ಗದಗ

ಬಟ್ಟೂರು ಗ್ರಾಮದ ನಿಟ್ಟೂರು ಕೆರೆ ಹೂಳೆತ್ತುವ ಕಾಮಗಾರಿ ಬಲು ಜೋರು :ವಿಬಿಜಿ ರಾಮ್‌ಜಿ ಗ್ರಾಮೀಣ ಜನರಿಗೆ ವರದಾನ

ಬಟ್ಟೂರು ಗ್ರಾಮದ ನಿಟ್ಟೂರು ಕೆರೆ ಹೂಳೆತ್ತುವ ಕಾಮಗಾರಿ ಬಲು ಜೋರು :ವಿಬಿಜಿ ರಾಮ್‌ಜಿ ಗ್ರಾಮೀಣ ಜನರಿಗೆ ವರದಾನ
Desilting work at Nitturu Lake in Batturu village in full swing: A boon for rural residents – VBG Ra

           ಲಕ್ಷ್ಮೇಶ್ವರ 20 : ಬರದ ನಡುವೆ ಸರ್ಕಾರದ ಯೋಜನೆ ಬಡವರಿಗೆ ವರದಾನ: ಶ್ರಮದೊಂದಿಗೆ ಮೂಕ ಜೀವಿಗಳ ದಾಹ ತಣಿಸಲು ಕೆರೆ ಹೂಳೆತ್ತಲು ಮುಂದಾದ ಬಟ್ಟೂರು ಜನತೆ! ರಡಾದ ಭೂಮಿಗೆ ಜೀವತುಂಬಿದ ಶ್ರಮದ ಕೈಗಳು: ಬಟ್ಟೂರು ಗ್ರಾಮದ ನಿಟ್ಟೂರು ಮತ್ತು ಶೆಟ್ಟಿಕೆರೆ ಗ್ರಾಮದ ’ಕೆರೆಗೆ’ ಮರುಜೀವ; ಗ್ರಾಮೀಣರಿಗೆ ಕೈಹಿಡಿದ ವರದಾನ! ಪ್ರಕೃತಿ ಮುನಿದು ಬರದ ಛಾಯೆ ಆವರಿಸಿದಾಗ ಹಳ್ಳಿಗಾಡಿನ ಜನತೆ ಸಂಕಷ್ಟಕ್ಕೀಡಾಗುವುದು ಸಹಜ.

          ಆದರೆ, ಇಂತಹ ಕಷ್ಟದ ಕಾಲದಲ್ಲೂ ಸರ್ಕಾರದ ಸಕಾಲಿಕ ಯೋಜನೆಗಳು ಮತ್ತು ಸ್ಥಳೀಯರ ಜನಪರ ಕಾಳಜಿ ಒಂದಾದರೆ ಬದುಕು ಹೇಗೆ ಹಸನಾಗುತ್ತದೆ ಎಂಬುದಕ್ಕೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಪಂ ವ್ಯಾಪ್ತಿಯ ಗ್ರಾಮವು ಜೀವಂತ ಉದಾಹರಣೆಯಾಗಿದೆ. ವಿಬಿಜಿ ರಾಮ್ಜಿ ಯೋಜನೆಯು ಇಲ್ಲಿನ ಬಡ ಜನರಿಗೆ ನಿಜಕ್ಕೂ ದೊಡ್ಡ ವರದಾನವಾಗಿ ಪರಿಣಮಿಸಿದ್ದು, ಇದರ ಸದುಪಯೋಗ ಪಡೆದುಕೊಂಡಿರುವ ಗ್ರಾಮಸ್ಥರು ಮಾದರಿ ಹೆಜ್ಜೆ ಇಟ್ಟಿದ್ದಾರೆ.  

                 ಬರದ ಬೇಗೆಯಲ್ಲಿ ಬಡವರಿಗೆ ಆಸರೆಯಾದ ಜಲಸಂಜೀವಿನಿ  

ಮಳೆ ಇಲ್ಲದೆ ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡು, ಕೂಲಿ ಅರಸಿ ಪಟ್ಟಣ,ಗೋವಾ ಮಂಗಳೂರು ಬೆಂಗಳೂರು ಮಹಾರಾಷ್ಟ್ರ ಕೇರಳ ಕಡೆಗೆ ಗುಳೆ ಹೋಗಬೇಕಿದ್ದ ಅನಿವಾರ್ಯತೆಯನ್ನು ವಿಬಿಜಿ ರಾಮ್ಜಿ ಯೋಜನೆಯು ತಪ್ಪಿಸಿದೆ.

                ಗ್ರಾಮದ ಹಿರಿಯರು, ಯುವಕ ಮಹಿಳೆಯರು ಒಟ್ಟಾಗಿ ಕೈಯಲ್ಲಿ ಗುದ್ದಲಿ ಸಲಿಕೆ ಹಾರೆ-ಪಿಕಾಸಿ ಬುಟ್ಟಿ ಹಿಡಿದು ತಮ್ಮೂರಿನ ಐತಿಹಾಸಿಕ ನಿಟ್ಟೂರು ಕೆರೆಯ ಅಂಗಳಕ್ಕಿಳಿದು ಅಭಿವೃದ್ಧಿಪಡಿಸುತ್ತಿದ್ದಾರೆ. ಇದರಿಂದ ಬಡ ಕಾರ್ಮಿಕರಿಗೆ ಸ್ವಗ್ರಾಮದಲ್ಲೇ ಕೈತುಂಬಾ ಕೂಲಿ ಸಿಕ್ಕಂತಾಗಿದ್ದು, ಅವರ ಆರ್ಥಿಕ ಸಂಕಷ್ಟಕ್ಕೆ ದೊಡ್ಡ ಮಟ್ಟದ ಭರವಸೆ ಸಿಕ್ಕಿದೆ.  

               ಸರ್ಕಾರದ ಕೆಲಸದೊಂದಿಗೆ ಕೈಜೋಡಿಸಿದ ಜನಪರ ಕಾಳಜಿ:  

ಕೇವಲ ಸರ್ಕಾರಿ ಕೆಲಸಕ್ಕೆ ಸೀಮಿತವಾಗದೆ, ಬಟ್ಟೂರು ಜನತೆ ತಮ್ಮ ಸ್ವಂತ ಜವಾಬ್ದಾರಿಯಂತೆ ಕೆರೆ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆರೆಯ ಸಂಪೂರ್ಣವಾಗಿ ಹೂಳೆತ್ತಿ ಸ್ವಚ್ಛಗೊಳಿಸುತ್ತಿದ್ದಾರೆ.   

ತೀವ್ರ ಬರಗಾಲದ ಈ ದಿನಗಳಲ್ಲಿ ಕೇವಲ ಮನುಷ್ಯರಷ್ಟೇ ಅಲ್ಲದೆ, ಮೂಕ ಜೀವಿಗಳಾದ ದನಕರುಗಳು, ಆಡು-ಕುರಿಗಳು ಹಾಗೂ ಸುತ್ತಮುತ್ತಲಿನ ಪ್ರಾಣಿ-ಪಕ್ಷಿಗಳು ಕುಡಿಯುವ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಇದನ್ನು ಮನಗಂಡು, ಕೆರೆಯನ್ನು ಸ್ವಚ್ಛಗೊಳಿಸುವುದರ ಜೊತೆಗೆ ಪ್ರಾಣಿ-ಪಕ್ಷಿಗಳಿಗೆ ನೀರಿನ ಅನುಕೂಲ ಕಲ್ಪಿಸುವ ವಿನೂತನ ಹಾಗೂ ಮಾನವೀಯ ಕಾರ್ಯಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.  

              ಸರ್ಕಾರದ ಯೋಜನೆಗಳು ಸರಿಯಾದ ರೀತಿಯಲ್ಲಿ ಜಾರಿಗೆ ಬಂದರೆ ಬಡ ಜನರಿಗೆ ಹೇಗೆ ಆಸರೆಯಾಗಬಹುದು ಮತ್ತು ಸ್ಥಳೀಯರ ಸ್ವಯಂಪ್ರೇರಿತ ಕಾಳಜಿ ಸೇರಿಕೊಂಡರೆ ವ್ಯವಸ್ಥೆ ಹೇಗೆ ಬದಲಾಗಬಹುದು ಎಂಬುದಕ್ಕೆ ಬಟ್ಟೂರು ಗ್ರಾಮ ಪಂಚಾಯಿತಿಯ ಈ ಯಶೋಗಾಥೆ ರಾಜ್ಯದ ಇತರೆ ಬರಪೀಡಿತ ಪ್ರದೇಶಗಳಿಗೂ ಮಾದರಿಯಾಗಬೇಕಿದೆ. 


ಸುದ್ದಿ ಓದಿ