ಚಂದ್ರಶೇಖರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
ಹೂವಿನಹಡಗಲಿ ನ.16 - ಕೆಆರ್ಎಸ್ (ಕರ್ನಾಟಕ ರಾಷ್ಟ್ರ ಸಮಿತಿ) ಪಕ್ಷದ ಮುಖಂಡ ಚಂದ್ರಶೇಖರ್ ದೊಡ್ಡಮನಿ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಸಂತ್ರಸ್ತನನ್ನೇ ಬಂಧಿಸಿರುವ ಪೊಲೀಸರ ಧೋರಣೆ ಹಾಗೂ ಶಾಸಕರ ನಡೆ ಖಂಡಿಸಿ ಪಟ್ಟಣದ ಶಾಸ್ತ್ರೀಯ ವೃತ್ತದಲ್ಲಿ ಸೋಮವಾರ ಕೆಆರ್ಎಸ್ ಪಕ್ಷ ದಿಂದ ಪ್ರತಿಭಟನೆ ನಡೆಸಿದರು.
ಹಲ್ಲೆ ಮತ್ತು ದರೋಡೆ: ಹೂವಿನಹಡಗಲಿ ಸ್ಥಳೀಯ ಶಾಸಕರ ಬೆಂಬಲಿಗರಿಂದ ಕೆಆರ್ಎಸ್ ಪಕ್ಷದ ಮುಖಂಡ ಚಂದ್ರಶೇಖರ್ ದೊಡ್ಡಮನಿ ಅವರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧಎಫ್ಐಆರ್ ದಾಖಲಾಗಿದೆ.ವಿವಾದಾತ್ಮಕ ಪೊಲೀಸ್ ಕ್ರಮ:ಹಲ್ಲೆಗೊಳಗಾಗಿ ಸಂತ್ರಸ್ತರಾಗಿದ್ದ ಚಂದ್ರಶೇಖರ್ ದೊಡ್ಡಮನಿ ಅವರನ್ನೇ ಪೊಲೀಸರು ಬಂಧಿಸಿರುವುದು.
ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕೆಆರ್ಎಸ್ ರಾಜ್ಯ ಅದ್ಯಕ್ಷ ದೀಪಕ್, ಗೌರವಾದ್ಯಕ್ಷ ರವಿ ಕೃಷ್ಣರೆಡ್ಡಿ ಮಾತನಾಡಿ ಸುಳ್ಳು ಕೇಸ್ ಹಾಕಿದ ಪೋಲಿಸರು ವರ್ತನೆ ,ಶಾಸಕರ ನಡೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಶ್ರೀಧರನಾಯ್ಕ, ಯೋಗೀಶ್, ಮಾತನಾಡಿದರು. ಕೆ.ಆರ್.ಎಸ್ . ಪಕ್ಷದ ನಾನಾ ಜಿಲ್ಲೆಯ ಕಾರ್ಯಕರ್ತರು ಭಾಗವಹಿಸಿದ್ದರು.