ಹೂವಿನ ಹಡಗಲಿ

2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳ ’ ನೆಲ,ಜಲ, ಭಾಷೆಯ ಅಭಿಮಾನ ಅವಶ್ಯ

2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳ ’ ನೆಲ,ಜಲ, ಭಾಷೆಯ ಅಭಿಮಾನ ಅವಶ್ಯ


’ಲೋಕದರ್ಶನ ವರದಿ 

            ಹೂವಿನಹಡಗಲಿ   ನ.23:   ’ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಪ್ರೀತಿಸಬೇಕು ಬಳಸಬೇಕು. ಕನ್ನಡ ನಾಡಿನ ನೆಲ, ಜಲ ಮತ್ತು ಭಾಷೆಯ ಬಗ್ಗೆ ಅಭಿಮಾನ ಇರಲಿ. ಈ ಮೊದಲು ನಾಡಿನ ಕವಿಗಳು ಸಾಹಿತ್ಯದಲ್ಲಿ ಕೃಷಿಗೈದಿರುವಂತೆ ಇಂದಿನ ಸಾಹಿತಿಗಳಿಂದ ಉತ್ತಮ ಸಾಹಿತ್ಯ ಕೃತಿಗಳು ಪ್ರಕಟಗೊಳ್ಳಲಿ’ ಎಂದು ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಕೆ.ರವೀಂದ್ರನಾಥ ಹೇಳಿದರು.

           ಪಟ್ಟಣದ ರಂಗಭಾರತಿ ರಂಗಮಂದಿರ ದಲ್ಲಿ ಭಾನುವಾರ ಕನ್ನಡ ಸಾಹಿತ್ಯ  ಪರಿಷತ್ತು  ತಾಲೂಕು ಘಟಕ ಹಮ್ಮಿಕೊಂಡಿದ್ದ 2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಾಡಿನ ನೆಲ, ಜಲ, ಭಾಷೆ, ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಮ್ಮೇಳನಗಳು ಚಿಂತನಾ ವೇದಿಕೆಗಳಾಗಿವೆ.

              ಚಾರಿತ್ರಿಕ ಇತಿಹಾಸ ಹೊಂದಿರುವ ಹೂವಿನಹಡಗಲಿ ನಾಡಶ್ರೇಷ್ಠರನ್ನು ಕೊಡುಗೆಯಾಗಿ ನೀಡಿದೆ. ಚರಿತ್ರೆಗಳು ಮರೆಮಾಚುತ್ತಿರುವ ಸಂದರ್ಭದಲ್ಲಿ ಸ್ಥಳೀಯ ಚರಿತ್ರೆಯ ಅಧ್ಯಯನಕ್ಕೆ ಆದ್ಯತೆ ನೀಡಬೇಕು  ಎಂದರು. ವಿಜಯನಗರ ಸಾಮ್ರಾಜ್ಯಕ್ಕೂ ಮುನ್ನವೇ ಹೂವಿನಹಡಗಲಿಗೆ ಪೂವಿನ ಪಡಂಗಲಿ ಎಂಬ ಹೆಸರು ಶಾಸನದಲ್ಲಿದೆ.

           12ನೇ ಶತಮಾನದ ಕಲ್ಯಾಣ ಕ್ರಾಂತಿಯಿಂದ ಹರಿದು ಹಂಚಿ ಹೋಗಿ ರುವ ಸಾಹಿತ್ಯ, ವಿಜಯನಗರ ಹಂಪಿಯಲ್ಲಿ ವಚನ ಸಾಹಿತ್ಯದ ಸಂರಕ್ಷಣೆ, ಅಧ್ಯಯನ, ವಚನಗಳ ಕ್ರೋಡೀಕರಿಸುವ ಕೆಲಸ ಆಗಿರುವ ಹಿನ್ನೆಲೆಯಲ್ಲಿ ಇದನ್ನು ವಿಜಯ ಕಲ್ಯಾಣ ಎಂದು ಕರೆಯಲ್ಪಟ್ಟಿತ್ತು.

              ಇಂತಹ ಪುಣ್ಯದ ನೆಲದಲ್ಲಿ ಸಾಹಿತ್ಯ ಸಮ್ಮೇಳನ ನಡೆದಿರುವುದು ಉತ್ತಮ ಬೆಳವಣಿಗೆ ಎಂದರು.ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರ​‍್ಪ, ಸರಕಾರ ಹಾಗೂ ಕೇಂದ್ರ ಪರಿಷತ್ತಿನ ಅನುದಾನದ ಕೊರತೆ ನಡುವೆಯೂ ಒಂದೇ ತಿಂಗಳಲ್ಲಿ 4 ತಾಲೂಕು ಸಮ್ಮೇಳನಗಳು ನಡೆದಿವೆ.  


ಸುದ್ದಿ ಓದಿ