ಇಂದು ಕೊಪ್ಪಳದಲ್ಲಿ 40 ಬಡ ಮುಸ್ಲಿಮ್ ಜೋಡಿಗಳ ಉಚಿತ ಸಾಮೂಹಿಕ ವಿವಾಹ:
ಕೊಪ್ಪಳ 21: ಹಜರತ್ ಮೆಹಬೂಬ ಸುಭಾನಿ (ರ.ಅ.) ಅವರ ಪವಿತ್ರ ಗ್ಯಾರವಿ ಶರೀಫ್ ಆಚರಣೆಯ ನಿಮಿತ್ತ ನಗರದ ಸರ್ದಾರ ಗಲ್ಲಿಯ ಮುಸ್ಲಿಂ ಪಿಂಜಾರ ಪಂಚ ಕಮಿಟಿ (ರಿ) ವತಿಯಿಂದ ಸತತ 22ನೇ ವರ್ಷದ 40 ಬಡ ಮುಸ್ಲಿಂ ಜೋಡಿಗಳ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಇದೇ ನವೆಂಬರ್ 22, ರವಿವಾರ ಬೆಳಿಗ್ಗೆ 11.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸರದಾರಗಲ್ಲಿ ಮುಸ್ಲಿಂ ಪಿಂಜಾರ್ ನದಾಫ್ ಪಂಚ್ ಕಮಿಟಿ ಅಧ್ಯಕ್ಷ ಖಾದರ್ ಸಾಬ್ ಕುದುರಿಮೋತಿ ತಿಳಿಸಿದರು,
ಅವರು ಶುಕ್ರವಾರ ಬೆಳಗ್ಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಏರಿ್ಡಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿಕೊಪ್ಪಳ ನಗರದ ಸುಮಾರು 30 ಪಂಚ ಕಮಿಟಿಗಳಲ್ಲಿ ಅತ್ಯಂತ ಹಿಂದುಳಿದ ಪಿಂಜಾರ ಸಮುದಾಯದ ಪ್ರಾಧಾನ್ಯವಿರುವ ಈ ಓಣಿಯಲ್ಲಿ, ನಿತ್ಯ ದುಡಿಮೆ ಮಾಡುವ ಬಡ ಕುಟುಂಬಗಳು ತಮ್ಮ ಶಕ್ತಾನುಸಾರ ತನು-ಮನ-ಧನ ನೀಡಿ ಕಳೆದ 22 ವರ್ಷಗಳಿಂದ ನಿರಂತರವಾಗಿ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿರುವುದು ರಾಜ್ಯ ಹಾಗೂ ರಾಷ್ಟ್ರಕ್ಕೆ ಮಾದರಿಯಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ವಧುಗಳಿಗೆ ದಾನಿಗಳಾದ ಕೆಪಿಸಿಸಿ ರಾಜ್ಯ ಸಂಯೋಜಕ ಡಾ. ಕೆ.ಎಂ. ಸೈಯ್ಯದ್ ಅವರು ಬಂಗಾರದ ಒಡವೆಗಳನ್ನು ನೀಡುತ್ತಿದ್ದಾರೆ ಎಂದು ವಿವರಿಸಿದರು, ಮುಂದುವರೆದು ಮಾತನಾಡಿಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು 2026ರ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಕರಾದ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹಾಗೂ ಹಜ್ರತ್ ಅಲ್ಲಮಾ ಮೌಲಾನಾ ಮುಫ್ತಿ ಮಹ್ಮದ್ ನಜೀರ್ ಅಹ್ಮದ್ ಖಾದ್ರಿ (ಕೊಪ್ಪಳ) ಅವರು ವಹಿಸಲಿದ್ದಾರೆ. ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಸ್ಲಿಂ ಪಿಂಜಾರ ಪಂಚ ಕಮಿಟಿ ಅಧ್ಯಕ್ಷ ಖಾದರಸಾಬ್ ಕುದ್ರಿಮೊತಿ ಅಧ್ಯಕ್ಷತೆ ವಹಿಸಲಿದ್ದಾರೆ.
ಗೌರವಾಧ್ಯಕ್ಷ ಹಾಗೂ ನದಾಫ್ ಸಂಘದ ರಾಜ್ಯ ಕೋಶಾಧಿಕಾರಿ ಶಹಾಬುದ್ದೀನ್ಸಾಬ್ ನೂರಭಾಷ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಹೆಚ್. ಜಲೀಲಸಾಬ್, ಚಿತ್ರದುರ್ಗದ ವಿಶ್ವಮಾನವ ಸಾಂಸ್ಕೃತಿಕ ವಿದ್ಯಾ ಸಂಸ್ಥೆಯ ಸಂಸ್ಥಾಪಕ ನೀಲಕಂಠದೇವರು, ಕೆಪಿಸಿಸಿ ರಾಜ್ಯ ಸಂಯೋಜಕ ಡಾ. ಕೆ.ಎಂ. ಸೈಯ್ಯದ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್,
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯ ಡಾ. ಬಸವರಾಜ್ ಕ್ಯಾವಟರ್, ಮಾಜಿ ನಗರಸಭೆ ಅಧ್ಯಕ್ಷರಾದ ಮುದಿಯಪ್ಪಣ್ಣ ಕವಲೂರು ಮತ್ತು ಅಮ್ಮದ್ ಪಟೇಲ್, ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಅಜ್ಮೀರ್ ಅಲಿ, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ಸಮಾಜ ಸೇವಕ ವೆಂಕಟೇಶ್ ಬಾರಕೇರ್, ಜೆಡಿಎಸ್ ಮುಖಂಡ ವೀರೇಶ್ ಮಹಾಂತಯ್ಯನ ಮಠ, ಪಿಂಜಾರ್ ನದಾಸ ಸಂಘದ ಜಿಲ್ಲಾಧ್ಯಕ್ಷ ಕಾಸಿಂ ಅಲಿ ಮುದ್ದಾಬಳ್ಳಿ ,
ವಿಭಾಗಿಯ ಅಧ್ಯಕ್ಷ ಶಾಶಾ ಸಾಬ್ ಬಳ್ಳಾರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸಲೀಮಾ ಜಾನ್ , ವಿಜಯನಗರದ ಜಿಲ್ಲಾಧ್ಯಕ್ಷ ಹೊನ್ನೂರು ಸಾಬ್, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಮೌಲಾಲಿ ಪಿ, ಗದಗ್ ಜಿಲ್ಲಾಧ್ಯಕ್ಷ ಖಾದರ್ ಸಾಬ್ ಹಲ್ಯಾಳ, ಧಾರವಾಡ ಜಿಲ್ಲಾ ಅಧ್ಯಕ್ಷ ಫಕೀರ್ ಸಾಬ್ ನದಾಫ್, ಭಾಗ್ಯನಗರ ಪಠಣ ಪಂಚಾಯಿತಿ ಉಪಾಧ್ಯಕ್ಷ ಹೊನ್ನೂರ್ ಸಾಬ್ ಬೈರಾಪುರ, ಕೊಪ್ಪಳದ ಅಸಮಾನ್ ಸಾಬ್ ನದಾಫ್, ಮತ್ತು ನಗರ ಕಾರ್ಯದರ್ಶಿ ಬಾಬುಸಾಬ್ ನೂರ್ ಬಾಷಾ,ಸೇರಿದಂತೆ ನದಾಫ್ ಪಿಂಜಾರ ಸಂಘದ ಪದಾಧಿಕಾರಿಗಳು, ಮುಸ್ಲಿಂ ಪಂಚ್ ಕಮಿಟಿಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕಾರ್ಯ ಕ್ರಮ ಸಂಘಟಕರು ತಿಳಿಸಿದರು.
ಸುತ್ತಮುತ್ತಲಿನ ಗ್ರಾಮ ಹಾಗೂ ನಗರಗಳಿಂದ ಸುಮಾರು 8,000ಕ್ಕೂ ಅಧಿಕ ಜನರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನೀರೀಕ್ಷೆಯಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸರ್ದಾರ್ ಗಲ್ಲಿ ಮುಸ್ಲಿಂ ಪಿಂಜಾರ್ ಪಂಚ್ ಕಮಿಟಿ ಅಧ್ಯಕ್ಷ ಖಾದರ್ ಸಾಬ್ ಕುದುರಿಮೋತಿ ರವರು ತಿಳಿಸಿ ಸರ್ವರನ್ನು ಸ್ವಾಗತಿಸಿದರು,
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಪಿಂಚಾರ ನದಾಫ್ ಸಂಘದ ರಾಜ್ಯ ಕೋಶ ಅಧ್ಯಕ್ಷರಾದ ಶಾಬುದ್ದೀನ್ ಸಾಬ್ ನೂರ್ ಬಾಷಾ, ತಾಲೂಕ ಅಧ್ಯಕ್ಷ ಅಸಮಾನ್ ಸಾಬ್ ನದಾಫ್ ಕರಕಿಹಳ್ಳಿ, ನಗರ ಸಭೆಯ ಮಾಜಿ ಸದಸ್ಯ ಮಾನ್ವಿ ಪಾಶಾ, ಕೊಪ್ಪಳ ನದಾಫ್ ಸಂಘದ ತಾಲೂಕು ಉಪಾಧ್ಯಕ್ಷ ಫಕೃದ್ದೀನಸಾಬ್ ನದಾಫ್ (ಚುಕ್ಕನಕಲ್) ಕಮಿಟಿ ಸದಸ್ಯರಾದ ಖಾಜಾಸಾಬ್ ಮತ್ತು ಅಬ್ದುಲ್ ರೆಹಮಾನ್ ಹುಬ್ಬಳ್ಳಿ ಸೇರಿದಂತೆ ಅನೇಕರು ಉಪಸಿತರಿದ್ದು ಸರ್ವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡರು.