ಬೆಳಗಾವಿ

ಆದಿ ಜಾಂಬವ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ರಾವಸಾಹೇಬ ಐಹೊಳೆ ಆಯ್ಕೆ

ಆದಿ ಜಾಂಬವ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ರಾವಸಾಹೇಬ ಐಹೊಳೆ ಆಯ್ಕೆ


          ಸಂಬರಗಿ 21 :ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕ್‌ ಸೇವೆ ನೋಡಿ ರಾಜ್ಯದ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಹಾಗೂ ಪಕ್ಷದ ಸ್ಥಳೀಯ ಶಾಸಕರು ವರಿಷ್ಠರು ಪ್ರಯತ್ನದಿಂದ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಆಯ್ಕೆ ಮಾಡಿದ್ದು. ನಾನು ಪಕ್ಷ ಹಾಗೂ ಸಮಾಜದ ವಿವಿಧ ಕಾರ್ಯಗಳನ್ನು ಸಮಸ್ಯೆಗಳನ್ನು ಗಮನ ಹರಿಸಿ ಕ್ರಮ ಕೈಗೊಳ್ಳಾಗುವುದು ಸದಾ ಸಿದ್ಧವಾಗಿದ್ದೇನೆ ಎಂದು  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿರುವ ಹಾಗೂ ಆದಿ ಜಾಂಬವ ನಿಗಮದ ನಿರ್ದೇಶಕರಾದ ರಾವಸಾಹೇಬ್ ಐಹೊಳೆ ಹೇಳಿದರು.   

          ಆದಿ ಜಾಂಬವ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಆಯ್ಕೆ ಮಾಡಿದ್ದು. ನಂತರ ತಾಂವಶಿ ಗ್ರಾಮದಲ್ಲಿ ಸಮಾಜದಿಂದ ಸತ್ಕರ್ಷಿ ನಂತರ ಸುದ್ದಿಗಾರಗಿ ಮಾತನಾಡಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕ್ ನಿಷ್ಠೆಯಿಂದ ಕೆಲಸ ಮಾಡಿದ ನಂತರ ಪಕ್ಷದ ಹೈಕಮಾಂಡ್ ಸರಕಾರ ಗುರುತಿಸಿ ನನ್ನನ್ನು ನಿಗಮದ ನಿರ್ದೇಶನದ ಆಯ್ಕೆ ಮಾಡಿದ್ದಾರೆ ನಾನು ಪಕ್ಷದ ವರಿಷ್ಠ ಅಭಿನಂದಿಸುತ್ತೇನ.ೆ 

              ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರ ಆಯ್ಕೆಯು ಅಥಣಿ ಕ್ಷೇತ್ರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಸಾಮಾಜಿಕ ಕ್ಷೇತ್ರದಲ್ಲಿ ಜನಪರ ಸೇವೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿರುವ ಅವರು, ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರೊಂದಿಗೆ ಉತ್ತಮ ಒಡನಾಟ ಹೊಂದಿದೀನೀ ವಿಶೇಷವಾಗಿ ಪರಿಶಿಷ್ಟ ಜಾತಿ ಸಮುದಾಯದ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿ,

            ಸಾಮಾಜಿಕ ನ್ಯಾಯ ಹಾಗೂ ಯುವಜನರ ಸಬಲೀಕರಣದ ಆಶಯಗಳನ್ನು ಹೊಂದಿರುವ ನನ್ನ ಸೇವೆಯನ್ನು ಗುರುತಿಸಿ ಈ ಜವಾಬ್ದಾರಿ ನೀಡಿರುವುದು ಮಹತ್ವ ಪಡೆದಿದೆ. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ದೊರೆತಿರುವ ಈ ಅವಕಾಶವು ಆದಿ ಜಾಂಬವ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡುವ ನೀರೀಕ್ಷೆ ಮೂಡಿಸಿದೆ.

         ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡುವುದರ ಜೊತೆಗೆ ಸಮುದಾಯದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಶ್ರಮಿಸುವ ಮೂಲಕ ರಾಜ್ಯಮಟ್ಟದ ಜವಾಬ್ದಾರಿ ದೊರೆತಿರುವುದು ಸಮಾಜ ಅಭಿವೃದ್ಧಿ ಮಾಡುವುದು ನಂದು ಒಂದೇ ಗುರಿ ಇದೆ ಎಂದು ಹೇಳಿದರು.ಈ ವೇಳೆ ಪಾಂಡುರಂಗ ಕಾಂಬಳೆ ಸುರೇಶ್ ವಾಗಮರೇ ಹನುಮಂತ ಅರ್ಧಊರು ಕುಮಾರ್ ಗಸ್ತಿ ಉಪಸ್ಥಿತಿ ಇದ್ದರು. 


ಸುದ್ದಿ ಓದಿ