ಪಾಲಬಾವಿ ಗ್ರಾಪಂ ಮಾಜಿ ಅಧ್ಯಕ್ಷೆ ಶೋಭಾ ಕುರಬೆಟ್ಟಿಗೆ "ಕನ್ನಡರತ್ನ" ಪ್ರಶಸ್ತಿ ಲಭಿಸಿದೆ;
ಪಾಲಬಾವಿ 21: ರಾಷ್ಟ್ರೀಯ ಸಮಾಜ ಕಲ್ಯಾಣ ಸೇವಾ ಸಂಸ್ಥೆ(ರಿ) ಬೆಳಗಾವಿ, ಇವರ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ರಾಜ್ಯಮಟ್ಟದ ಸಮಾರಂಭ -2026 ಕುಂದಾ ನಗರಿ ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ರವಿವಾರ ದಿ.22 ರಂದು ಮುಂಜಾನೆ 11ಗಂಟೆಗೆ ಪಾಲಬಾವಿ ಗ್ರಾಪಂ ಮಾಜಿ ಅಧ್ಯಕ್ಷೆ ಶ್ರೀಮತಿ ಶೋಭಾ ಪುರಂದರ ಕುರಬೆಟ್ಟಿ ಇವರಿಗೆ "ಸುವರ್ಣ ಕರ್ನಾಟಕ ಕನ್ನಡರತ್ನ" ಪ್ರಶಸ್ತಿಯು ಲಭಿಸಿದೆ. ಸಮಾಜ ಸೇವಕರಾಗಿ, ಚುನಾಯಿತ ಜನಪ್ರತಿನಿಧಿ ಸದಸ್ಯರಾಗಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಪರಿಗಣಿಸಿ ಶ್ರೀಯುತರಿಗೆ "ಕನ್ನಡರತ್ನ" ಪ್ರಶಸ್ತಿ ಲಭಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಮಚ್ಚೆನ್ನವರ, ಕಾರ್ಯದರ್ಶಿ ಲಕ್ಷ್ಮಿ ಮಚ್ಚೆನ್ನವರ ಪ್ರಕಟಿನಲ್ಲಿ ತಿಳಿಸಿದ್ದಾರೆ.