ಬೆಳಗಾವಿ

ರಾಜ್ಯಮಟ್ಟದ ರಾಜ್ಯೋತ್ಸವ ಕಾವ್ಯಸ್ಪರ್ಧೆಯಲ್ಲಿ ಜ್ಯೋತಿ ಮಾಳಿ ಪ್ರಥಮ

ರಾಜ್ಯಮಟ್ಟದ ರಾಜ್ಯೋತ್ಸವ ಕಾವ್ಯಸ್ಪರ್ಧೆಯಲ್ಲಿ ಜ್ಯೋತಿ ಮಾಳಿ ಪ್ರಥಮ

ಲೋಕದರ್ಶನ ವರದಿ 

             ಸವದತ್ತಿ 23 : ಸಹೃದಯ ಸಾಹಿತ್ಯ ಪ್ರತಿಷ್ಠಾನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ನಿಲಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾವ್ಯಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬೆಳಗಾವಿಯ ಜ್ಯೋತಿ ಮಾಳಿ, ದ್ವಿತೀಯ ಬಹುಮಾನ ವಿಜಯಪುರದ ರಾಚು ಕೊಪ್ಪಾ, ತೃತೀಯ ಬಹುಮಾನ  ಕೊಟ್ಟೂರಿನ ಕರಿಬಸವರಾಜ್ ಅವರು ಪಡೆದುಕೊಂಡರು.

             ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ವಾಯ್ ಎಮ್‌. ಯಾಕೊಳ್ಳಿ, ಕಾರ್ಯಪಾಲಕ ಅಭಿಯಂತರ ವಿಠಲ ತಡಸಲೂರ, ನಿಲಯಪಾಲಕ ಹಾಶೀಮ್ ತಹಶೀಲದಾರ್, ಶಿಕ್ಷಕ ಎಸ್‌. ಜಿ. ತುರಮಂದಿ ಹಾಗೂ ಪ್ರತಿಷ್ಠಾನದ ಸದಸ್ಯರು ಪ್ರಶಸ್ತಿ ಪುರಸ್ಕೃತರಿಗೆ ನಗದು ಬಹುಮಾನ ನೀಡಿ ಗೌರವಿಸಿ ಸತ್ಕರಿಸಿದರು. 

             ಇದೇ ಸಂದರ್ಭದಲ್ಲಿ ಧಾರವಾಡ ರಂಗಾಯಣದ ನಿರ್ದೇಶಕರಾದ ಝಕೀರ್ ನದಾಫ ಅವರು ನಾಗೇಶ್ ಜೆ. ನಾಯಕ ಅವರ ‘ನಾಗೇಶಿ ದ್ವಿಪದಿಗಳು’ ಸಂಕಲನ ಲೋಕಾರೆ​‍್ಣ ಮಾಡಿ ಎರಡು ಸಾಲುಗಳ ಮಿತಿಯಲ್ಲಿ ಒಂದು ಅನುಭವವನ್ನು ಕಟ್ಟಿಕೊಡುವುದು ಅಷ್ಟು ಸುಲಭದ ಕೆಲಸವಲ್ಲ. ನಾಗೇಶ್ ನಾಯಕ ಅದನ್ನಿಲ್ಲಿ ಸಾಧಿಸಿದ್ದಾರೆ.

             ಸಮಾಜಕ್ಕೆ ಇಂದು ಬೇಕಾಗಿರುವ ಅತಿ ಅಗತ್ಯದ ಸಂದೇಶಗಳನ್ನು ಈ ಸಂಕಲನದ ದ್ವಿಪದಿಗಳು ನೀಡುತ್ತವೆ. ಇವು ಸ್ವಗತಕ್ಕೆ ಹೇಳಿಕೊಂಡರೂ ಪ್ರತಿ ದ್ವಿಪದಿಯೂ ಕೂಡ ತಾತ್ವಿಕ ಚಿಂತನೆ, ಜೀವನಾನುಭವ, ಸಾಮಾಜಿಕ ಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳನ್ನು ಓದುಗರ ಮುಂದಿಡುವ ವಿಶಿಷ್ಟ ಪ್ರಯತ್ನವನ್ನು ದ್ವಿಪದಿಗಳು ಮಾಡುತ್ತವೆ ಎಂದು ಅವರು ನುಡಿದರು.

             ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ, ವಿಮರ್ಶಕ ಡಾ. ವಾಯ್ ಎಮ್‌. ಯಾಕೊಳ್ಳಿ ಮಾತನಾಡಿ ಪ್ರತಿಷ್ಠಾನ ಇಂದು ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯದ ತುಂಬ ಗುರುತಿಸಿಕೊಂಡಿದೆ.

             ಇಲ್ಲಿ ಕವಿತೆ ಓದಿದ 26 ಕವಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದು ಕಾವ್ಯ ಪ್ರೀತಿಯ ಮೂಲಕ. ಅಂತರಾಳದಲ್ಲಿ ಹೆಪ್ಪುಗಟ್ಟಿದ ಭಾವಗಳನ್ನು ಅಕ್ಷರ ರೂಪಕ್ಕಿಳಿಸುವುದೇ ಕವಿತೆ. ತುಂಬ ಉತ್ತಮವಾದ ಕವಿತೆಗಳನ್ನು ಬರೆದಿದ್ದೀರಿ. ಒಂದಷ್ಟು ನಿರಂತರ ಓದು, ಪ್ರತಿಮೆ ರೂಪಕಗಳ ಸಾಂಗತ್ಯದಿಂದ ಉತ್ತಮ ಕವಿತೆಗಳನ್ನು ಬರೆದು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿ ಎಂದು ಯುವಕವಿಗಳಿಗೆ ಕಿವಿಮಾತು ಹೇಳಿದರು. 

ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕ ಎಸ್‌. ಜಿ. ತುರಮಂದಿ ಹಾಗೂ ಸಂಕಲನಕ್ಕೆ ಆರ್ಥಿಕ ನೆರವು ನೀಡಿದ ಅಮೇರಿಕಾದ ಸುಪ್ರಿಯಾ ಮಾಡಮಗೇರಿ ಅವರನ್ನು ಪ್ರತಿಷ್ಠಾನದಿಂದ ಗೌರವಿಸಿ ಸನ್ಮಾನಿಸಲಾಯಿತು.                 ಮುಖ್ಯ ಅತಿಥಿಗಳಾದ ಬೆಳಗಾವಿಯ ಕಾರ್ಯಪಾಲಕ ಅಭಿಯಂತರ ವಿಠಲ ತಡಸಲೂರ, ನಿಲಯ ಪಾಲಕ ಹಾಶೀಮ್ ತಹಶೀಲದಾರ್, ಎಸ್‌. ಜಿ. ತುರಮಂದಿ, ಸುಪ್ರಿಯಾ ಮಾಡಮಗೇರಿ ಅವರು ಮಾತನಾಡಿದರು. ರಾಜ್ಯದ ವಿವಿಧ ಜಿಲ್ಲೆಗಳ 26 ಕವಿಗಳು ತಮ್ಮ ಕವಿತೆ ವಾಚಿಸಿದರು. ಕು. ತೇಜಸ್ವಿ ನಾಯಕ ಪ್ರಾರ್ಥಿಸಿದರು,

             ಎಸ್‌. ಬಿ. ಗರಗದ ಗ್ರಂಥ ಸಮರ​‍್ಿಸಿದರು. ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ಜೆ. ನಾಯಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಎಮ್‌. ಪಿ. ಪಾಟೀಲ ಹಾಗೂ ಬಸವರಾಜ ಪತ್ತಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪ್ರತಿಷ್ಠಾನದ ಎಲ್ಲ ಸದಸ್ಯರು, ನಿಲಯದ ವಿದ್ಯಾರ್ಥಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ