ಬೆಳಗಾವಿ

ಬೇಂದ್ರೆ ಭಾವಗೀತೆ ಕಾರ್ಯಕ್ರಮ

ಬೇಂದ್ರೆ ಭಾವಗೀತೆ ಕಾರ್ಯಕ್ರಮ

                ಬೆಳಗಾವಿ 23 : ನಗರದ ಸಾಹಿತ್ಯ ಮಂಟಪ ಸಂಘಟನೆಯಿಂದ ದಿ. 28-11-2026 ಶನಿವಾರ ಸಾ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ  ಬಾರೋ ಸಾಧನಕೇರಿಗೆ ಬೇಂದ್ರೆ ಭಾವಗೀತೆ ಹಾಗೂ ವಿಶ್ಲೇಷಣೆ) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ, ಲೇಖಕ ಎಲ್‌. ಎಸ್‌. ಶಾಸ್ತ್ರಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು ಧಾರವಾಡದ’ ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷರಾದ ಡಾ. ಸರಜೂ ಕಾಟ್ಕರ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶಶಿಧರ ಹೊಸಕೋಟೆ ಹಾಗೂ  ಶೀರೀಷ ಜೋಶಿ ಭಾವಗೀತೆಗಳ ಕುರಿತು ಮಾತನಾಡಲಿದ್ದು ಗುಂಡೇನಟ್ಟಿ ಮಧುಕರ ಬೇಂದ್ರೆ ಭಾವಗೀತೆಗಳನ್ನು ಹಾಡಲಿದ್ದಾರೆ. 


ಸುದ್ದಿ ಓದಿ