ಬಾಗಲಕೋಟೆ

ಪ್ರವಾಸಿ ಮಂದಿರ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಕ್ಷೇತ್ರದ ಅಭಿವೃದ್ದಿಗೆ ಆದ್ಯತೆ : ಶಾಸಕ ಮೇಟಿ

ಪ್ರವಾಸಿ ಮಂದಿರ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಕ್ಷೇತ್ರದ ಅಭಿವೃದ್ದಿಗೆ ಆದ್ಯತೆ : ಶಾಸಕ ಮೇಟಿ
Groundbreaking ceremony held for new Tourist Rest House building; priority given to the constituency


 ಬಾಗಲಕೋಟೆ 28:  ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಉಮೇಶ್ ಎಚ್‌. ಮೇಟಿ ಹೇಳಿದರು.             ನವನಗರದ ವಿದ್ಯಾಗಿರಿಯಲ್ಲಿ 2 ಕೋಟಿ ರೂ.ಗಳ ವೆಚ್ಚದ ಪ್ರವಾಸಿ ಮಂದಿರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಬಾಗಲಕೋಟೆ ಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ.

     ಸಾರ್ವಜನಿಕರ ಅಗತ್ಯಗಳಿಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಹಾಗೂ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ತಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.           

            ಪ್ರವಾಸಿ ಮಂದಿರದ ನೂತನ ಕಟ್ಟಡ ನಿರ್ಮಾಣದಿಂದ ಸಾರ್ವಜನಿಕರು ಹಾಗೂ ವಿವಿಧ ಕಾರ್ಯಗಳಿಗಾಗಿ ಆಗಮಿಸುವ ಗಣ್ಯರಿಗೆ ಅಗತ್ಯ ಸೌಲಭ್ಯಗಳು ದೊರೆಯಲಿವೆ. ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.           

          ಈ ಸಂದರ್ಭದಲ್ಲಿ ಪಂಚಗ್ಯಾರಂಟಿ ಯೋಜನೆಯ ತಾಲೂಕಾ ಅಧ್ಯಕ್ಷ ಎಸ್‌.ಎನ್‌.ರಾಂಪೂರ ಸೇರಿದಂತೆ ಬಸವಂತಪ್ಪ ಮೇಟಿ, ನಾಗರಾಜ್ ಹದ್ಲಿ, ಅಕ್ಬರ್ ಮುಲ್ಲಾ, ರಜಾಕ್ ಬೇಲೂರು, ಹನುಮಂತ ರಾಕುಂಪಿ, ಹನುಮವ್ವ ಕರಿವಳ್ಳಿ, ಸುಧಾ ಪಾಟೀಲ್, ಕಲಾವತಿ ಕಾಮತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ