ಮುಂದಗೋಡ

ಪ್ರತಿಭಾ ಕಾರಂಜಿಯಲ್ಲಿ ಕಂಚಿಕೊಪ್ಪ ಶಾಲಾ ವಿದ್ಯಾರ್ಥಿಗಳ ಸಾಧನೆ

ಪ್ರತಿಭಾ ಕಾರಂಜಿಯಲ್ಲಿ ಕಂಚಿಕೊಪ್ಪ ಶಾಲಾ ವಿದ್ಯಾರ್ಥಿಗಳ ಸಾಧನೆ


ಲೋಕದರ್ಶನ ವರದಿ  

          ಮುಂಡಗೋಡ  20: ತಾಲೂಕಿನ ಅಟ್ಟಣಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಂಚಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಪ್ರಥಮ ಬಹುಮಾನ: ಹಿರಿಯರ ವಿಭಾಗದ ದೇಶಭಕ್ತಿ ಗೀತೆಯಲ್ಲಿ ಪ್ರೀತಿ ಎಂ. ನಾಯ್ಕ, ಚಿತ್ರಕಲೆಯಲ್ಲಿ ತನುಶ್ರೀ ಡಿ. ಖವಣೇವಾಡಕರ್ ಹಾಗೂ ಕಿರಿಯರ ವಿಭಾಗದ ದೇಶಭಕ್ತಿ ಗೀತೆಯಲ್ಲಿ ಧನಶ್ರೀ ವಿ. ನಾಯ್ಕ ಪ್ರಥಮ ಸ್ಥಾನ ಗಳಿಸಿದ್ದಾರೆ. 

           ದ್ವಿತೀಯ ಬಹುಮಾನ: ಹಿರಿಯರ ವಿಭಾಗದಲ್ಲಿ ಮಣಿಕಂಠ ಆರ್‌. ಪೂಜಾರಿ, ಅಭಿನಯ ಗೀತೆಯಲ್ಲಿ ಧನ್ಯಾ ಜಿ. ನಾಯ್ಕ ಹಾಗೂ ಕಿರಿಯರ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ದೀಕ್ಷಾ ವಿ. ಮಡಿವಾಳ ಮತ್ತು ಅಭಿನಯ ಗೀತೆಯಲ್ಲಿ ಧನಶ್ರೀ ವಿ. ನಾಯ್ಕ ದ್ವಿತೀಯ ಬಹುಮಾನ ಪಡೆದಿದ್ದಾರೆ. ತೃತೀಯ ಬಹುಮಾನ: ಹಿರಿಯರ ವಿಭಾಗದ ಭಕ್ತಿಗೀತೆಯಲ್ಲಿ ಪ್ರೀತಿ ಎಂ. ನಾಯ್ಕ, ಕಥೆ ಹೇಳುವ ಸ್ಪರ್ಧೆಯಲ್ಲಿ ವರ್ಷಿತಾ ಎಸ್‌. ಮಡಿವಾಳ ಹಾಗೂ ಕಿರಿಯರ ವಿಭಾಗದ ಆಶುಭಾಷಣದಲ್ಲಿ ಮಣಿಕಂಠ ಎಂ. ನಾಯ್ಕ ತೃತೀಯ ಬಹುಮಾನ ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಪಾಲಕರು, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಶಿಕ್ಷಕರ ಕಾರ್ಯಕ್ಕೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. 


ಸುದ್ದಿ ಓದಿ