ವಿಜಯಪುರ

ಅಭಿಮಾನಿಗಳ ಪ್ರೀತಿಗೆ ಮನಸೋತ ನಾಯಕ: ಸುಂದರ ಕಲಾಕೃತಿ ಮೂಲಕ ಗೌರವ ಸಲ್ಲಿಸಿದ ಯುವಕರು

ಅಭಿಮಾನಿಗಳ ಪ್ರೀತಿಗೆ ಮನಸೋತ ನಾಯಕ: ಸುಂದರ ಕಲಾಕೃತಿ ಮೂಲಕ ಗೌರವ ಸಲ್ಲಿಸಿದ ಯುವಕರು

           ವಿಜಯಪುರ   24:   ಅಭಿಮಾನಿ ಹೃದಯದಲ್ಲೀ ಅರಳಿದ ಕಲಾಕೃತಿ ಅಭಿಮಾನಗಳು ಕೇವಲ ಮಾತುಗಳಲ್ಲಿ ವ್ಯಕ್ತವಾಗುವುದಿಲ್ಲ... ಅವು ಕಲಾಕೃತಿಗಳಾಗಿ ಅರಳುತ್ತವೆ, ಹೃದಯದಲ್ಲಿ ಶಾಶ್ವತವಾಗಿ ನೆಲೆಸುತ್ತವೆ! ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡದ ಸುರೇಶ ನರಳೆ ಮತ್ತು ಅವರ ಸ್ನೇಹಿತರು ನನ್ನ ಮೇಲಿನ ಅಪಾರ ಪ್ರೀತಿ, ಅಭಿಮಾನ, ಹಾಗೂ ಗೌರವವನ್ನು ವಿಶಿಷ್ಟವಾಗಿ ವ್ಯಕ್ತಪಡಿಸಿದ್ದಾರೆ.  ಈ ಯುವಕರು ಸುಂದರವಾದ ಭಾವಚಿತ್ರವನ್ನು ಕೆತ್ತಿಸಿ ನೀಡುವ ಮೂಲಕ ತಮ್ಮ ಅಭಿಮಾನಕ್ಕೆ ಕಲಾತ್ಮಕ ಸ್ಪರ್ಶ ನೀಡಿದ್ದಾರೆ.

           ತಮ್ಮ ಈ ನಿಷ್ಕಲ್ಮಶ ಪ್ರೀತಿ, ಅಭಿಮಾನ ಮತ್ತು ಆತ್ಮೀಯತೆಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುವೆ.ಸೇವಕನಾಗುವುದು ಒಂದು ಜವಾಬ್ದಾರಿ; ಆದರೆ ತಮ್ಮ ಹೃದಯದಲ್ಲಿ ಸ್ಥಾನ ಪಡೆಯುವುದು ಅದಕ್ಕಿಂತಲೂ ದೊಡ್ಡ ಗೌರವ. ಎಲ್ಲ ಯುವಕರ ಪ್ರೀತಿ, ಅಭಿಮಾನ ಮತ್ತು ವಿಶ್ವಾಸವೇ ನನ್ನ ನಿಜವಾದ ಶಕ್ತಿ. ನೀವು ತೋರಿದ ಈ ಅಪೂರ್ವ ಪ್ರೀತಿಗೆ ಬೆಲೆ ಕಟ್ಟಲಾಗದು. ನಿಮ್ಮೆಲ್ಲರ ಪ್ರೀತಿ ಮತ್ತು ವಿಶ್ವಾಸಕ್ಕೆ ಸದಾ ಋಣಿಯಾಗಿರುತ್ತೇನೆ.ನೀವೆಲ್ಲ ಯುವಕರ ಪ್ರೀತಿ, ನನ್ನ ಶಕ್ತಿ... ನಿಮ್ಮೆಲ್ಲರ ವಿಶ್ವಾಸ, ನನ್ನ ಜವಾಬ್ದಾರಿ. 


ಸುದ್ದಿ ಓದಿ