ಬ್ಯಾಡ್ಗಿ

ಬ್ಯಾಡಗಿ: ಸೇವಾ ಜ್ಯೋತಿ ಯಾತ್ರೆಗೆ ವಿರೂಪಾಕ್ಷಪ್ಪ ಬಳ್ಳಾರಿ ಚಾಲನೆ

ಬ್ಯಾಡಗಿ: ಸೇವಾ ಜ್ಯೋತಿ ಯಾತ್ರೆಗೆ ವಿರೂಪಾಕ್ಷಪ್ಪ ಬಳ್ಳಾರಿ ಚಾಲನೆ


ಬ್ಯಾಡಗಿ, ಅ. 9: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಾಗೂ ಸಾರ್ವಜನಿಕ ಸೇವೆಯಲ್ಲಿ 25 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ, ಬ್ಯಾಡಗಿ ತಾಲೂಕು ಬಿಜೆಪಿ ಮಂಡಲ ಮತ್ತು ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಸೇವಾ ಜ್ಯೋತಿ ಯಾತ್ರೆ ಹಾಗೂ ಬೈಕ್ ರ್ಯಾಲಿಗೆ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಚಾಲನೆ ನೀಡಿದರು.  

ಪಟ್ಟಣದ ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪದಿಂದ ಆರಂಭಗೊಂಡ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ ಸಲ್ಲಿಸಿದ 25 ವರ್ಷಗಳ ಜನಕೇಂದ್ರಿತ ಸೇವೆ, ಬದ್ಧತೆ ಮತ್ತು ದೇಶದ ಪ್ರಗತಿಯ ಸಂದೇಶವನ್ನು ಜನರಿಗೆ ತಲುಪಿಸುವುದು ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದರು.  

ಬೈಕ್ ರ್ಯಾಲಿಯು ದಾನಮ್ಮ ದೇವಾಲಯದವರೆಗೆ ಸಾಗಿತು.  

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ, ಮಾಜಿ ಪುರಸಭೆ ಅಧ್ಯಕ್ಷ ಬಸಣ್ಣ ಛತ್ರದ, ಶಿವಯೋಗಿ ಶಿರೂರು, ಗಣೇಶ ಅಚಲಕರ, ವಿನಯಕುಮಾರ ಹಿರೇಮಠ, ಎಸ್‌.ಎನ್‌. ಬಾರ್ಕಿ, ಲಿಂಗ ರಾಜ್ ಕಮ್ಮೂರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ