ಬಾಗಲಕೋಟೆ

ಶಿಕ್ಷಕ ಕೃಷ್ಣಾ ಅರ್ಜುನಪ್ಪ ಹೊಸಮನಿ ಅವರಿಗೆ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ

ಶಿಕ್ಷಕ ಕೃಷ್ಣಾ ಅರ್ಜುನಪ್ಪ ಹೊಸಮನಿ ಅವರಿಗೆ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ

                ರನ್ನ ಬೆಳಗಲಿ: ನ.24: ಧಾರವಾಡದ ನಾಟ್ಯ ಸ್ಪೂರ್ತಿ ಆರ್ಟ್ಸ ಆ್ಯಂಡ್ ಕಲ್ಚರಲ್ ಅಕಾಡೆಮಿ (ರಿ.) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನ.15ರಂದು ಆಯೋಜಿಸಿದ್ದ 2026ನೇ ಸಾಲಿನ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ ಹಾಗೂ ಕರುನಾಡ ಸಾಧನ  ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗರಾಳ ಗ್ರಾಮದ  ಮಾಧವಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕ್ರಿಯಾಶೀಲ ಶಿಕ್ಷಕ ಕೃಷ್ಣಾ ಅರ್ಜುನಪ್ಪ ಹೊಸಮನಿ ಅವರಿಗೆ ಪ್ರತಿಷ್ಠಿತ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

            ಧಾರವಾಡದಲ್ಲಿ ನಡೆದ ಸಮಾರಂಭವು ರೇವಣಸಿದ್ದೇಶ್ವರ ಮಠದ  ಡಾ. ಬಸವರಾಜ ದೇವರು, ಮನಸೂರು ಅವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿತು. ಪ್ರಶಸ್ತಿ ಸ್ವೀಕರಿಸಿದ ಕೃಷ್ಣಾ ಅರ್ಜುನಪ್ಪ ಹೊಸಮನಿ ಅವರನ್ನು ಶ್ರೀಗಳು ಆಶೀರ್ವದಿಸಿ, ಅವರ ಶೈಕ್ಷಣಿಕ ಹಾಗೂ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿದರು.

                ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಸಿ. ಬೆಲ್ಲದ, ನಾಟ್ಯ ಸ್ಪೂರ್ತಿ ಆರ್ಟ್ಸ ಆ್ಯಂಡ್ ಕಲ್ಚರಲ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ನೃತ್ಯ ನಿರ್ದೇಶಕ ಸದಾನಂದ ಬಂಗೆನ್ನವರ, ಕಾರ್ಯದರ್ಶಿ ಮಂಜುನಾಥ ಕಾದ್ರೊಳ್ಳಿ, ಸಾಹಿತಿ ಡಾ. ಎಚ್‌. ಬಿ. ನಡುವಿನಕೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

              ಶಿಕ್ಷಣ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ಸೇವೆ ಸಲ್ಲಿಸುತ್ತಿರುವ ಕೃಷ್ಣಾ ಅರ್ಜುನಪ್ಪ ಹೊಸಮನಿ ಅವರಿಗೆ ರಾಜ್ಯಮಟ್ಟದ ಗೌರವ ಲಭಿಸಿರುವುದಕ್ಕೆ ಶ್ರೀ ಮಾಧವಾನಂದ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ, ಗ್ರಾಮದ ಗಣ್ಯರು, ಹಿತೈಷಿಗಳು ಮತ್ತು ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ