ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮೆಲ್ಲರ ಜವಾಬ್ದಾರಿ ಹಾವೇಮೂಲ್ ನಿರ್ದೇಶಕ ಪ್ರಕಾಶ್ ಬನ್ನಿಹಟ್ಟಿ
ಬ್ಯಾಡಗಿ 31: ಹಾಲು ಉತ್ಪಾದಕನೇ ನಂಬಿಕೆಯೇ ಒಡನಾಡಿಯಾದ ರಾಸು ಮೃತಪಟ್ಟ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ತಾಲೂಕಿನ ಹಿರೇಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಇಂದು ಭೇಟಿ ನೀಡಿ ಆಡಳಿತ ಸಭೆಯಲ್ಲಿ ಭಾಗಿಯಾಗಿ ರೈತ ಕುಟುಂಬಕ್ಕೆ ಹಾಲು ಉತ್ಪಾದಕರ ಕೆಎಂಎಫ್ ಸಂಘದ ವತಿಯಿಂದ ಪರಿಹಾರದ ಚೆಕ್ ವಿತರಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಹಾವೇಮೂಲ್ ನಿರ್ದೇಶಕ ಪ್ರಕಾಶ್ ಬನ್ನಿಹಟ್ಟಿ, ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಜಾನುವಾರುಗಳು ರೈತ ಕುಟುಂಬಗಳ ಜೀವನೋಪಾಯದ ಪ್ರಮುಖ ಆಧಾರವಾಗಿವೆ. ಇಂತಹ ಸಂದರ್ಭದಲ್ಲಿ ರಾಸು ಮೃತಪಟ್ಟರೆ ರೈತರಿಗೆ ಆರ್ಥಿಕವಾಗಿ ದೊಡ್ಡ ನಷ್ಟ ಉಂಟಾಗುತ್ತದೆ.
ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ರೈತರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘ ಸದಾ ರೈತರೊಂದಿಗೆ ನಿಲ್ಲಲಿದೆ ಎಂದು ತಿಳಿಸಿದರು.ಇಂದು ಅನ್ನದಾತನ ಬಾಳಿಗೆ ನೆರವಾಗಲು ರಾಜ್ಯ ಸರ್ಕಾರ ನಂದಿನಿ ಹಾಲಿನ ದರದಲ್ಲಿ ಲೀಟರಗೆ ರೂ. 8/- ಐತಿಹಾಸಿಕ ಏರಿಕೆ ಮಾಡಲಾಗಿದ್ದು (ರೂ. 7 ಉತ್ಪಾದಕರಿಗೆ, ರೂ. 1 ಅಭಿವೃದ್ಧಿಗೆ). ನವೆಂಬರ್ 1 ರಿಂದ ಜಾರಿಗೆ ಬರಲಿರುವ ಈ ಹೊಸ ದರವು ಜಿಲ್ಲೆಯ ಒಟ್ಟು ಕಾರ್ಯ ನಿರತ 460 ಸಂಘಳಿಂದ ಪ್ರತಿ ದಿನ 1 ಲಕ್ಷ 80 ಸಾವಿರ ಹಾಲು ಉತ್ಪಾದನೆ ಮಾಡುವ 23518 ಹಾಲು ಉತ್ಪಾದಕರಿಗೆ ್ಘ ರೈತ ಕುಲಕ್ಕೆ ಸಿಕ್ಕಿರುವ ದೀಪಾವಳಿ ಉಡುಗೊರೆ ಆಗಿದೆ.
*ಎಂದು ಮಾನ್ಯ ಮುಖ್ಯಮಂತ್ರಿಗಳಿಗೆ ಶುಭಾಶಯ ಕೋರಿದರು.ಈ ಸಂದರ್ಭದಲ್ಲಿ ಕಾಗಿನೆಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶಿವನಗೌಡ ಪಾಟೀಲ ಹಿರೇಹಳ್ಳಿ ಹಾಲು ಉತ್ಪಾದಕರೆ ಸಂಘದ ಪದಾಧಿಕಾರಿಗಳು, ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.