ಎಸ್.ಎಸ್ಎಲ್.ಸಿ.-ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ
ಲೋಕದರ್ಶನ ವರದಿ
ಬೆಳಗಾವಿ 18 : ಬೆಳಗಾವಿಯ ವಿಪ್ರ ಮಹಿಳಾ ಮಂಡಳದ ವತಿಯಿಂದ ದಸರಾ ದೀಪಾವಳಿ ಹಬ್ಬಗಳ ಸಂಭ್ರಮವನ್ನುಅತ್ಯಂತ ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಭುವನೇಶ್ವರಿಉತ್ಸವದ ಅಂಗವಾಗಿ ನಡೆದ ನಾಟಕ ಹಾಗೂ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಮತ್ತು ಪರಿಶ್ರಮವನ್ನು ಮೆರೆದ ಮಂಡಳದ ಸದಸ್ಯರನ್ನು ಅಭಿನಂದಿಸಲಾಯಿತು. ಇದರೊಂದಿಗೆ ಮಕ್ಕಳ ದಿನಾಚರಣೆ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿಪ್ರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನಡಿ ಪ್ರತಿಭಾ ಪುರಸ್ಕಾರವನ್ನೂ ನೆರವೇರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಧಾರವಾಡದಖ್ಯಾತ ಲೇಖಕರಾದ ವಿನಾಯಕ ಇನಾಮದಾರ್ ಅವರು ಆಗಮಿಸಿದ್ದರು.ಇತ್ತೀಚೆಗೆಅವರು ರಚಿಸಿರುವ ’ರಾಮಪಥ’ ಲೇಖನಮಾಲೆ ಓದುಗರ ಗಮನ ಸೆಳೆದಿದೆ.ಅಲ್ಲದೆ, ವಿಪ್ರ ಮಹಿಳಾ ಮಂಡಳದ ವತಿಯಿಂದ ಪ್ರದರ್ಶಿಸಲಾದ ’ಭೂಮಿಯ ಮಗಳು’ ನಾಟಕದ ರಚನಾಕಾರರೂ ಅವರೇ ಆಗಿರುವುದರಿಂದ, ಈ ವಿಶೇಷ ಸಮಾರಂಭಕ್ಕೆಅವರ ಉಪಸ್ಥಿತಿ ಮತ್ತಷ್ಟು ಮೆರುಗು ನಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಳದ ಸದಸ್ಯರಾದ ಶ್ರೀಮತಿ ವೀಣಾ ಹೆಗಡೆಅವರು ವಹಿಸಿದ್ದರು.