ಕಾಗವಾಡ

ಕಾಗವಾಡದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ

ಕಾಗವಾಡದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ


ಕಾಗವಾಡ 26: ಕಾಡಿನಲ್ಲಿ ಜನರನ್ನು ಲೂಟಿ ಮಾಡುತ್ತಿದ್ದ ರತ್ನಾಕರ, ನಾರದ ಮುನಿಗಳಿಂದ ಜ್ಞಾನೋದಯಗೊಂಡು, ತಪಸ್ಸು ಮಾಡಿ, ಮಹರ್ಷಿ ವಾಲ್ಮೀಕಿಯಾಗಿ ರಾಮಾಯಣವನ್ನು ರಚನೆ ಮಾಡಿ, ಬದುಕಿನ ಮೌಲ್ಯಗಳನ್ನು ಸಮಾಜಕ್ಕೆ ತೋರಿಸಿಕೊಟ್ಟ ಆದಿಕವಿಗಳಾಗಿದ್ದಾರೆಂದು ಸನ್ಮತಿ ವಿದ್ಯಾಲಯ ಸಹ ಶಿಕ್ಷಕ ಎಚ್‌.ಪಿ, ನಾಯಿಕ ತಿಳಿಸಿದ್ದಾರೆ. 

ಅವರು, ಸೋಮವಾರ ದಿ. 26 ರಂದು ಪಟ್ಟಣದ ಮಲ್ಲಿಕಾರ್ಜುನ ವಿದ್ಯಾಲಯದ ಸಭಾಭವನದಲ್ಲಿ ತಾಲೂಕಾಡಳಿತ, ತಾಲೂಕಾ ಪಂಚಾಯತ ಪಟ್ಟಣ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು, ಮಾತನಾಡುತ್ತಿದ್ದರು. ಮುನುಷ್ಯನಿಗೆ ಜ್ಞಾನ ಎಷ್ಟು ಮುಖ್ಯವಾಗಿದೆ ಎಂಬುದಕ್ಕೆ ಮಹರ್ಷಿ ವಾಲ್ಮೀಕಿಗಳೇ ನಿದರ್ಶನವಾಗಿದ್ದು, ಆದ್ದರಿಂದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ. ಇಓ ವೀರಣ್ಣ ವಾಲಿ ವಹಿಸಿ, ಮಾತನಾಡಿ, ವಾಲ್ಮೀಕಿಯವರ ತತ್ವಾದರ್ಶ ಪ್ರತಿಯೊಬ್ಬರಿಗೆ ಪ್ರೇರಣೆಯಾಗಿದ್ದು, ಅವರು ರಚಿಸಿದ ರಾಮಾಯಣವು ನಾವು ಹೇಗೆ ಬದುಕುಬೇಕೆಂಬುದನ್ನು ಕಲಿಸಿಕೊಡುತ್ತದೆ ಎಂದರು.  ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ವಾಲ್ಮಿಕಿ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಿಇಓ ಚನ್ನಿಗರಾಮಯ್ಯ ಪ್ರಾಸ್ಥಾವಿಕವಾಗಿ ಮಾತನಾಡಿದರು.  ಈ ವೇಳೆ ಗ್ರೆಡ್‌-2 ತಹಶೀಲ್ದಾರ ರಶ್ಮಿ ಜಕಾತಿ,

ತಾ.ಪಂ. ಇಓ ವಿರಣ್ಣಾ ವಾಲಿ, ಸಿಡಿಪಿಒ ಸಂಜೀವಕುಮಾರ ಸದಲಗಿ, ಪ.ಪಂ. ಮುಖ್ಯಾಧಿಕಾರಿ ಪ್ರಸನ್ನ ಕಲ್ಯಾಣಶೆಟ್ಟಿ, ಸಮಾಜ ಕಲ್ಯಾಣಾಧಿಕಾರಿ ಸದಾಶಿವ ಮಾಂಗ, ಬಿಇಓ ಚನ್ನಿಗರಾಮಯ್ಯ, ಎಎಸ್‌ಐ ಜೆ.ಎ. ಸೋನವಾನೆ, ಪಶುವೈದ್ಯಾಧಿಕಾರಿ ಕೆ.ಡಿ. ಕಾಂಬಳೆ ವಾಲ್ಮೀಕ ಸಮಾಜದ ತಾಲೂಕಾಧ್ಯಕ್ಷ ರಮೇಶ ನಾಯಿಕ, ದಲಿತ ಮುಖಂಡ ಸಂಜಯ ತಳವಳಕರ, ಪ್ರವೀಣ ಕೆಂಪವಾಡೆ, ಸದಾಶಿವ ನಾಯಿಕ, ಮಹಾದೇವಿ ಮಾಕನ್ನವರ ಸೇರಿದಂತೆ ವಾಲ್ಮೀಕಿ ಸಮಾಜ ಬಾಂಧವರು, ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ