ಮೋಳೆ-ಕಾತ್ರಾಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಾಜು ಕಾಗೆ ಚಾಲನೆ
ಕಾಗವಾಡ 28: ಸನ್ 2025ಹಿ26 ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮೋಳೆ-ಕಾತ್ರಾಳ ರಸ್ತೆ ಖಡೀಕರಣ ಮತ್ತು ಡಾಂಬರೀಕರಣ ಕಾಮಗಾರಿಗೆ ಶಾಸಕ ರಾಜು ಕಾಗೆ ಚಾಲನೆ ನೀಡಿದರು. ಸುಮಾರು 1 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಈ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಮೋಳೆ ಹಾಗೂ ಕಾತ್ರಾಳ ಗ್ರಾಮಗಳ ನಡುವಿನ ಸಂಚಾರ ವ್ಯವಸ್ಥೆ ಸುಧಾರಣೆಯಾಗುವ ನೀರೀಕ್ಷೆಯಿದೆ. ರಸ್ತೆ ಖಡೀಕರಣ ಮತ್ತು ಡಾಂಬರೀಕರಣದಿಂದ ಸಾರ್ವಜನಿಕರು, ರೈತರು ಹಾಗೂ ವಾಹನ ಸವಾರರಿಗೆ ಅನುಕೂಲವಾಗಲಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕಾಮಗಾರಿ. ಕೈಗೊಳ್ಳಲಾಗಿದೆ. ಈ ವೇಳೆ ತಾ.ಪಂ. ಇಓ ವೀರಣ್ಣ ವಾಲಿ, ಪಿಡಿಒ ಸುಭಾಷ ಹುಬ್ಬಳ್ಳಿ, ಸಿದ್ದಪ್ಪ ಕನಾಳೆ, ಶಿವಾನಂದ ಹೊಸಮನಿ, ವಿನೋದ ಕೊಳೇಕರ, ಅಪ್ಪಾಸಾಬ ಪಾಟೀಲ, ಸತೀಶ ಯರಂಡೋಲಿ, ಶ್ರೀಶೈಲ ಬಡಿಗೇರ, ಗಜು ಮುಂಜೆ, ಹಣಮಂತ ಬಣಚೋಡ, ಅಶೋಕ ಮುಂಜೆ, ಮಹಾವೀರ ಮುಂಜೆ, ಶಿವಾಜಿ ರೂಪನವರ, ಧರ್ಮಾ ಕೊಳೇಕರ, ಬಾಳು ನರಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.