ಬಳ್ಳಾರಿ

ಒಂದು ದೇಶ ಹಲವು ವೈವಿಧ್ಯಮಯ ಸಂಸ್ಕೃತಿ ಆದರ್ಶ ವಿದ್ಯಾಲಯದಲ್ಲಿ ಕಾಣಬಹುದು : ಡಾಕ್ಟರ್ ಶಿವಲಿಂಗಪ್ಪ ಹಂದಿಹಾಳ್

ಒಂದು ದೇಶ ಹಲವು ವೈವಿಧ್ಯಮಯ ಸಂಸ್ಕೃತಿ  ಆದರ್ಶ ವಿದ್ಯಾಲಯದಲ್ಲಿ ಕಾಣಬಹುದು : ಡಾಕ್ಟರ್ ಶಿವಲಿಂಗಪ್ಪ ಹಂದಿಹಾಳ್

       ಬಳ್ಳಾರಿ. ನ. 18 :  ಜಿಂದಾಲ್ ಆದರ್ಶ ವಿದ್ಯಾಲಯದಲ್ಲಿ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಈ ಶಾಲೆಯಲ್ಲಿ ನನಗೆ ಸಮಗ್ರ ಭಾರತವನ್ನೇ ಕಂಡ ಅನುಭವವಾಯಿತು” ಎಂದು  ಭಾವನೆಗಳನ್ನು ಹಂಚಿಕೊಂಡರು. ವಿವಿಧ ಭಾಷೆ, ಸಂಸ್ಕೃತಿ ಮತ್ತು ಪ್ರದೇಶಗಳಿಂದ ಬಂದ ವಿದ್ಯಾರ್ಥಿಗಳು ಒಂದೇ ವಿದ್ಯಾಸಂಸ್ಥೆಯಲ್ಲಿ ಸೌಹಾರ್ದತೆಯಿಂದ ಕಲಿಯುತ್ತಿರುವುದು ಭಾರತದ ಏಕತೆಯ ಪ್ರತೀಕವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮಕ್ಕಳ ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ  ಡಾ. ಶಿವಲಿಂಗಪ್ಪ ಹಂದಿಹಾಳ್  ಅಭಿಪ್ರಾಯಪಟ್ಟರು.  

           ಅವರು ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಜಿಂದಾಲ್ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಈ ಶಾಲೆಯಲ್ಲಿ ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಾದ ಒಂದು ದೇಶ ಹಲವು ಭಾಷೆ ಹಲವು ಸಂಸ್ಕೃತಿ ಎನ್ನುವಂತೆ ಒಂದು ಶಾಲೆಯಲ್ಲಿ ವಿವಿಧ ರಾಜ್ಯಗಳ ವಿದ್ಯಾರ್ಥಿಗಳನ್ನು ಮತ್ತು ವೈವಿಧ್ಯಮಯ  ಸಂಸ್ಕೃತಿಯನ್ನು ಕಾಣಬಹುದಾಗಿದೆ ಎಂದರು.  

           ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾರ್ಯರಾದ  ಈಶ್ವರಿ ಶರ್ಮಾ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕರ್ನಾಟಕ ರಾಜ್ಯೋತ್ಸವದ ಮಹತ್ವ ಹಾಗೂ ಕನ್ನಡ ಭಾಷೆಯ ವೈಶಿಷ್ಟ್ಯವನ್ನು ವಿವರಿಸಿದರು. ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಸ್ಮರಿಸಿದ ಅವರು, ಕನ್ನಡಿಗರ ಹೃದಯವಂತಿಕೆ, ಆತಿಥ್ಯ ಮತ್ತು ಮಾನವೀಯ ಮೌಲ್ಯಗಳನ್ನು ಕೊಂಡಾಡಿದರು. ವಿದ್ಯಾರ್ಥಿಗಳು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು, ಕನ್ನಡ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸಬೇಕು ಎಂದು ಕರೆ ನೀಡಿದರು.  

            ಕನ್ನಡ ಭಾಷಾ ವಿಭಾಗದ ವತಿಯಿಂದ ಆಯೋಜಿಸಲಾದ ಈ ರಾಜ್ಯೋತ್ಸವ ಕಾರ್ಯಕ್ರಮವು ಕನ್ನಡ ್ಣೂಳ್ದಹಿ್ದೂಳ್ತ, ಸಾಹಿತ್ಯ, ಸಂಸ್ಕೃತಿ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶವನ್ನು ಸಾರುವ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅತಿಥಿಗಳ ಮನದಲ್ಲಿ ಕನ್ನಡದ ಅಭಿಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿತು. ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಒಂದಾಗಿ ಭಾಗವಹಿಸಿದ್ದ ಈ ಕಾರ್ಯಕ್ರಮವು “ವೈವಿಧ್ಯದಲ್ಲಿ ಏಕತೆ ಹಿ ಕನ್ನಡದ ನೆಲದಲ್ಲಿ ಭಾರತದ ಹೃದಯ” ಎಂಬ ಸಂದೇಶವನ್ನು ಸಾರಿತು.  ಕಾರ್ಯಕ್ರಮದಲ್ಲಿ ಬಸರಕೋಡು ನಾಗರಾಜ್ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ನೂರಾರು ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು ಕೊನೆಯಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಲೆಯನ್ನು ಪ್ರದರ್ಶಿಸಿದರು. 


ಸುದ್ದಿ ಓದಿ