ಮನೆಯ ಬಾಗಿಲು ಮುರಿದು ಬಂಗಾರ ಬೆಳ್ಳಿ ಕಳ್ಳತನ
ಬ್ಯಾಡಗಿ 18 ; ಪಟ್ಟಣದ ಛತ್ರ ರಸ್ತೆಯ ನಿವಾಸಿ ಮಲ್ಲಿಕಾರ್ಜುನ್ ದೇಸೂರ ಎಂಬುವರ ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ .ಬೆಳ್ಳಿ ಹಾಗೂ ನಗದು ದೊಚಿಕೊಂಡು ಕಳ್ಳರು ತಂಡ ಪರಾರಿಯಾಗಿದ ಘಟನೆ ಶನಿವಾರ ಜರುಗಿದೆ.
ಪಟ್ಟಣದ ಛತ್ರ ರಸ್ತೆಯಲ್ಲಿ ಬರುವ ಮಲ್ಲಿಕಾರ್ಜುನ ತಿರಕಪ್ಪ ದೇಸೂರ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ ಶನಿವಾರ ಬೆಳಗ್ಗೆ ಸುಮಾರು ಒಂದರಿಂದ ಎರಡು ಗಂಟೆ ಆಸುಪಾಸಿನಲ್ಲಿ ರಾತ್ರಿ ಸಮಯದಲ್ಲಿ ಯಾವುದೇ ಶಬ್ಧವಾಗದಂತೆ ಮನೆಗೆ ನುಗ್ಗಿದ ಕಳ್ಳರ ತಂಡ ಮನೆಯ ಎರಡು ಬೀರುಗಳು ಬಾಗಿಲು ಮುರಿದು.
ಅದರಲ್ಲಿದ್ದ ಸುಮಾರು ಐದು ತಲೆ ಬಂಗಾರ ಮೂರು ತೊಲೆ ಬೆಳ್ಳಿ ಹಾಗೂ 25000 ಆಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.ಅವರ ಅಣ್ಣತಮ್ಮಂದಿರು ಪಕ್ಕದ ಮನೆಯಲ್ಲಿ ವಾಸವಿದ್ದು ಸುಳಿವೆ ಇಲ್ಲದ ಹಾಗೆ ಕಳ್ಳತನ ನಡೆಸಿದ್ದಾರೆ ಇದರಿಂದ ಪಟ್ಟಣದ ಜನತೆಗೆ ಆತಂಕ ಮೂಡಿದಂತಾಗಿದೆ.
ಕಳ್ಳತನದ ವಿಷಯ ತಿಳಿಯುತ್ತಿದ್ದಂತೆ ಬ್ಯಾಡಗಿ ಪೊಲೀಸ್ ಸರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು ನಂತರ ಶ್ವಾನದಳದ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು ಪರೀಶೀಲನೆ ನಡೆಸಿದ್ದಾರೆ ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.