ಬೆಳಗಾವಿ

ವಚನ ಮಂಟಪ" ಲೇಖಕ ರವಿ ಹಂಜ್ ನ್ನು ಗಡಿಪಾರು ಮಾಡಬೇಕು: ಟಿ.ಎಸ್‌.ವಂಟಗೂಡಿ;

ವಚನ ಮಂಟಪ" ಲೇಖಕ ರವಿ ಹಂಜ್ ನ್ನು ಗಡಿಪಾರು ಮಾಡಬೇಕು: ಟಿ.ಎಸ್‌.ವಂಟಗೂಡಿ;


           ಪಾಲಬಾವಿ  22: ಭಕ್ತಿ ಭಂಡಾರಿ, ಜಗಜ್ಯೋತಿ ಬಸವಣ್ಣನವರ ಕುರಿತು "ಬಸವ ಮಂಟಪ" ಪುಸ್ತಕದಲ್ಲಿ ಅವಹೇಳನಕಾರಿ ಹಾಗೂ ಆಧಾರ ರಹಿತ ಟೀಕೆಗಳನ್ನು ಮಾಡಲಾಗಿದೆ ಎಂಬ ವಿವಾದದ ಹಿನ್ನೆಲೆಯಲ್ಲಿ ಲೇಖಕ ರವಿ ಹಂಚ್ ಅವರನ್ನು ದೇಶದ್ರೋಹಿ ಹಾಗೂ ನಾಡದ್ರೋಹಿ ಎಂದು ಪರಿಗಣಿಸಿ                 ಭಾರತದಿಂದ ಶಾಶ್ವತ ಬಹಿಷ್ಕಾರ ಮಾಡಬೇಕು. ವಿಷಯವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರ ಮೇಲಿಯೂ ಸರ್ಕಾರವು ಸೂಕ್ತ ಕ್ರಮ ಜರುಗಿಸಬೇಕು ಎಂದು ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ರಾಯಬಾಗ ತಾಲೂಕು ಘಟಕದ ಅಧ್ಯಕ್ಷ ಸಾಹಿತಿ ಟಿ.ಎಸ್‌.ವಂಟಗೂಡಿ ಸರ್ಕಾರವನ್ನು ಆಗ್ರಹಿಸಿದ್ದಾರೆ.                 

            ಬಸವ ಮಂಟಪ ಪುಸ್ತಕದ ಕುರಿತು ರಾಜ್ಯಾದ್ಯಂತ ಬಸವ ಬಳಗ ಹಾಗೂ ಬಸವ ಅಭಿಮಾನಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿರುವ ಬೆನ್ನಲ್ಲೇ ಸರ್ಕಾರ ಸ್ವಯಂ ಪ್ರೇರಿತ ದೂರು ದಾಖಲಿಸಲು ಮುಂದಾಗಿರುವುದು ಹಾಗೂ ಪುಸ್ತಕ ಮಳಿಗೆಗಳಲ್ಲಿ ಈ ಕೃತಿ ಮಾರಾಟವಾಗದಂತೆ ಸೂಕ್ತ ಕ್ರಮ ಕೈಗೊಂಡಿರುವುದು ಸ್ವಾಗತಾಹ9 ಎಂದು ಸಾಹಿತಿ ಟಿ.ಎಸ್‌.ವಂಟಗೂಡಿ ಅಭಿಪ್ರಾಯ ಪಟ್ಟಿದ್ದಾರೆ 


ಸುದ್ದಿ ಓದಿ