ಹೂವಿನ ಹಡಗಲಿ

"ಬಾಲ ವಿವಾಹ ಮುಕ್ತ ಅಭಿಯಾನ" ಹಾಗೂ "ನಶಾ ಮುಕ್ತ ಅಭಿಯಾನ" ಕುರಿತು ಕಾನೂನು ಅರಿವು ಕಾರ್ಯಕ್ರಮ

"ಬಾಲ ವಿವಾಹ ಮುಕ್ತ ಅಭಿಯಾನ" ಹಾಗೂ "ನಶಾ ಮುಕ್ತ ಅಭಿಯಾನ"  ಕುರಿತು ಕಾನೂನು ಅರಿವು ಕಾರ್ಯಕ್ರಮ


           ಹೂವಿನಹಡಗಲಿ : ನ.14-  ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಪಟ್ಟಣದ  ವಕೀಲರ ಸಂಘದ ಸಭಾಂಗಣದಲ್ಲಿ ಶನಿವಾರ "ಬಾಲ ವಿವಾಹ ಮುಕ್ತ ಅಭಿಯಾನ" ಹಾಗೂ "ನಶಾ ಮುಕ್ತ ಅಭಿಯಾನ"  ಕುರಿತು ಕಾನೂನು ಅರಿವು ಕಾರ್ಯಕ್ರಮ ಜರುಗಿತು. 

          ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಅಜ್ಜಯ್ಯ ಅವರು ನೆಹರು ಅವರ ಭಾವಚಿತ್ರಕ್ಕೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ ಸಸಿಗೆ ನೀರನ್ನು ಹಾಕುವ ಮೂಲಕ ಉದ್ಘಾಟಿಸಿ  ನಂತರ ಮಾತನಾಡಿ ಜವಾಹರಲಾಲ್ ನೆಹರೂ ಅವರ ಬಾಲ್ಯದ ಜೀವನ ಮತ್ತು ತತ್ವಗಳು, ಆದರ್ಶಗಳನ್ನು ಮಕ್ಕಳಿಗೆ ಹೇಳಿದರು.

               ಉಪನ್ಯಾಸಕರಾಗಿ ಗದಗಿನ ವಕೀಲರಾದ ಹನುಮಂತಪ್ಪ ಮಾತನಾಡಿ ಮಕ್ಕಳ ಸಾಂವಿಧಾನಿಕ ಹಕ್ಕುಗಳ ಕುರಿತು ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಮಾತನಾಡಿದರು.  ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಕೆ. ಮಾತನಾಡಿ ನೆಹರೂ ಅವರ ಆದರ್ಶಗಳನ್ನು ಪಾಲಿಸಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು   ವಕೀಲರ ಸಂಘದ ಅಧ್ಯಕ್ಷ ಮಂಜುನಾಥ ಜೈನ್ ಅದ್ಯಕ್ಷತೆ  ವಹಿಸಿದ್ದರು.  ಉಪಕಾರಾಗೃಹ ದ ಜೈಲರ್   ಶರಣಯ್ಯ,  ಮಹಮ್ಮದ್ ರಫಿ, ಡಾ. ಸಚಿನ್ ಇದ್ದರು. 


ಸುದ್ದಿ ಓದಿ