ಹೂವಿನ ಹಡಗಲಿ

ತಾಲೂಕು ಸಮ್ಮೇಳನದ 5 ನಿರ್ಣಯಗಳು’ ಹೊಸಪೇಟೆ-ಹಡಗಲಿ, ಗುತ್ತಲ, ಹಾವೇರಿ ಹೊಸ ರೈಲು ಮಾರ್ಗ ಜಾರಿಗೊಳಿಸಿ

ತಾಲೂಕು ಸಮ್ಮೇಳನದ  5 ನಿರ್ಣಯಗಳು’ ಹೊಸಪೇಟೆ-ಹಡಗಲಿ, ಗುತ್ತಲ, ಹಾವೇರಿ ಹೊಸ ರೈಲು ಮಾರ್ಗ ಜಾರಿಗೊಳಿಸಿ
5 Resolutions of the Taluk Conference: Implement the new railway line connecting Hosapete–Hadagali,

ಲೋಕದರ್ಶನ ವರದಿ 

               ಹೂವಿನಹಡಗಲಿ 24 :  ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ತಾಲೂಕು ಕಸಾಪ ದಿಂದ ನಡೆದ ಒಂದು ದಿನದ ತಾಲೂಕು ದ್ವಿತೀಯ ಸಮ್ಮೇಳನಕ್ಕೆ ಭಾನುವಾರ  ತೆರೆ ಬಿದ್ದಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಈ ಭಾಗದ ಜನರ 5 ಬೇಡಿಕೆಗಳು 1) ’ಗದಗ ಮುಂಡರಗಿ ಹಡಗಲಿ ಹರಪನಹಳ್ಳಿ ರೈಲು ಮಾರ್ಗ’ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು.

            2) ಹೊಸಪೇಟೆ, ಹಡಗಲಿ, ಮೈಲಾರ, ಗುತ್ತಲ, ಹಾವೇರಿ ಹೊಸ ರೈಲು ಮಾರ್ಗಕ್ಕೆ ಚಾಲನೆ ನೀಡಿ ಹಡಗಲಿಯಲ್ಲಿ ರೈಲ್ವೆ ಜಂಕ್ಷನ್ ನಿರ್ಮಿಸಬೇಕು ಎಂದು ಸಮ್ಮೇಳನ ಬಹಿರಂಗ ಅಧಿವೇಶನದಲ್ಲಿ ನಿರ್ಣಯಿಸಲಾಯಿತು. 3) ಈ ಭಾಗದ ಜೀವನಾಡಿ ಯಾದ ತುಂಗಭದ್ರಾ ನದಿಯಿಂದ ಎಲ್ಲ ಕೆರೆಗಳಿಗೆ ಸಮರ​‍್ಕವಾಗಿ ನೀರು ತುಂಬಿಸಬೇಕು.

              4) ತಾಲ್ಲೂಕಿಗೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಬೇಕು. 5) ಧಾರ್ಮಿಕ ಸುಕ್ಷೇತ್ರಗಳಾದ ಬೆಟ್ಟದ ಮಲ್ಲೇಶ್ವರ, ಮೈಲಾರ, ಕುರುವತ್ತಿ, ಮದಲಗಟ್ಟಿಯನ್ನು ಪ್ರೇಕ್ಷಣೀಯ ಸ್ಥಳಗಳಾಗಿ ಅಭಿವೃದ್ಧಿಪಡಿಸುವುದು ಸೇರಿದಂತೆ ಐದು ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಯಿತು. ಕಸಾಪ ಅಧ್ಯಕ್ಷ ಟಿ. ವೀರೇಂದ್ರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಚನ್ನವೀರಯ್ಯ ನಿರ್ಣಯ ಮಂಡಿಸಿದರು. 


ಸುದ್ದಿ ಓದಿ