ಗಂಗಾಧರ ಸೊಪ್ಪಿಮಠ ಪಿ.ಎಚ್.ಡಿ. ಪದವಿ ಪ್ರಧಾನ
ಲೋಕದರ್ಶನ ವರದಿ
ಕೊಪ್ಪಳ 23: ತಾಲೂಕಿನ ಹ್ಯಾಟಿ ಗ್ರಾಮದ ನಿವಾಸಿ ಪ್ರಸ್ತುತ ಹರಪನಹಳ್ಳಿ ತಾಲೂಕಿನ ಬೂದಿಹಾಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪದವೀಧರ ಪ್ರಾಥಮಿಕ ಶಾಲಾ ಸಹಶಿಕ್ಷಕರಾಗಿ (ಜಿ.ಪಿ.ಟಿ) ಕಾರ್ಯನಿರ್ವಹಿಸುತ್ತಿರುವ ಗಂಗಾಧರ ಶಾಂತವೀರಯ್ಯ ಸೊಪ್ಪಿಮಠ ಅವರಿಗೆ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯವು ಶಿಕ್ಷಣ ವಿಷಯದಲ್ಲಿ ಪಿ.ಎಚ್.ಡಿ. ಪ್ರಧಾನ ಮಾಡಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರಾಧ್ಯಾಪಕರಾದ ್ರೊ.ಎಂ.ಸಿ.ಎರಿ್್ರಸ್ವಾಮಿ ಅವರ ಮಾರ್ಗದರ್ಶನದಲ್ಲಿ “ಎಫೆಕ್ಟ್ ಆಫ್ ಮಲ್ಟಿಮೀಡಿಯಾ ಅಪ್ರೋಚ್ ಇನ್ ಟೀಚಿಂಗ್ ಸೋಶಿಯಲ್ ಸೈನ್ಸ್ ಆನ್ ಅಚೀವಮೆಂಟ್ ಇನ್ ಸೋಶಿಯಲ್ ಸೈನ್ಸ್ ಆಂಡ್ ಸೆಲ್ಫ್-ರಿಲಾಯನ್ಸ್ ಅಮೊಂಗ್ ಸೆಕೆಂಡರಿ ಸ್ಕೂಲ್ ಸ್ಟೂಡೆಂಟ್ಸ್.” ಎಂಬ ಮಹಾಪ್ರಬಂಧಕ್ಕೆ ಪದವಿ ನೀಡಿದ್ದು,
ಹರಪನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಶಾಲೆಯ ಬಡ್ತಿ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕ ವೃಂದ, ಬಿ.ಇಡಿ ಮತ್ತು ಡಿ.ಇಡಿ ಹಳೆಯ ವಿದ್ಯಾರ್ಥಿಗಳು, ಸ್ನೇಹಿತ ವರ್ಗ, ಹ್ಯಾಟಿ ಹಾಗೂ ಬೂದಿಹಾಳು ಗ್ರಾಮಸ್ಥರು ಅಭಿನಂದನೆಯನ್ನು ತಿಳಿಸಿದ್ದಾರೆ.