ಹೂವಿನ ಹಡಗಲಿ

ಮನಸ್ಸಿನ ಉಲ್ಲಾಸಕ್ಕೆ ಸುಗಮ ಸಂಗೀತ ಸಹಕಾರಿ

ಮನಸ್ಸಿನ ಉಲ್ಲಾಸಕ್ಕೆ ಸುಗಮ ಸಂಗೀತ ಸಹಕಾರಿ


ಲೋಕದರ್ಶನ ವರದಿ  

             ಹೂವಿನಹಡಗಲಿ 21 : ಮನುಷ್ಯನ ಯಾಂತ್ರಿಕ ಬದುಕಿನಲ್ಲಿ ಸುಗಮ ಸಂಗೀತವನ್ನು ಆಲಿಸುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ ಎಂದು ಗ್ರಾಮದ ಪ್ರಗತಿಪರ ಕೃಷಿಕ ಎಂ.ಬಿ. ಬಸವರಾಜ ಹೇಳಿದರು. ತಾಲೂಕಿನ ಸೋಗಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಹಾಗೂ ಅಂಬೇಡ್ಕರ್ ಜಾನಪದ ಸಾಂಸ್ಕೃತಿಕ ಕನ್ನಡ ಟ್ರಸ್ಟ್ಗಳ ಸಹಯೋಗದಲ್ಲಿ ಆಯೋಜಿಸಿದ್ದ ’ಸುಗಮ ಸಂಗೀತ’ ಕಾರ್ಯಕ್ರಮ  ಉದ್ಘಾಟಿಸಿ  ಮಾತನಾಡಿದರು.

          ಆಧುನಿಕತೆಗೆ ಮಾರುಹೋಗಿರುವ ನಾವು ಸುಗಮ ಸಂಗೀತ ಹಾಗೂ ಜಾನಪದ ಕಲೆಗಳನ್ನು ಇಂದಿನ ಪೀಳಿಗಿಗೆ ಪರಿಚಯಿಸುವ ಹೊಣೆ ನಮ್ಮೆಲ್ಲರದಾಗಿದೆ’ ಎಂದ ಅವರು ಸ್ಥಳೀಯ ಕಲಾವಿದರು ಸಂಘಟಿತರಾಗಿ ಸರಕಾರದ ಸೌಲಭ್ಯಗಳನ್ನು ಪಡೆದು ಕೊಳ್ಳಿ ಎಂದು ಸಲಹೆ ನೀಡಿದರು.ಹುಗಲೂರಿನ ಸೀತಾಮಾತೆ ಕಲಾ ಟ್ರಸ್ಟ್ನ ಮೇಟಿ ನಿಖಿಲ್, ಹುಗ್ಗಿ ರುದ್ರಮ್ಮ, ಕೆ. ಕಾಳಮ್ಮ, ಮನಚಾರಿ ನಿಂಗಪ್ಪ, ಬೆಲ್ಲದ ಕೊಟ್ರ​‍್ಪ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈ. ಮಲ್ಲಪ್ಪ ಗವಾಯಿ  ಭಾಗವಹಿಸಿದ್ದರು.                    ಹಡಗಲಿ ಕಾಳಮ್ಮ ಮತ್ತು ಸಂಗಡಿಗರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು ಪ್ರೇಕ್ಷಕರನ್ನು ರಂಜಿಸಿದರು. ಸಹಕಲಾವಿದರಾದ ಹಗರಿಬೊಮ್ಮನಹಳ್ಳಿಯ ಜನಪದ ಕಲಾವಿದೆ ಆರ್‌. ದೊಡ್ಡಬಸಮ್ಮ, ಕೊಡಬಾಳ್ ಕಾವ್ಯ, ಬಿ. ನಾಗವೇಣಿ, ಭಾಗ್ಯಮ್ಮ, ಶಿಲ್ಪಾ ಬಾರಿಕರ್, ಎಂ. ಗಂಗಮ್ಮ, ಬೆಂಜ್ರಿ ಗಂಗಮ್ಮ, ಸಿ. ಶಾರದಮ್ಮ, ಸವಿತಾ, ವೈ. ಬಸವಂತಮ್ಮ ಹಾಗೂ ಕಮಲಮ್ಮ ಭಾಗವಹಿಸಿದ್ದರು. ಇದೇ ವೇಳೆ ಬಿ. ಕಸ್ತೂರ​‍್ಪ ಹಾಗೂ ತಬಲಾದಲ್ಲಿ ಬಂಡ್ರಿಯ ರಾಮಾಚಾರಿ ಸಾಥ್ ನೀಡಿದರು. ಜಾನಪದ ಬಯಲಾಟ ಕಲಾವಿದ ಕರಿಬಸಪ್ಪ ವೈ. ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ