ಒಲಿಂಪಿಕ್ಸ್ ಕನಸು ನನಸಾಗಿಸಲು ಕಠಿಣ ತರಬೇತಿ ಅಗತ್ಯ: ಖೋ ಖೋ ಸಂಸ್ಥೆ ಸಂಸ್ಥೆ ಅಧ್ಯಕ್ಷ ಕೆ ಸಿ ಇಟ್ಟಿಗುಡಿ
ಬ್ಯಾಡಗಿ 18 : ಬೆಂಗಳೂರಿನಲ್ಲಿ ನ.19 ರಿಂದ 21 ರ ವರೆಗೆ 14 ವರ್ಷದ ಬಾಲಕಿಯರ ನಡೆಯುವ 5 ನೇ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಗುರಿಯೊಂದಿಗೆ ಹಾವೇರಿ ಜಿಲ್ಲಾ ಮಟ್ಟದ ಬಾಲಕಿಯರಿಗೆ ಬ್ಯಾಡಗಿ ತಾಲೂಕು ಕ್ರೀಡಾಂಗಣದಲ್ಲಿ ನಂ.11 ರಿಂದ 17 ವರೆಗೆ ಆಯೋಜಿಸಿದ್ದ ಖೋ-ಖೋ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಸಮವಸ್ತ್ರ ವಿತರಿಸುವ ಮೂಲಕ
ಮಾತನಾಡಿದ ಹಾವೇರಿ ಜಿಲ್ಲಾ ಖೋ ಖೋ ಸಂಸ್ಥೆ ಅಧ್ಯಕ್ಷ ಕೆ ಸಿ ಇಟ್ಟಿಗುಡಿ ಮಾತನಾಡಿ, “ಕ್ರೀಡೆಯಲ್ಲಿ ಸಾಧನೆ ಮಾಡಲು ಪ್ರತಿಭೆಯೊಂದೇ ಸಾಕಾಗುವುದಿಲ್ಲ. ನಿರಂತರ ಅಭ್ಯಾಸ, ಶಿಸ್ತು, ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮ ಅಗತ್ಯ. ಗ್ರಾಮೀಣ ಭಾಗದ ಬಾಲಕಿಯರಲ್ಲೂ ಅಪಾರ ಕ್ರೀಡಾ ಪ್ರತಿಭೆ ಇದ್ದು, ಅವರಿಗೆ ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ನೀಡಿದರೆ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ” ಎಂದು ಹೇಳಿದರು.
ಖೋ-ಖೋ ಆಟವು ದೈಹಿಕ ಸಾಮರ್ಥ್ಯದ ಜೊತೆಗೆ ತಂಡದ ಮನೋಭಾವ, ಸಮಯಪ್ರಜ್ಞೆ, ವೇಗ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸುತ್ತದೆ. ತರಬೇತಿಯಲ್ಲಿ ಭಾಗವಹಿಸಿರುವ ಬಾಲಕಿಯರು ಶಿಬಿರದಲ್ಲಿ ಕಲಿತ ಕೌಶಲ್ಯಗಳನ್ನು ನಿರಂತರ ಅಭ್ಯಾಸದ ಮೂಲಕ ಮತ್ತಷ್ಟು ಅಭಿವೃದ್ಧಿಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಜಿತೇಂದ್ರ ಸುಣಗಾರ ಮಾತನಾಡಿ “ಬಾಲಕಿಯರ ಕ್ರೀಡಾ ಪ್ರತಿಭೆಗೆ ಸಂಸ್ಥೆ ಸದಾ ಬೆನ್ನೆಲುಬಾಗಿ ನಿಲ್ಲಲಿದೆ. ಅವರ ಸಾಧನೆಗೆ ಅಗತ್ಯವಿರುವ ತರಬೇತಿ, ಪ್ರೋತ್ಸಾಹ ಮತ್ತು ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು” ಎಂದು ಉಪಾಧ್ಯಕ್ಷರು ಭರವಸೆ ನೀಡಿದರು. ನಂತರ ತರಬೇತಿಯಲ್ಲಿ ಭಾಗವಹಿಸಿದ ಬಾಲಕಿಯರಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ ಸಿ ಇಟ್ಟಿಗುಡಿ ಉಪಾಧ್ಯಕ್ಷರಾದ ಶ್ರೀ ಜಿತೇಂದ್ರ ಸುಣಗಾರ ಶ್ರೀ ಎಸ್ ಆರ್ ಬಡ್ಡಿವರು ಜಿಲ್ಲಾ ಖಜಾಂಚಿಯಾದ ಶ್ರೀ ಶಿವರಾಜ್ ಗುಂಡೆ ಹಾಗೂ ಬಸವರಾಜ್ ಬಸಪ್ಪನವರ. ಹನುಮಂತ್ ನೆಗಳೂರ. ಮಾಲತೇಶ್ ಪಾಟೀಲ್. ವಿದ್ಯಾರ್ಥಿಗಳು ಸೆರಿದಂತೆ ಉಪಸ್ಥಿತರಿದ್ದರು.