ಬೆಳಗಾವಿ

ಉಗಾರ ಹಿಐನಾಪುರ ಬಾರಿಗಡ್ಡೆ ರಸ್ತೆ ಅಭಿವೃದ್ಧಿಗೆ 30 ಲಕ್ಷ ರೂ. ಅನುದಾನದಲ್ಲಿ ಶಾಸಕ ರಾಜು ಕಾಗೆ ಭೂಮಿ ಪೂಜೆ

ಉಗಾರ ಹಿಐನಾಪುರ ಬಾರಿಗಡ್ಡೆ ರಸ್ತೆ ಅಭಿವೃದ್ಧಿಗೆ 30 ಲಕ್ಷ ರೂ. ಅನುದಾನದಲ್ಲಿ ಶಾಸಕ ರಾಜು ಕಾಗೆ ಭೂಮಿ ಪೂಜೆ
MLA Raju Kage performs groundbreaking ceremony for the development of the Ugar-Hainapura-Barigadde r

          ಕಾಗವಾಡ 21 : ಉಗಾರ ಖುರ್ದ ಪುರಸಭೆ ವ್ಯಾಪ್ತಿಯ ಉಗಾರ ಹಿಐನಾಪುರ ಬಾರಿಗಡ್ಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಾಜು ಕಾಗೆ ಅವರು ರೂ.30 ಲಕ್ಷ ಅನುದಾನದಲ್ಲಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಈ ರಸ್ತೆ ಅಭಿವೃದ್ಧಿಯಿಂದ ಸ್ಥಳೀಯ ಜನರಿಗೆ ಹಾಗೂ ರೈತರಗೆ ಸಂಚಾರಕ್ಕೆ ಅನುಕೂಲವಾಗಲಿದ್ದು, ಕ್ಷೇತ್ರದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

           ಈ ಭಾಗದ ಸಾರ್ವಜನಿಕರು ಮುತುವರ್ಜಿ ವಹಿಸಿ ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವಂತೆ ಗುತ್ತಿಗೆದಾರರು ಕೂಡ ಗುಣಮಟ್ಟದ ರಸ್ತೆ ಮಾಡಬೇಕೆಂದು ತಿಳಿಸಿದರು. ಜನಸೇವಕ ವಿನಾಯಕ ಕಾಂಬಳೆ ಮಾತನಾಡಿ, ಐನಾಪೂರ ಮುಖ್ಯ ರಸ್ತೆಯಿಂದ ಬಾರಿಗಡ್ಡೆ ವರಿಗೆ ರಸ್ತೆ ಅಭಿವೃದ್ಧಿಗಾಗಿ ಶಾಸಕರು ವಿಶೇಷ ಪ್ರಯತ್ನ ಮಾಡಿ, ಎರಡು ವರ್ಷಗಳ ಹಿಂದೆ 30 ಲಕ್ಷ ರೂ. ನಂತರ ಒಂದು ಕೋಟಿ ಅನುದಾನದಲ್ಲಿ ಡಾಂಬರೀಕರಣ.

             ಈಗ ಉಳಿದ ಎರಡು ಕಿಲೋಮೀಟರ್ ರಸ್ತೆಗೆ 30 ಲಕ್ಷ ಅನುದಾನ ನೀಡಿ, ಇಲ್ಲಿಯ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರಿಗೆ ಈ ಭಾಗದ ಜನತೆಯ ವತಿಯಿಂದ ಧನ್ಯವಾದ ತಿಳಿಸುತ್ತೇನೆ ಎಂದರು. ಈ ವೇಳೆ ಮುಖಂಡರಾದ ರಾಜೇಂದ್ರ ಕಾಂಬಳೆ, ಪ್ರೇಮ ಬಾಲೋಜಿ, ರಾಜು ಅಲೋಸೆ, ಕುಮಾರ ಪಾಟೀಲ, ತಾನಾಜಿ ಶೆಟ್ಟಿ, ಪ್ರಲ್ಹಾದ್ ಶೇಡಶ್ಯಾಳೆ, ವಿನಾಯಕ ಕಾಂಬಳೆ-ಜನಸೇವಕ, ಅಪ್ಪಾಸಾಹೇಬ ಐಹೊಳೆ, ಅರುಣ ಬಾಲೋಜಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ