ಬೆಳಗಾವಿ

ದೇವಾಂಗ ಮೂಲಪುರುಷ ದೇವರ ದಾಸ್ಮಯ ಜಯಂತಿ ಆಚರಣೆ

ದೇವಾಂಗ ಮೂಲಪುರುಷ ದೇವರ ದಾಸ್ಮಯ ಜಯಂತಿ ಆಚರಣೆ


             ಯಮಕನಮರಡಿ  22 : ಸ್ಥಳೀಯ  ಬನಶಂಕರಿ ದೇವಸ್ಥಾನದಲ್ಲಿ    ದೇವಾಂಗ ಕುಲಬಾಂಧವರು ದೇವರದ ಸಮಯ ಜಯಂತಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸಿದರು ಅತಿ ಪೂರ್ವದಲ್ಲಿ ದೇವಾನುದೇವತೆಗಳು ಹುಲಿ ಚರ್ಮವನ್ನು ಧರಿಸುತ್ತಿದ್ದರು ಅದನ್ನು ಹೋಗಲಾಡಿಸಲು ಶಿವನ ದಿವ್ಯ ಶಕ್ತಿಯಿಂದ ದೇವರ ದಾಸ್ಮಯ ಜನ್ಮ ತಾಳಿ ವಿಷ್ಣುವಿನ ಕುರಿತು ಘೋರ ತಪಸ್ಸರವನ್ನು ಮಾಡಿ ನಾಭಿ ಕಮಲದಲ್ಲಿದ್ದ ಹತ್ತಿ ಬೀಜಗಳನ್ನು ವರವಾಗಿ ಪಡೆದು ಅವುಗಳನ್ನು ತೆಗೆದುಕೊಂಡು ಬರುತ್ತಿದ್ದಾಗ ಅಪಾರ ರಾಕ್ಷಸರು ದೇವರ ದಸಮಯ್ಯನ ಮೇಲೆ ದಾಳಿ ಮಾಡಲು ಪ್ರಾರಂಭಿಸಿದಾಗ ದೇವರ ದಸಮಯನು ಕುಲದೇವತೆಯಾದ  ಬನಶಂಕರಿ ದೇವಿಯನ್ನು ಸ್ಮರಿಸುತ್ತಾ ರಾಕ್ಷಸರ ಕಂಟಕವನ್ನು ದೂರು ಮಾಡಲು  ಬನಶಂಕರಿ ದೇವಿಯು ಸಾಕ್ಷಾತ್ ಪ್ರಸನ್ನಳಾಗಿ ರಾಕ್ಷಸರೊಂದಿಗೆ ಘೋರ ಯುದ್ಧ ಮಾಡಿ ಎಲ್ಲ ರಾಕ್ಷಸರನ್ನು ಸಂಹಾರ ಮಾಡಿದರು.

              ರಾಕ್ಷಸರ ಸಂಹಾರದಿಂದ ಹರಿಯುತ್ತಿದ್ದ ರಕ್ತದಲ್ಲಿ ಹತ್ತಿ ಬೀಜವನ್ನು ಬಿತ್ತಿ ಬಣ್ಣ ಬಣ್ಣಗಳ ಎಳೆಗಳಿಂದ ಬಟ್ಟೆಯನ್ನು ತಯಾರಿಸಿ ದೇವರ ದಸಮಯನು ಸಮಸ್ತ ದೇವಾನುದೇವತೆಗಳಿಗೆ ವಸ್ತ್ರವನ್ನು ನೀಡಿ ಪ್ರಾಣಿಗಳ ಚರ್ಮದ ಹೊದಿಕೆಗಳಿಂದ ಮುಕ್ತಗೊಳಿಸಿ ಸಮಸ್ತ ಮಾನವ ಕುಲಕ್ಕೆ ದಿವಾನ ದೇವತೆಗಳಿಗೂ ವಸ್ತ್ರವನ್ನು ನೀಡಿದ ದೇವರ ದಸಮಯನ ಜಯಂತಿಯನ್ನು ದೇವಾಂಗ ಕುಲಬಾಂಧವರು ಭಕ್ತಿ ಪೂರ್ವಕವಾಗಿ ಆಚರಿಸಲು ದಸಮಯ್ಯ ನವರು 12ನೇ ಶತಮಾನ ಪೂರ್ವದಲ್ಲಿ ಅನೇಕ ವಚನಗಳನ್ನು ಬರೆದವರಾಗಿದ್ದಾರೆ.

             ಇವರ ವಚನದಲ್ಲಿ ಶ್ರೇಷ್ಠವಾದದ್ದು ಗಿಳಿ ನಿಮ್ಮದಾನ ಬೆಳೆ ನಿಮ್ಮದಾನ ಸುಳಿದು ಬೀಸುವ ಗಾಳಿಯು ಅದು ನಿಮ್ಮದಾನ ರಾಮನಾಥ ಎಂಬ ಅಂಕಿತವನ್ನು ಮುಂದಿಟ್ಟು ಅಪಾರ ವಚನಗಳನ್ನು ರಚಿಸಿದವರಾಗಿದ್ದಾರೆ ದೇವರ ದಸಮಯ್ಯನವರು ಇಂಥವರ ಜಯಂತಿ ಸ್ಮರಣೆಯು ನಮ್ಮ ನಿಮ್ಮೆಲ್ಲರಿಗೆ ಉಜ್ವಲ ಬೆಳಕವನ್ನು ಕಲ್ಪಿಸಲಂದು ಜಯಂತಿಯನ್ನು ಆಚರಿಸಿ ದೇವಾಂಗ ಕುಲಬಾಂಧವರುಯಶಸ್ವಿಯಾದರು ದಿನಾಂಕ್ 21ರಂದು ದೇವಾಂಗ ಮಹರ್ಷಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ದೇವರದಾಸಮಯ್ಯನ ಕೃಪೆಗೆ ಪಾತ್ರರಾದರು 


ಸುದ್ದಿ ಓದಿ