ಸಾಮೂಹಿಕ ವಿವಾಹಗಳು ಬಡವರ ಪಾಲಿನ ಆಶಾಕಿರಣ: ಸಭಾಪತಿ ಸಲೀಂ ಅಹಮದ್
ಕೊಪ್ಪಳ 22: ಇಂದಿನ ದುಬಾರಿ ದುನಿಯಾದಲ್ಲಿ ಅದ್ಧೂರಿ ಮದುವೆಗಳನ್ನು ಮಾಡುವುದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ನುಂಗಲಾರದ ತುತ್ತಾಗಿದೆ. ಇಂತಹ ಕಷ್ಟದ ಕಾಲದಲ್ಲಿ ಸರಳ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಮೂಲಕ ಬಡವರ ಆರ್ಥಿಕ ಹೊರೆಯನ್ನು ಇಳಿಸುತ್ತಿರುವುದು ನಿಜಕ್ಕೂ ಪುಣ್ಯದ ಕೆಲಸ" ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹಮದ್ ಹೇಳಿದರು.ನಗರದ ಸರದಾರ ಗಲ್ಲಿಯ ಮುಸ್ಲಿಂ ಪಿಂಜಾರ್ ಪಂಚ್ ಕಮಿಟಿ ವತಿಯಿಂದ ಭಾನುವಾರ ಹಜರತ್ ಮೆಹಬೂಬ್ ಸುಭಾನಿ ಗ್ಯಾರವಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ ಆಯೋಜಿಸಲಾಗಿದ್ದ 40 ಜೋಡಿಗಳ ಸಾಮೂಹಿಕ ವಿವಾಹ (ನಿಕಾಹ್) ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ನೆರವಾಗುವ ಮೂಲಕ ಮುಸ್ಲಿಂ ಪಿಂಜಾರ್ ಪಂಚ್ ಕಮಿಟಿಯು ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ. ಆದರೆ, ಕೇವಲ ಮದುವೆ ಮಾಡಿದರೆ ಜವಾಬ್ದಾರಿ ಮುಗಿಯುವುದಿಲ್ಲ; ಸಮುದಾಯದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು.ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಶೈಕ್ಷಣಿಕ ಮತ್ತು ಆರ್ಥಿಕ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 40 ನವ ಜೋಡಿಗಳಿಗೆ ಶುಭ ಹಾರೈಸಿದ ಅವರು, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಹೊಂದಾಣಿಕೆಯಿಂದ ಆದರ್ಶ ಜೀವನ ನಡೆಸುವಂತೆ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹಮದ್ ಕರೆ ನೀಡಿ ಸರಕಾರದಿಂದ ಸಿಗಬಹುದಾದ ಸಹಾಯ ಸೌಕರ್ಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಶ್ರಮಿಸುವೆ ಎಂದರು. ಇದೆ ವೇಳೆ ಕೆಪಿಸಿಸಿ ಸಂಯೋಜಕ ಕೊಪ್ಪಳದ ಹಿರಿಯ ಮುಖಂಡ ಡಾ, ಕೆ ಎಂ ಸಯ್ಯದ್ ರವರು ತಮ್ಮ ಫೌಂಡೇಶನ್ ವತಿಯಿಂದ 40 ಜನ ವಧುಗಳಿಗೆ ಬಂಗಾರದ ತಾಳಿ ನೀಡಿದ್ದು ಅದನ್ನು ಸಹ ಸಲೀಂ ಅಹಮದ್ ರವರು ವಿತರಣೆ ಮಾಡಿದರು, ಸಮಾರಂಭದಲ್ಲಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಜೆಡಿಎಸ್ ಮುಖಂಡ ಸಿ, ವಿ, ಚಂದ್ರಶೇಖರ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿದರು,
ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಗಮಿಸಿ ನೂತನ ವಧು ವರರಿಗೆ ಶುಭ ಕೋರಿ ಆಶೀರ್ವದಿಸಿ ತೆರಳಿದರು ಸ್ಥಳೀಯ ಧರ್ಮಗುರು ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹಮದ್ ಖಾದ್ರಿ ತಸ್ಕಿನಿ ಸಾಣಿಜ್ಯ ವಹಿಸಿ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಸಿದರು, ಖಾಜಿ ಅಬ್ಬಾಸ್ ಅಲ್ಲಿ ರವರು ನಿಕಾಹ ಕಾರ್ಯಕ್ರಮ ನಡೆಸಿಕೊಟ್ಟರು, ಸರ್ದಾರ ಗಲ್ಲಿ ಮುಸ್ಲಿಂ ಪಿಂಜಾರ್ ಪಂಚ್ ಕಮಿಟಿಯ ಅಧ್ಯಕ್ಷ ಖಾದರ್ ಸಾಬ್ ಅಧ್ಯಕ್ಷತೆ ವಹಿಸಿದ್ದರು, ಕರ್ನಾಟಕ ರಾಜ್ಯ ನದಾ ಪಿಂಜಾರ್ ಸಂಘದ ಅಧ್ಯಕ್ಷ ಹೆಚ್ ಜಲೀಲ್ ಸಾಬ್ ಜಿಲ್ಲಾಧ್ಯಕ್ಷ ಕಾಸಿಮ ಅಲಿ ಮುದ್ದಾಬಳ್ಳಿ, ರಾಜ್ಯ ಕಮಿಟಿ ಕೋಶ ಅಧ್ಯಕ್ಷ ಶಾಬುದ್ದೀನ್ ಸಾಬ್ ನೂರ್ ಬಾಷಾ, ಹಿರಿಯ ನ್ಯಾಯವಾದಿ ಆಸಿಫ್ ಅಲಿ ,ಜೆಡಿಎಸ್ ಮುಖಂಡ ವೀರೇಶ್ ಮಹಾಂತಯ್ಯನ ಮಠ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್ ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷಾ ಕಾಟನ್ ನಗರಸಭೆಯ ಮಾಜಿ ಸದಸ್ಯ ಮನವಿ ಪಾಷಾ ಅಕ್ಬರ್ ಪಲ್ಟನ್,
ಸಹಾಯಕ ಆಯುಕ್ತ ಮಹಿಬೂಬ್ ಜಿಲಾನ್, ಅಸಮಾನ್ಸಾಬ್ ಕರ್ಕಿಹಳ್ಳಿ ಫಕ್ರು ನದಾಫ್ ಚುಕುನ್ಕಲ್ ಸಮಾಜಸೇವಕರಾದ ವೆಂಕಟೇಶ್ ಬಾರ್ಕೆರ್ ಶರಣಪ್ಪ ಸಜ್ಜನ್ ಅಧಿಕಾರಿ ಅಜ್ಮೀರ್ ಅಲಿ, ಶಾಶಾ ಸಾಬ್ ಬಳ್ಳಾರಿ, ಸಲೀಂ ಜಾನ್ ಹೊನ್ನೂರ್ ಸಾಬ್ ಬೈರಾಪುರ ಪಿ ಮೌಲಾಲಿ ಬಳ್ಳಾರಿ ಫಕೀರ್ ಸಾಬ್ ನದಾಫ್ ಬಾಬುಸಾಬ್ ನೂರ್ ಬಾಷಾ ಡಾ ಅಮೀರ್ ಹಮ್ಜಾ ನದಾಫ್,, ಸೇರಿದಂತೆ ಜನಪ್ರತಿನಿಧಿಗಳು, ಮುಸ್ಲಿಂ ಪಿಂಜಾರ್ ಪಂಚ್ ಕಮಿಟಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸಮಾಜದ ಮುಖಂಡರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.