ಸುಳೇಭಾವಿಯಲ್ಲಿ ₹25 ಲಕ್ಷ ವೆಚ್ಚದ ‘ಬನಶ್ರೀ ಭವನ’ ಉದ್ಘಾಟನೆ
ಸುಳೇಭಾವಿ 22: ಗ್ರಾಮದ ಶ್ರೀ ಶಾಕಾಂಭರಿ ದೇವಸ್ಥಾನದ ಆವರಣದಲ್ಲಿ ಸುಮಾರು ₹25 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ‘ಬನಶ್ರೀ ಭವನ’ವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಹಟ್ಟಿಹೊಳಿ, ನೂತನ ಭವನದಿಂದ ಗ್ರಾಮಸ್ಥರಿಗೆ ಧಾರ್ಮಿಕ ಸಮಾರಂಭಗಳು, ಸಭೆಗಳು ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಕ್ತ ಸ್ಥಳಾವಕಾಶ ದೊರಕಿದೆ. ದೇವಸ್ಥಾನದ ವಿವಿಧ ಕಾರ್ಯಕ್ರಮಗಳಿಗೂ ಭವನ ಅನುಕೂಲವಾಗಲಿದೆ ಎಂದರು.
ಗ್ರಾಮಸ್ಥರ ಬಹುದಿನಗಳ ಅಗತ್ಯವನ್ನು ಈ ಭವನ ಪೂರೈಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸೌಲಭ್ಯಗಳು ಸಮುದಾಯದ ಒಗ್ಗಟ್ಟು ಮತ್ತು ಧಾರ್ಮಿಕ ಪರಂಪರೆಯನ್ನು ಬಲಪಡಿಸಲು ಸಹಕಾರಿಯಾಗುತ್ತವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ದತ್ತಾ ಬಂಡಿಗಣಿ, ಲಕ್ಷ್ಮೀನಾರಾಯಣ ಕಲ್ಲೂರ್, ಮಹೇಶ ಸುಳೇಭಾವಿ, ಶಿವಲಿಂಗಪ್ಪ ಇಂಗಳೆ, ನಾರಾಯಣ ಹೊಸಕೋಟಿ, ಕಲ್ಲಪ್ಪ ಕಣಬರಗಿ, ಮನೋಹರ್ ಇಂಗಳೆ, ಲಕ್ಷ್ಮಣ ಬಕರಿ, ಮಹಾದೇವ್ ರಾಗಿ, ಗೋಪಾಲ ಪಿಟಗಿ, ಶ್ರೀಧರ್ ಕರೇಮನಿ, ಬಸವರಾಜ ಗೋಕಾವಿ, ರಮೇಶ್ ಹೊಸಕೋಟಿ, ಬಸವರಾಜ ಹುಲಮನಿ, ಉದಯ ವಠಾರಿ, ಬಸವರಾಜ ಇಂಗಳೆ, ವೀರಭದ್ರ ನೇಸರಗಿ, ಶಂಕರ ಇಂಗಳೆ ಹಾಗೂ ಬಾಬು ವಾಗೇರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.