ವೃತಾಚರಣೆ ಸಮಾರೋಪ, ಧರ್ಮಸಭೆ ಮತ್ತು “ಬ್ರಹ್ಮ ಪ್ರಶಸ್ತಿ” ಪ್ರದಾನ ಕಾರ್ಯಕ್ರಮ
ಲೋಕದರ್ಶನ ವರದಿ
ಕಲಕೇರಿ 21 : ಸಮೀಪದ ತಿಳಗೂಳ ಗ್ರಾಮದಲ್ಲಿ ರವಿವಾರ ದಿ.22 ರಂದು ಚಕ್ರಬಗಳಾಂಬ ಶಕ್ತಿಪೀಠ ಬ್ರಹ್ಮವಿದ್ಯಾಶ್ರಮದ ಮಹೇಶ್ವರಾನಂದತೀರ್ಥ ಮಹಾಸ್ವಾಮಿಗಳ 11ನೇ ವರ್ಷದ ವ್ರತಾಚರಣೆಯ ಸಮಾರೋಪ ಸಮಾರಂಭದ ಪ್ರಯುಕ್ತ ಧರ್ಮಸಭೆ ಮತ್ತು 2026ನೇ ಸಾಲಿನ ಪ್ರತಿಷ್ಠಿತ ಬ್ರಹ್ಮ ಪ್ರಶಸ್ತಿ ಪ್ರಧಾನ ಹಾಗೂ ಮೃತ್ಯುಂಜಯ ಪುನರ್ಜೀವನೋತ್ಸವ ಕಾರ್ಯಕ್ರಮ ನಡೆಯಲಿದೆ.
ರವಿವಾರ ದಿ. 22ರ ಬೆಳಿಗ್ಗೆ 9 ಗಂಟೆಗೆ ಶಕ್ತಿಮಹಾಪೂಜೆ, ಮಹಾಯಜ್ಞ ಹಾಗೂ ಜಯಶ್ರೀ ರಾಜುಗೌಡ ಪಾಟೀಲ, ಕುದರಿಸಾಲೋಡಗಿ ಇವರ ನೇತೃತ್ವದಲ್ಲಿ 1008 ಮುತ್ತೈದೆಯರಿಗೆ ಉಡಿ ತುಂಬುವದು ಮತ್ತು 11ನೇ ವರ್ಷದ ವ್ರತಾಚರಣೆ ಸಮಾರೋಪ ಮತ್ತು ಧರ್ಮಸಭೆ, ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ಸಿಂದಗಿ-ಆಲಮೇಲ ಮೂರುಝಾವದೀಶ್ವರಮಠದ ರಾಮಚಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು, ರಾಂಪೂರ ಆರೂಢಮಠದ ಸಮರ್ಥ ಸದ್ಗುರು ನಿತ್ಯಾನಂದ ಮಹಾರಾಜರು, ನೀಲೂರ ಹಿರೊಳ್ಳಿ ಹಿರೇಮಠದ ಶಿವರುದ್ರ ಶಿವಾಚಾರ್ಯರು,
ಕಲಕೇರಿ ದೇವಿ ಉಪಾಸಕರಾದ ಮಲಕಮ್ಮದೇವಿ ಉಪಸ್ಥಿತಿ ಇರಲಿದ್ದು, ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಶಾಸಕರಾದ ಸೋಮನಗೌಡ ಪಾಟೀಲ,
ಸಾಸನೂರ, ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಪ್ರಭುಗೌಡ ಪಾಟೀಲ, ಚಬನೂರ, ಕಲಬುರಗಿ ಪಿಎಸ್ಐ ಯಶೋಧಾ ಕಟಕೆ, ಕಲಕೇರಿ ಪಿಎಸ್ಐ ಮಲಕನಗೌಡ ಬಿ. ಬಿರಾದಾರ, ಡಾಽಽ ರವೀಂದ್ರ ಮ. ಮದ್ದರಕಿ ಯಶೋಧಾ ಆಸ್ಪತ್ರೆ ವಿಜಯಪುರ, ಮುಖಂಡರಾದ ಬಸನಗೌಡ ಎಸ್.ಪಾಟೀಲ ಯಡಿಯಾಪುರ, ಶಿವಾನಂದ ಶಿಲ್ಪಗಳು. ಶಿವಾನಂದ ಆಶ್ರಮ. ವಡವಡಗಿ, ಬಸವರಾಜ ಶರಣರು, ವಸ್ತಾರಿ,
ಈಶ್ವರ್ಪ ಪತ್ತಾರ ಹಂಚಲಿ, ಲಕ್ಷ್ಮೀ ಈರಣ್ಣ ಶೇರಿಕಾರ ಕಲಬುರಗಿ, ದೇವೆಂದ್ರ ಸಂ. ಪತ್ತಾರ ಕುದರಿಸಾಲೋಡಗಿ ಸೇರಿದಂತೆ ಅನೇಕ ಗಣ್ಯಮಾನ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಇದಕ್ಕೂ ಮುನ್ನ ದಿ. 21 ರಂದು ರಾತ್ರಿ 9 ಗಂಟೆಗೆ ಆಲಮೇಲ, ತಿಳಗೂಳ, ಕೆರುಟಗಿ, ಕಲಕೇರಿ, ಇವಣಗಿ, ತಿರುಪತಿ ನಗರ, ಕಾಚಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಂದ ಸಂಗೀತ ಸೇವೆ ನಡೆಯಲಿದೆ, ಕಾರ್ಯಕ್ರಮದಲ್ಲಿ ಅನ್ನಪ್ರಸಾದದ ವ್ಯವಸ್ಥೆ ಇರುತ್ತದೆ ಎಂದು ಆಶ್ರಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.