ಬಸವಣ್ಣನವರ ಬಗ್ಗೆ ರವಿ ಹಂಜ್ ಹೇಳಿಕೆ ಖಂಡನಾರ್ಹ
ವಿಜಯಪುರ 21 : 12ನೇ ಶತಮಾನದ ಯುಗಪುರುಷ ಜಗಜ್ಯೋತಿ ಬಸವಣ್ಣನವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿರುವ ರವಿ ಹಂಜೆ ಅವರಹೇಳಿಕೆ ಹಾಸ್ಯಾಸ್ಪದವಾಗಿದ್ದು ಇಂತಹ ವಿಕೃತ ಬುದ್ಧಿಯುಳ್ಳ ಮನುಷ್ಯನನ್ನು ಗಡಿಪಾರು ಮಾಡಬೇಕು ಮತ್ತು ಇಂತಹ ವ್ಯಕ್ತಿಗೆ ಬಸವಾದಿ ಭಕ್ತರು ತಕ್ಕ ಪಾಠವನ್ನು ಕಲಿಸಬೇಕು ಬಸವಣ್ಣನವರು ಬಿಜ್ಜಳರಸನ ಕಾಲದಲ್ಲಿ ಎಷ್ಟೊಂದು ಪಾರದರ್ಶಕ ಆಡಳಿತವನ್ನು ನಡೆಸುತ್ತಿದ್ದರು ಎಂಬುದನ್ನು ಇತಿಹಾಸ ಹೇಳುತ್ತದೆ.
ಮಾರುವೇಶದಲ್ಲಿ ಬಸವಣ್ಣನವರ ಮನೆಗೆ ಹೋಗಿ ಪರೀಕ್ಷೆ ಮಾಡಬೇಕು ಎನ್ನುವಾಗ ಬಸವಣ್ಣನವರು ತಮ್ಮ ಕರ್ತವ್ಯದ ಲೆಕ್ಕಪತ್ರವನ್ನು ಬರೆಯುವಾಗ ಒಂದು ದೀಪವನ್ನು ಉರಿಸುತ್ತಿದ್ದರು ಮತ್ತೆ ಅದನ್ನು ನಂದಿಸಿ ಮತ್ತೊಂದು ದೀಪವನ್ನು ಹೆಚ್ಚಿ ಮತ್ತೆ ತಮ್ಮ ಕೆಲಸವನ್ನು ಮಾಡುತ್ತಿದ್ದರು. ಮಾರುವೇಷದ ಬಿಜ್ಜಳ ಅರಸರು ಇದು ಹೀಗೆಜಕೆ ಎಂದು ಯೋಚಿಸುತ್ತಾ ಮರುದಿನ ಬಸವಣ್ಣನವರು ಆಸ್ಥಾನಕ್ಕೆ ಬಂದಾಗ ಕೇಳಿದರಂತೆ ಬಸವಣ್ಣನವರೇ ನೀವು ರಾತ್ರಿ ಒಂದು ದೀಪದಲ್ಲಿ ಒಂದು ಕೆಲಸವನ್ನು ಮಾಡಿ ಮತ್ತೆ ಅದನ್ನು ನಂದಿಸಿ ಮತ್ತೊಂದು ದೀಪವನ್ನು ಬೆಳಗಿಸಿ ಮತ್ತೆ ತಮ್ಮ ಕಾರ್ಯವನ್ನು ಶುರು ಮಾಡಿಕೊಂಡಿರಲ್ಲ ಏಕೆ ಎಂದು ಪ್ರಶ್ನಿಸಿದರು.
ಗಾಬರಿಗೊಂಡ ಬಸವಣ್ಣನವರು "ಇದೆಲ್ಲ ತಮಗೆ ಹೇಗೆ ಗೊತ್ತಾಯಿತು ಪ್ರಭು"ಎಂದುಕೇಳಿದಾಗ ಅರಸರು ತಾವು ಬಸವಣ್ಣನವರನ್ನು ಪರೀಕ್ಷಿಸಲು ಬಂದಾಗ ಕಿಟಕಿಯಿಂದ ಇದನ್ನೆಲ್ಲವನ್ನು ನೋಡಿದ ಸಂದರ್ಭವನ್ನು ತಿಳಿಸಿದಾಗ ಬಸವಣ್ಣನವರು "ಮಹಾರಾಜರೇ ಮೊದಲನೇ ದೀಪದಲ್ಲಿ ಕೆಲಸ ಮಾಡಿದ್ದು ಸರ್ಕಾರದ ಕೆಲಸ ಎರಡನೇ ದೀಪದಲ್ಲಿ ಕೆಲಸ ಮಾಡಿದ್ದು ನನ್ನ ವೈಯಕ್ತಿಕ ಕೆಲಸ ಯಾವಾಗಲೂ ನಾನು ನನ್ನ ಸಂಬಳದಲ್ಲಿ ನನ್ನ ವ್ಯಯಕ್ತಿಕ ಕೆಲಸವನ್ನು ಹಾಗೂ ಸರ್ಕಾರಿ ಕೆಲಸವನ್ನು ಸರ್ಕಾರದ ಕರ್ಚಿನಲ್ಲಿ ಮಾಡುತ್ತೇನೆ" ಎಂದು ಹೇಳಿದಾಗ ಅಲ್ಲಿದ್ದ ಕೊಂಡಿ ಮಂಚಣ್ಣ ಸಮೇತ ಸಭಿಕರೆಲ್ಲರೂ ನಿಬ್ಬೆರಗಾಗಿ ನೋಡಿದರಂತೆ ಇದೆಲ್ಲ ಇತಿಹಾಸ.
ಈ ಪ್ರಸಂಗ ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ ಇವತ್ತು ಏನು ಬಸವಣ್ಣನವರ ಚಾರಿತ್ರ್ಯಕ್ಕೆ ಮಸಿ ಬೆಳೆಯುವಂತಹ ಕೆಲಸ ಮಾಡುತ್ತಿರುವವರು ಅರ್ಥಮಾಡಿಕೊಳ್ಳಬೇಕು ಇಂತಹ ಕೊಂಡಿ ಮಂಚಣ್ಣನಂಥವರನ್ನು ಸರಿಯಾಗಿ ದಾರಿಗೆ ತರಬೇಕೆಂದರೆ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಇಲ್ಲವೇ ಇವರನ್ನು ಬಡಿಪಾರು ಮಾಡಬೇಕು ಇತಿಹಾಸವನ್ನು ಬಲ್ಲವರು ಈ ರೀತಿ ಗೊಳ್ಳು ಮಾತುಗಳನ್ನು ಹೇಳಿ ಬಸವಭಕ್ತರ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಬಾರದು ಮತ್ತು ಅವರ ಹೇಳಿಕೆಗಳನ್ನು ಯಾರು ತಲೆಗೆ ಹಚ್ಚಿಕೊಳ್ಳಬಾರದು ಎಂದು ವಿನಂತಿಸಿಕೊಳ್ಳುತ್ತೇವೆ ಇವರ ಹೇಳಿಕೆಗೆ ತಕ್ಕ ಶಿಕ್ಷೆ ಆದರೆ ಮಾತ್ರ ಮುಂದೆ ಇಂತಹ ಅವಗಡಗಳನ್ನು ತಪ್ಪಿಸಲು ಸಾಧ್ಯ ಬಸವಣ್ಣನವರ ಚಾರಿತ್ರಿಕ್ಕೆ ಮಸಿ ಬೆಳೆಯುವ ಕೆಲಸದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾಗಬೇಕು. ಮಹಾದೇವಿ ಅಶೋಕ್ ಗೋಕಾಕ ಜಿಲ್ಲಾಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ ವಿಜಯಪುರ