ಬಿಸಿ ಊಟದ ಯೋಜನೆ ಸಮರ್ಕ ನಿರ್ವಹಣೆಗೆ ಕ್ಯಾಶ್ಬುಕ್ ನಿರ್ವಹಣೆ ಅತ್ಯಗತ್ಯ: ತರಬೇತಿ ಕಾರ್ಯಾಗಾರದಲ್ಲಿ ಮಾಹಿತಿ
ಲೋಕದರ್ಶನ ವರದಿ
ಮಹಾಲಿಂಗಪುರ 14: ಶಾಲೆಗಳಲ್ಲಿ ಜಾರಿಯಲ್ಲಿರುವ ಬಿಸಿಯೂಟ ಯೋಜನೆಯ ಸಮರ್ಕ ಅನುಷ್ಠಾನ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಕ್ಯಾಶ್ಬುಕ್ ನಿರ್ವಹಣೆ ಅತ್ಯಂತ ಮಹತ್ವದ್ದಾಗಿದೆ ಎಂದು ತರಬೇತಿ ಕಾರ್ಯಾಗಾರದಲ್ಲಿ ತಿಳಿಸಲಾಯಿತು.
ನಗರದ ಕೆಜೆಎಸ್ ಮಹಾಲಿಂಗಪುರ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಬಿಸಿಯೂಟ ಯೋಜನೆಯಡಿ ಹಣಕಾಸಿನ ವ್ಯವಹಾರಗಳ ನಿರ್ವಹಣೆ, ಲೆಕ್ಕಪತ್ರಗಳ ದಾಖಲಾತಿ ಹಾಗೂ ಶಾಲಾ ಹಂತದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಮುಖ್ಯ ಶಿಕ್ಷಕರು, ಎಸ್ಡಿಎಂಸಿ ಪದಾಧಿಕಾರಿಗಳು ಮತ್ತು ಮುಖ್ಯ ಅಡುಗೆಯವರಿಗೆ ಸಮಗ್ರ ಮಾಹಿತಿ ನೀಡಲಾಯಿತು.
ಕಾರ್ಯಾಗಾರದಲ್ಲಿ ಕ್ಯಾಶ್ಬುಕ್ ನಿರ್ವಹಿಸುವಾಗ ಪಾಲಿಸಬೇಕಾದ ನಿಯಮಗಳು, ದಾಖಲಾತಿಯಲ್ಲಿ ಆಗಬಾರದ ತಪ್ಪುಗಳು, ಶಾಲಾ ಮುಖ್ಯ ಶಿಕ್ಷಕರಿಗೆ ನೀಡಲಾದ ಪ್ರಮುಖ ಸೂಚನೆಗಳು ಹಾಗೂ ಕ್ಯಾಶ್ಬುಕ್ ನಿರ್ವಹಣೆಯಿಂದ ದೊರೆಯುವ ಪ್ರಯೋಜನಗಳ ಕುರಿತು ವಿವರಿಸಲಾಯಿತು.
ಅಲ್ಲದೆ, ದಿನನಿತ್ಯದ ಆಹಾರ ಧಾನ್ಯಗಳ ಬಳಕೆ ಮತ್ತು ಖರ್ಚುಗಳ ದಾಖಲಾತಿ, ಬ್ಯಾಂಕ್ ವ್ಯವಹಾರಗಳು, ಚೆಕ್ಬುಕ್ ನಿರ್ವಹಣೆ, ಜಿಎಸ್ಟಿ ಬಿಲ್ಗಳು ಹಾಗೂ ವೋಚರ್ಗಳನ್ನು ಕ್ರಮಬದ್ಧವಾಗಿ ಸಂರಕ್ಷಿಸುವ ವಿಧಾನಗಳ ಬಗ್ಗೆ ತಿಳಿಸಿಕೊಡಲಾಯಿತು.
ಬಿಸಿಯೂಟ ಯೋಜನೆಯಡಿ ಪ್ರತಿಯೊಂದು ಹಣಕಾಸಿನ ವ್ಯವಹಾರಕ್ಕೂ ಸೂಕ್ತ ದಾಖಲೆಗಳನ್ನು ನಿರ್ವಹಿಸುವುದು, ಆದಾಯ ಮತ್ತು ವೆಚ್ಚಗಳ ವಿವರಗಳನ್ನು ಕಾಲಕಾಲಕ್ಕೆ ದಾಖಲಿಸುವುದು ಹಾಗೂ ಲೆಕ್ಕಪತ್ರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮುಖ್ಯವಾಗಿದೆ.
ಈ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರು, ಎಸ್ಡಿಎಂಸಿ ಪದಾಧಿಕಾರಿಗಳು ಮತ್ತು ಶಾಲೆಯ ಮುಖ್ಯ ಅಡುಗೆಯವರು ತಮ್ಮ ಜವಾಬ್ದಾರಿಗಳನ್ನು ಸಮರ್ಕವಾಗಿ ನಿರ್ವಹಿಸುವಂತೆ ಸಲಹೆ ನೀಡಲಾಯಿತು.
ಕಾರ್ಯಕ್ರಮದ ಸ್ವಾಗತವನ್ನು ಕೆಜೆಎಸ್ ಮಹಾಲಿಂಗಪುರದ ಸಿಆರ್ಪಿ ಶ್ರೀ ಎಸ್.ಎಂ. ಮುಗೆನ್ನವರ ನೆರವೇರಿಸಿ, ತರಬೇತಿಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಡಿ.ಆರ್. ಖ್ಯಾಡಿ ಅವರು ಇಲಾಖೆಯ ಪ್ರಮುಖ ಮಾಹಿತಿಗಳನ್ನು ನೀಡಿದರು. ಶ್ರೀ ಪ್ರಕಾಶ್ ಉದ್ಗಟ್ಟಿ ಅವರು ಎಫ್ಎಲ್ಎನ್ ನಮೂನೆಗಳು ಹಾಗೂ ಸಾಧನಾ ಪರೀಕ್ಷೆಯ ಕುರಿತು ಮಾಹಿತಿ ನೀಡಿದರು. ಮುಖ್ಯ ಅಡುಗೆಯವರ ಸಭೆಯ ನಡಾವಳಿಗಳ ಕುರಿತು ಶ್ರೀ ಎಂ.ಎಚ್. ಅಲಾಸ ತಿಳಿಸಿದರು.
ಶಬಾನ ಕಿಲಾರಿ ಅವರು ಕ್ಯಾಶ್ಬುಕ್ ನಿರ್ವಹಣೆಯ ವಿಧಾನ ಹಾಗೂ ಅದರ ಮಹತ್ವದ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.ಕಾರ್ಯಕ್ರಮದ ವಂದನಾರೆ್ಣಯನ್ನು ಶ್ರೀ ಬಿ.ಕೆ. ಸಬರದ ನೆರವೇರಿಸಿದರು.