ಶಿರಗುಪ್ಪಿಯಲ್ಲಿ ಉಚಿತ ಆರೋಗ್ಯ ಶಿಬಿರ; 100 ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ಪರೀಕ್ಷೆ
ಲೋಕದರ್ಶನ ವರದಿ
ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನ ಮತ್ತು ಸಕಲ ಹಿಂದೂ ಸಮಾಜ ಶಿರಗುಪ್ಪಿ ಮಂಡಳದ ವತಿಯಿಂದ ಮಿರಜದ ಸ್ಪಂದನ ಹೃದಯಾಲಯ ಮತ್ತು ಸೂಪರ್ ಸ್ಪೆಶಾಲಿಸ್ಟ್ ಆಸ್ಪತ್ರೆಯ ಸಹಯೋಗದೊಂದಿಗೆ ಛತ್ರಪತಿ ಶಿವಾಜಿ ಮಹಾರಾಜ ಚೌಕ್ದಲ್ಲಿ ರವಿವಾರ ದಿ.18 ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಸಂಪನ್ನಗೊಂಡಿತು.
ಶಿಬಿರದಲ್ಲಿ ಭಾಗವಹಿಸಿದ 100 ಕ್ಕೂ ಅಧಿಕ ಜನರಿಗೆ ಇಸಿಜಿ, ಬಿಪಿ, ಶುಗರ್, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಅರ್ಥೋ ಸೇರಿದಂತೆ ಇತರೇ ಕಾಯಿಲೆಗಳ ಪರೀಕ್ಷೆ ನಡೆಸಲಾಗಿತು.
ಈ ವೇಳೆ ಸ್ಪಂದನ ಹೃದಯಾಲಯದ ನಿರ್ದೇಶಕ ಡಾ. ಶಿಫಾ ಅಖಬಾರಿ ಮಾತನಾಡಿ, ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆ ಯಡಿಯಲ್ಲಿ ಶಿಬಿರಲ್ಲಿ ಮತ್ತು ಸ್ಪಂದನ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದ್ದು, ಪ್ರತಿಯೊಬ್ಬರ ಕರ್ನಾಟಕ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ವೇಳೆ ಸ್ಪಂದನ ಆಸ್ಪತ್ರೆಯ ವೈದ್ಯರಾದ ಡಾ. ಶಿಫಾ ಅಖಬಾರಿ, ಡಾ. ಸ್ವಪ್ನಿಲ ಪವಾರ, ಸಾಹಿಲ ಮುಲ್ಲಾ, ಅಪ್ಸಾನಾ ಮುಲ್ಲಾ, ಸಚಿನ ಖರಪೆ, ನಿಹಾಲ ಬಾಲದಾರ, ಫಜಲ ಬುಜುರಕ, ಸ್ವಪ್ನಿಲ ಬೋರಗಾವೆ, ಪ್ರತೀಕ ಭೋರೆ, ತೋಹಿದ ದಾಬಿರ, ಅತುಲ ಕೋಳೇಕರ ಸೇರಿದಂತೆ ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನ ಮತ್ತು ಸಕಲ ಹಿಂದೂ ಸಮಾಜದ ಮುಖಂಡರು, ಯುವಕರು, ಗ್ರಾಮಸ್ಥರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.