ಮಹಲಿಂಗಪುರ

ಗೇಲಿ ಮಾಡಿದವರೇ ಇಂದು ಬೆರಗಾಗುವ ಸಾಧನೆ 10ರ ಗ್ಲಾಸ್ ಕಬ್ಬಿನ ಹಾಲಿನಿಂದ ಆರಂಭವಾದ ಪಯಣ ಈಗ ರಾಜ್ಯಮಟ್ಟದ ಸ್ಟಾರ್ಟ್‌ಅಪ್ ಕನಸಿನತ್ತ

ಗೇಲಿ ಮಾಡಿದವರೇ ಇಂದು ಬೆರಗಾಗುವ ಸಾಧನೆ 10ರ ಗ್ಲಾಸ್ ಕಬ್ಬಿನ ಹಾಲಿನಿಂದ ಆರಂಭವಾದ ಪಯಣ ಈಗ ರಾಜ್ಯಮಟ್ಟದ ಸ್ಟಾರ್ಟ್‌ಅಪ್ ಕನಸಿನತ್ತ
An achievement that has left even the skeptics amazed: a journey that began with a single glass of


          ಮಹಾಲಿಂಗಪುರ 23: ವಿದೇಶಿ ತಂಪು ಪಾನೀಯಗಳ ಆಕರ್ಷಣೆಗೆ ಮಾರುಹೋಗುತ್ತಿರುವ ಇಂದಿನ ಯುವಪೀಳಿಗೆಗೆ ನಮ್ಮ ನೆಲದ ರೈತ ಬೆಳೆದ ಕಬ್ಬಿನಿಂದ ತಯಾರಾಗುವ ನೈಸರ್ಗಿಕ ಕಬ್ಬಿನ ಹಾಲಿನ ಸವಿಯನ್ನು ಪರಿಚಯಿಸುವುದರ ಜೊತೆಗೆ, ಸ್ವದೇಶಿ ಉತ್ಪನ್ನಕ್ಕೆ ಹೊಸ ಮಾರುಕಟ್ಟೆ ಕಲ್ಪಿಸುವ ವಿಭಿನ್ನ ಪ್ರಯತ್ನವೊಂದು ಗಮನ ಸೆಳೆಯುತ್ತಿದೆ.

          ಸಾಧನೆಗೆ ದೊಡ್ಡ ಬಂಡವಾಳವೇ ಬೇಕಿಲ್ಲ; ಹೊಸ ಆಲೋಚನೆ, ಆತ್ಮವಿಶ್ವಾಸ, ಪರಿಶ್ರಮ ಮತ್ತು ಗುಣಮಟ್ಟದ ಬದ್ಧತೆ ಇದ್ದರೆ ಸಣ್ಣ ಪ್ರಯತ್ನವೂ ದೊಡ್ಡ ಉದ್ಯಮವಾಗಿ ಬೆಳೆಯಬಲ್ಲದು ಎಂಬುದಕ್ಕೆ ಸಂಗಾನಟ್ಟಿ ಗ್ರಾಮದ ರೈತ ಮಹಾಲಿಂಗಪ್ಪ ಇಟ್ನಾಳ ಅವರ ಉದ್ಯಮ ಪಯಣ ಸಾಕ್ಷಿಯಾಗಿದೆ.  ಮಹಾಲಿಂಗಪುರದ ಕೆಇಬಿ ಕಚೇರಿ ಮುಂಭಾಗದಲ್ಲಿ ಒಂದು ಸಣ್ಣ ಸಂಚಾರಿ ವಾಹನದ ಮೂಲಕ ಕಬ್ಬಿನ ಹಾಲು ಮಾರಾಟ ಆರಂಭಿಸಿದಾಗ ಹಲವರು ಇವರ ಪ್ರಯತ್ನವನ್ನು ಕಂಡು ಗೇಲಿ ಮಾಡಿದ್ದರು.                   ಕೆಲವರು ನಕ್ಕಿದ್ದರು. ಆದರೆ ಆ ಮಾತುಗಳಿಗೆ ಎದೆಗುಂದದೆ, ಗ್ರಾಹಕರಿಗೆ ಶುದ್ಧ ಹಾಗೂ ಗುಣಮಟ್ಟದ ಕಬ್ಬಿನ ಹಾಲನ್ನು ಕೈಗೆಟುಕುವ ದರದಲ್ಲಿ ನೀಡಬೇಕೆಂಬ ಉದ್ದೇಶದಿಂದ ತಮ್ಮ ಪ್ರಯತ್ನ ಮುಂದುವರಿಸಿದರು. ಕೇವಲ 10 ರೂಪಾಯಿಗೆ ಒಂದು ಗ್ಲಾಸ್ ಕಬ್ಬಿನ ಹಾಲು ನೀಡುವ ಮೂಲಕ ಗ್ರಾಹಕರ ಗಮನ ಸೆಳೆದರು. ಕಡಿಮೆ ಬೆಲೆಯೊಂದಿಗೆ ಗುಣಮಟ್ಟ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡಿದ ಪರಿಣಾಮ ಗ್ರಾಹಕರ ವಿಶ್ವಾಸ ಗಳಿಸಿದರು.

             ದಿನದಿಂದ ದಿನಕ್ಕೆ ಜನರ ಮೆಚ್ಚುಗೆ ಹೆಚ್ಚಾಗತೊಡಗಿತು. ಮಹಾಲಿಂಗಪುರಕ್ಕೆ ಸೀಮಿತವಾಗಿದ್ದ ಈ ಪ್ರಯತ್ನದ ಸುದ್ದಿ ಬೇರೆ ಬೇರೆ ಊರುಗಳಿಗೂ ತಲುಪಿತು. ತಮ್ಮ ಊರಿನಲ್ಲಿಯೂ ಇಂತಹ ಮಳಿಗೆಗಳನ್ನು ಆರಂಭಿಸಬೇಕೆಂದು ಜನರು ಬೇಡಿಕೆ ಇಡತೊಡಗಿದರು. ಶುದ್ಧತೆ ಮತ್ತು ನೈಸರ್ಗಿಕ ರುಚಿಗೆ ವಿಶೇಷ ಆದ್ಯತೆ. 


ಸುದ್ದಿ ಓದಿ