ಬ್ಯಾಡ್ಗಿ

ಬೆಲೆ ಏರಿಕೆಯ ರಾಜ್ಯ ಸರ್ಕಾರದ ಸಾಧನೆ ಮಾಜಿ ಶಾಸಕ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಕಿಡಿ

ಬೆಲೆ ಏರಿಕೆಯ ರಾಜ್ಯ ಸರ್ಕಾರದ ಸಾಧನೆ ಮಾಜಿ ಶಾಸಕ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಕಿಡಿ
Former MLA and District President Virupakshappa Ballari lashes out, calling price hikes an 'achieve


            ಬ್ಯಾಡಗಿ 17: ಜನಸಾಮಾನ್ಯರ ಬದುಕಿಗೆ ಹೊರೇ. ಹಾಲು ಬಸ್ ದರ ಏರಿಕೆಯಿಂದ ಸರ್ಕಾರದ ವಿರುದ್ಧ ಆಕ್ರೋಶ. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಹೇಗಿದೆ ಹಾಗೂ ಸಾರಿಗೆ ದರ ಹೆಚ್ಚಳಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾಅಧ್ಯಕ್ಷ. "ಕಾಂಗ್ರೆಸ್ ಸರ್ಕಾರದ ಸಾಧನೆಯ ಅಭಿವೃದ್ಧಿಯಲ್ಲ. ದಿನನಿತ್ಯದ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡುವುದೇ ಆಗಿದೆ ಎಂದು ಕಿಡಿಕಾರಿದ್ದರು .ಇಂದು ಪಟ್ಟಣದ ಹಳೆ ಪುರಸಭೆ ಎದುರು ತಾಲೂಕಿನ ಬಿಜೆಪಿ ಯುವ ಮೋರ್ಚಾ ವತಿಯಿಂದ  ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದವರು.

             ಹಾಲಿನ ಬೆಲೆ ಲೀಟರ್ ಗೆ 8 ರೂಪಾಯಿ ಹೆಚ್ಚಳವಾಗಿದ್ದು ಬಸ್ ದರದಲ್ಲೂ ಏರಿಕೆ ಮಾಡಲಾಗಿದೆ ಇದರಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಬಡವರು ಮಧ್ಯಮ ವರ್ಗದವರು ಕುಲಿ ಕಾರ್ಮಿಕರು ಹಾಗೂ ರೈತರ ಮೇಲೆ ಮತ್ತಷ್ಟು ಹೊರೆ ಬಿದ್ದಿದೆ . ಎಂದು ಆರೋಪಿಸಿದರು.ಒಂದು ಕೈಯಲ್ಲಿ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಉಚಿತ ಸೌಲಭ್ಯ ನೀಡುತ್ತೇವೆ ಎಂದು ಹೇಳಿ ಮತ್ತೊಂದು ಕೈಯಲ್ಲಿ ಬೆಲೆ ಏರಿಕೆ ಮೂಲಕ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಇದು ಯಾವ ರೀತಿಯ ಜನಪರ ಆಡಳಿತ ಎಂದು ಶಾಸಕರು ಪ್ರಶ್ನಿಸಿದರು.

             ಸರ್ಕಾರ ಕೂಡಲೇ ಬೆಲೆ ಏರಿಕೆಯನ್ನು ನಿಯಂತ್ರಿಸಿ ಜನಸಾಮಾನ್ಯರ ಮೇಲಿನ ಹೆಚ್ಚುವರಿ ಆರ್ಥಿಕ ಅವರೆಯನ್ನು ಕಡಿಮೆ ಮಾಡಬೇಕು ಇಲ್ಲದಿದ್ದರೆ ಜನರ ಆಕ್ರೋಶಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು. ಜನರಿಗೆ ಗ್ಯಾರಂಟಿ ಬೇಕಿಲ್ಲ ಬದುಕಲು ಅನುಕೂಲ ಬೇಕು ಸರ್ಕಾರಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಜಿಲ್ಲಾಧ್ಯಕ್ಷರು ವಾಗ್ದಾಳಿ ಮಾಡಿದರು.ತಾಲೂಕು ಮಂಡಲದ ಅಧ್ಯಕ್ಷ ನಿಂಗಪ್ಪ ಭಟ್ಟಲಕಟ್ಟಿ ಮಾತನಾಡಿ ಬಿಜೆಪಿ , ‘ಸಾರಿಗೆ ದರ ಏರಿಕೆಯಾಗಿರುವುದನ್ನು ನೋಡಿದರೆ ನಡೆದುಕೊಂಡು ಹೋಗುವುದೇ ಉತ್ತಮ ಅನ್ನಿಸುತ್ತದೆ.

             ಹಾಲಿನ ದರವನ್ನು ಒಮ್ಮೆಲೇ ಹೆಚ್ಚಳ ಮಾಡಲಾಗಿದೆ. ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ಹಾಲಿನ ದರ ಏರಿಕೆ ಆಗಿದ್ದರೂ, ಹೈನುಗಾರರಿಗೆ ಪ್ರೋತ್ಸಾಹಧನ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಹೈನುಗಾರರ ಹೆಸರಿ ನಲ್ಲಿ ದರ ಹೆಚ್ಚಳ ಮಾಡಿದೆ’ ಎಂದರು.ಪ್ರತಿಭಟನೆಯಲ್ಲಿ ಮುಖಂಡರಾದ ಮುರಿಗೆಪ್ಪ ಶೆಟ್ಟರ್‌.ಶಂಕರಗೌಡ ಪಾಟೀಲ್‌. ಸುಭಾಷ್ ಮಳಗಿ. ಸುರೇಶ್ ಉದ್ಯೋಗಣ್ಣನವರಿ​‍್ಜತೆಂದ್ರ ಸುಣಗಾರ.ವಿಜಯ ಮಾಳಗಿ.ನಾಗರಾಜ ಹಾವನೂರ. ಲಿಂಗರಾಜ ಆಡಿನವರ. ವಿನಾಯಕ ಕಂಬಳಿ. ಪರಶುರಾಮ್ ಉಜಿನಿ ಕೊಪ್ಪ. ಮಹಿಳಾ ಮುಖಂಡರು.ಯುವ ಮೋರ್ಛಾ ಮುಖಂಡರು. ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ