ಬೆಳಗಾವಿ

ಯಮಕನಮರಡಿ 13ನೇ ಪ್ರತಿಭಾ ಪುರಸ್ಕಾರ ಸಮಾರಂಭ ಯಶಸ್ವಿ

ಯಮಕನಮರಡಿ 13ನೇ ಪ್ರತಿಭಾ ಪುರಸ್ಕಾರ ಸಮಾರಂಭ ಯಶಸ್ವಿ


                 ಯಮಕನ ಮರಡಿ 23: ಯಶಸ್ವಿಯಾಗಿ ಮುಕ್ತಾಯಗೊಂಡ 13ನೇ ಪ್ರತಿಭಾ ಪುರಸ್ಕಾರ ಯಮಕನ ಮರಡಿ ಸ್ಥಳೀಯ ಶಾಸಕರು ಸಚಿವರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶನ ಜಾರಕಿಹೊಳಿ ಅವರ ಪ್ರಾಯೋಜತ್ವದಲ್ಲಿ ಎರಡು ದಿನಗಳ ಕಾಲ ಯಶಸ್ವಿಯಾಗಿ ಜರುಗಿದ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಜಾನಪದ ಗಾಯನ ಸಮೂಹನತೆ ಸೇರಿದಂತೆ ಅನೇಕ ಕಲಾ ಪ್ರಕಾರಗಳೊಂದಿಗೆ ಯಶಸ್ವಿಯಾಗಿ ಜರುಗಿದ 13ನೇ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಉಳ್ಳಾಗಡ್ಡಿ ಖಾನಾಪುರ ಬ್ರಾಹ್ಮಠದ ಪೂಜಾರಾದ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಹಾಗೂ ಅಭಿನವ ಮಂಜುನಾಥ ಮಹಾಸ್ವಾಮಿಗಳು ಹುಕ್ಕೇರಿ ಕ್ಯಾರ ಗುಡ್ಡ ಹುಲ್ಲೋಳಿ ಮಠದ  ಪೂಜ್ಯರಾದ ಅಭಿನವ ಮಂಜುನಾಥ ಮಹಾಸ್ವಾಮಿಗಳು ಮಾತನಾಡುತ್ತ ವಿಶ್ವಮಟ್ಟಕ್ಕೆ ಪರಿಚಯಿಸುತ್ತಿರುವ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅಲ್ಲದೆ ಕಲೆಗಳನ್ನುಹಾಗೂ ಅವರಲ್ಲಿ ಅಡಗಿದ ಪ್ರತಿಭೆಯನ್ನು ನಾಡಿನ ಉದ್ದಕ್ಕೂ ಅಲ್ಲದೆ ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವ ಕಾರ್ಯವನ್ನು ಮಾಡುತ್ತಿರುವ ಸಚಿವರಾದ ಸತೀಶ್ ಅಣ್ಣ ಜಾರಕಿಹೊಳಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ ಯವಾದದ್ದಾಗಿದೆ ಎಂದು ಹೇಳಿದರು.

                ಅದರಂತೆ ಸಾನಿಧ್ಯ ವಹಿಸಿದ್ದ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡುತ್ತಾ ಸುಮಾರು ಹದಿಮೂರು ವರ್ಷಗಳ ಕಾಲ ಯಶಸ್ವಿಯಾಗಿ ನಡಸಿಕೊಂಡು ಬಂದಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ವಿಶ್ವಮಟ್ಟದಲ್ಲಿ ಪರಿಚಯವಾಗುತ್ತಿದ್ದು ಅಲ್ಲದೆ ಸಚಿವರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ನಾಲ್ಕು ಐದು ಕೋಟಿ ರೂಗಳನ್ನು ಸುಸಜ್ಜಿತಶಾಲಾ ಕಟ್ಟಡಗಳಿಗೆ ಮಂಜೂರು ಮಾಡಿ ಯಮಕಣ ಮರಡಿ ಕ್ಷೇತ್ರ ಉದ್ದಕ್ಕೂ 250ಸುಸಜ್ಜಿತ ಶಾಲೆಗಳನ್ನು ಕಟ್ಟಿಸುವುದರ ಜೊತೆಗೆ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಕಾರ್ಯ ಮಾಡುತ್ತಿರುವುದುನಿಜಕ್ಕೂ ಹೆಮ್ಮೆಪಡುವ ಸಂಗತಿಯಾಗಿದೆ ಅಲ್ಲದೆ ಸಚಿವರು ಮಠಮಾನ್ಯಗಳಿಗೂ ಸಹಿತ ತಮ್ಮದೇ ಆದ ಉದಾರ ಧನ ಸಹಾಯವನ್ನು ಮಾಡುತ್ತಿರುವುದು ಕಾರ್ಯಗಳು ನಿಜಕ್ಕೂ ಅಜರಾಮರವಾಗಿ ಉಳಿಯುವ ಕಾರ್ಯಗಳಾಗಿವೆ ಎಂದು ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಹೇಳಿದರು ಇದೇ ಸಂದರ್ಭ ದಲ್ಲಿ ಕಾರ್ಯಕ್ರಮಕ್ಕೆ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಉಪನಿರ್ದೇಶಕರಾದ ಮಣ್ಣಿಕೇರಿ ಅವರು ಆಗಮಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ವಿಜೇತವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸಚಿವರ ಕಾರ್ಯವು ನಿಜಕ್ಕೂ ಹೆಮ್ಮೆ ಪಡುವಂತಾಗಿದೆ ಇದೇ ಎಂದು ಹೇಳಿದರು.  ವವಿದ್ಯಾರ್ಥಿಗಳಿಗೆ ಬಹುಮಾನ ಚಕ್ಕುಗಳನ್ನು ಹಾಗೂ ಪ್ರಮಾಣ ಪತ್ರಗಳೊಂದಿಗೆ ವಿತರಿಸಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಆಯೋಜಕರಾದ ಕಿರಣ್ ಸಿಂಗ್ ರಜಪೂತ್ ವೀರಣ್ಣ ಬಿಸಿ ರೊಟ್ಟಿ ಶಶಿಕಾಂತ್ ಹಟ್ಟಿ ರವಿ ಜಿನರಾಳಿ ಕಾರ್ಯಕ್ರಮ ರೂವಾರಿ ರಿಯಾಜ್ ಚೌಗ ಬ್ಲಾಕ್ ಅಧ್ಯಕ್ಷ ಮಹಾಂತೇಶ್ ಮಗದುಮ್ ಮುಂತಾದವರು ಉಪಸ್ಥಿತರಿದ್ದು ಯುವ ನಾಯಕರು ಆದ ರಾಹುಲ್  ಜಾರಕಿಹೊಳಿ ಅವರುಆಗಮಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅಭಿನಂದಿಸಿದರು. 


ಸುದ್ದಿ ಓದಿ