ಬ್ಯಾಡ್ಗಿ

ಧರ್ಮಸ್ಥಳ ಸಂಸ್ಥೆಯ ಕೊಡುಗೆ ಅಪಾರ : ಮಹಾದೇವ ನಾಯ್ಕ

ಧರ್ಮಸ್ಥಳ ಸಂಸ್ಥೆಯ ಕೊಡುಗೆ ಅಪಾರ  : ಮಹಾದೇವ ನಾಯ್ಕ

ಬ್ಯಾಡಗಿ 24 : ಪಟ್ಟಣದಲ್ಲಿರುವ ತಾಲೂಕಾ ಸಾಹಿತ್ಯ ಪರಿಷತ್ ಸಭಾಭವನದಲ್ಲಿರುವ ಶೌಚಾಲಯ ನಿರ್ಮಾಣಕ್ಕೆ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶೌಚಾಲಯ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ತಾಲೂಕಾ ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಮಹಾದೇವ ನಾಯ್ಕ 45 ಸಾವಿರದ ಚೆಕ್ ವಿತರಣೆ ಮಾಡಿದರು. ಸಂದರ್ಭದಲ್ಲಿ ಮಾತನಾಡಿದ ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿಗಳು, ಸಾರ್ವಜನಿಕರಿಗೆ ಅನುಕೂಲವಾಗುವ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಂಸ್ಥೆ ಸದಾ ಆದ್ಯತೆ ನೀಡುತ್ತಿದೆ. ಸಮಾಜಮುಖಿ ಕಾರ್ಯಗಳ ಮೂಲಕ ಜನರ ಅಗತ್ಯಗಳಿಗೆ ಸ್ಪಂದಿಸುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶೌಚಾಲಯ ನಿರ್ಮಾಣಕ್ಕೆ ನೆರವು ನೀಡಿರುವುದರಿಂದ ಭವನಕ್ಕೆ ಆಗಮಿಸುವ ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಚೆಕ್ ಸ್ವೀಕರಿಸಿದ ಕ.ಸಾಪ ತಾಲೂಕ ಘಟಕದ ಅಧ್ಯಕ್ಷ ಬಿ. ಎಂ. ಜಗಾಪೂರ  ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಡಾ. ಡಿ. ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳು ಸಂಕಷ್ಟದಲ್ಲಿರುವ ಅನೇಕ ಕುಟುಂಬಗಳಿಗೆ ಆಸರೆಯಾಗಿವೆ. ಕುಟುಂಬಗಳ ಕಣ್ಣೀರು ಒರೆಸುವ ಇಂತಹ ಜನಪರ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿದ್ದು, ಸಂಸ್ಥೆಯ ಸೇವೆ ಅಭಿನಂದನಾರ್ಹವಾಗಿದೆ.   ಗ್ರಾಮೀಣ ಪ್ರದೇಶದ ಜನರ ಬದುಕು ಹಸನಾಗಲು ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಪ್ರತೀ ವರ್ಷ ತಾಲೂಕಿನಲ್ಲಿ  ಕೆರೆ ಅಭಿವೃದ್ದಿ. ಹಾಲು ಉತ್ಪಾದನೆ ಹಾಗೂ ದೇವಸ್ಥಾನ ಜಿರ್ಣೋದ್ಧಾರ ಇನ್ನೂ ಅನೇಕ  ಉತ್ತಮ ಸಮಾಜದ ನಿರ್ಮಾಣ ಕಾರ್ಯದಲ್ಲಿ ಶ್ರೀಕ್ಷೇತ್ರ ಕೆಲಸ ಮಾಡಲಾಗುತ್ತಿದೆ.ಧರ್ಮಸ್ಥಳ ಸಂಸ್ಥೆಯು ನಮ್ಮ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಉತ್ತಮ ಶೌಚಾಲಯ ನಿರ್ಮಾಣ ಮಾಡಲು 45 ಸಾವಿರ ರೂ.ಗಳನ್ನು ಕೊಡುಗೆಯಾಗಿ  ನೀಡಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಸಹಕಾರಕ್ಕೆ ತಾಲೂಕಾ ಸಾಹಿತ್ಯ ಪರಿಷತ್ ಯಾವತ್ತಿಗೂ ಚಿರಋಣಿಯಾಗಿದೆ ಎಂದರು.ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಆನಂದ ಮುದುಕಣ್ಣನವರ, ಎ. ಜಿ ಮೌಲಾಸಾಬನವರ, ರಾಜಶೇಖರ ಹೊಸಳ್ಳಿ, ಪ್ರಭುಗೌಡ ಪಾಟೀಲ, ಆರ್‌. ಡಿ. ವಾಲ್ಮೀಕಿ, ಬಿ. ಬಿ. ಹಂಸಭಾವಿ. ಕುಮಾರಿ ನೇತ್ರಾವತಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ