ಡಾ ಅಮೀರ್ ಹಮ್ಜಾ ನದಾಫ್‌ಗೆ ಸನ್ಮಾನ
ಕೊಪ್ಪಳ 22 : ನಗರದ ಸರದಾರ ಗಲ್ಲಿ ಯಲ್ಲಿ ರವಿವಾರದಂದು ಹಜರತ್ ಮಹಬೂಬೇ ಸುಭಾನಿ ಗ್ಯಾರವಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜರುಗಿದ ಸಾಮೂಹಿಕ ವಿವಾಹ ನಿಕಾ ಕಾರ್ಯಕ್ರಮದಲ್ಲಿ ಡಾ, ಅಮೀರ್ ಹಮ್ಜಾ ನದಾಫ್ ರವರಿಗೆ ಸನ್ಮಾನಿಸಲಾಯಿತು, ಸರ್ದಾರ್ ಗಲ್ಲಿ ಮುಸ್ಲಿಂ ಪಿಂಜಾರ್ ಪಂಚ್ ಕಮಿಟಿ ವತಿಯಿಂದ ಜರುಗಿದ 40 ಜೋಡಿಗಳ ಸಾಮೂಹಿಕ ವಿವಾಹ ನಿಕಾಹ ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೇ ಸಾಮಾಜಿಕ ಮತ್ತು ವೃತ್ತಿ ಶಿಕ್ಷಣದ ಸೇವೆಗಾಗಿ ಡಾಕ್ಟರೇಟ್ ಪಡೆದ ಅಮೀರ್ ಹಮ್ಜಾ ನದಾಫ್ ರವರಿಗೆ ಓಣಿಯ ಪರವಾಗಿ ಪಂಚ್ ಕಮಿಟಿಯ ವತಿಯಿಂದ ಸನ್ಮಾನಿಸಿ ಶುಭ ಕೋರಲಾಯಿತು,,
ಅಮೀರ್ ಹಮ್ಜಾ ನದಾಫ್ ರವರಿಗೆ ಡಾಕ್ಟರೇಟ್ ಪ್ರಶಸ್ತಿ ಲಭಿಸಿರುವುದು ನಮ್ಮ ಸರದಾರದಲ್ಲಿ ಓಣಿ ಹಾಗೂ ಕೊಪ್ಪಳ ಜಿಲ್ಲೆಗೆ ಅದರಲ್ಲಿ ವಿಶೇಷವಾಗಿ ನಮ್ಮ ನದಾಫ್ ಪಿಂಜಾರ ಮುಸ್ಲಿಂ ಸಮಾಜಕ್ಕೆ ಹೆಮ್ಮೆ ಉಂಟು ಮಾಡಿದೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ,ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟಕರ ಪ್ರಮುಖರಾದ ಪಂಚ್ ಕಮಿಟಿ ಅಧ್ಯಕ್ಷ ಖಾದರ್ ಸಾಬ್ ಕುದುರೆಮೋತಿ ಸಂಘದ ರಾಜ್ಯ ಕೋಶಾಅಧ್ಯಕ್ಷ ಶಾಬುದ್ದೀನ್ ಸಾಬ್ ನೂರ್ ಬಾಷಾ, ನಗರಸಭೆಯ ಮಾಜಿ ಸದಸ್ಯ ಮಾನ್ವಿ ಪಾಷಾ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು,