್ಮರಿಸಿದರು.

             ಈ ರಸ್ತೆ ಅಭಿವೃದ್ಧಿಯಾಗಲು ಅನೇಕ ಸಂಘ ಸಂಸ್ಥೆಗಳು ಹಾಗೂ ಪಟ್ಟಣದ ಜನತೆ, ಅಧಿಕಾರಿಗಳು ಸಹಕಾರ ನೀಡಿದ್ದರಿಂದ ಸುಂದರವಾದ ರಸ್ತೆ ನಿರ್ಮಾಣವಾಗಲು ಸಾಧ್ಯವಾಗಿದೆ. ಪಟ್ಟಣದಲ್ಲಿರುವ ಬಸವನಕಟ್ಟೆ ಅಭಿವೃದ್ಧಿಗೆ, ಹೊಸ್ ಬಸ್ ನಿಲ್ದಾಣ ಕಟ್ಟಲು ಅನುದಾನ ಮಂಜೂರಾತಿ ನೀಡಲಾಗಿದೆ ಎಂದರು. ನ್ಯಾಯವಾದಿ ಬಸಲಿಂಗಪ್ಪ ಶೆಟ್ಟರ, ಮಾಲತೇಶ ಅರಳಿಕಟ್ಟಿ, ಗಂಗಣ್ಣ ಯಲಿ ಮಾತನಾಡಿದರು.

            ಈ ಸಂದರ್ಭದಲ್ಲಿ ಎಸ್ಪಿ ಯಶೋದ ವಂಟಿಗೋಡಿ, ಹೆಚ್ಚುವರಿ ಡಿಸಿ ಎಲ್‌.ನಾಗರಾಜ, ಡಿವೈಎಸ್ಪಿ ಗಿರಿ ಮಲ್ಲಪ್ಪ ತಳಕಲ್,ತಹಶೀಲ್ದಾರ,   ಎನ್‌.ಟಿ.ರಘ, ಎಪಿಎಂಸಿ ಕಾರ್ಯದರ್ಶಿ ಡಿ ಆದರ್ಶ, ದುರ್ಗೇಶ ಗೋಣೆಮ್ಮನವರ, ಅಬ್ದುಲ್ ಮುನಾಫ್ ಯಲಿಗಾರ,ಬಸವರಾಜ ಸವಣೂರ,  ಸಂಭನಗೌಡ ಪಾಟೀಲ, ಸುರೇಶ ಹುಳಬುತ್ತಿ, ದಾನಪ್ಪ ಚೂರಿ ಸೇರಿದಂತೆ ಇತರರಿದ್ದರು. 


ಸುದ್ದಿ ಓದಿ