ಸಿಂಧಗಿ

ಕನ್ನೊಳ್ಳಿ ಟೋಲ್ ಬಳಿ ರೈತರ ಹೋರಾಟ..! ಬೇಡಿಕೆ ಈಡೇರಿಕೆಗೆ ಹೆದ್ದಾರಿಯಲ್ಲಿ ಪ್ರತಿಭಟನೆ

ಕನ್ನೊಳ್ಳಿ ಟೋಲ್ ಬಳಿ ರೈತರ ಹೋರಾಟ..! ಬೇಡಿಕೆ ಈಡೇರಿಕೆಗೆ ಹೆದ್ದಾರಿಯಲ್ಲಿ ಪ್ರತಿಭಟನೆ
Farmers' protest near Kannolli toll plaza! Demonstration on the highway demanding fulfillment of dem

ಲೋಕದರ್ಶನ ವರದಿ 

             ಸಿಂದಗಿ: ರೈತರ ವಿವಿಧ ಬೇಡಿಕೆಗಳಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಬಳಿ ರೈತರು ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಕರೇಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. 

ರೈತರ ಸಾಲದ ಹೊರೆ ಕಡಿಮೆ ಮಾಡುವುದು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸುವುದು, ಕೃಷಿ ಕ್ಷೇತ್ರದ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು 

        ಕೃಷಿ ವೆಚ್ಚ ಹೆಚ್ಚಳ, ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದಿರುವುದು ಹಾಗೂ ಸಾಲದ ಒತ್ತಡದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರು. ರೈತರ ಬೇಡಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರೀಶೀಲಿಸಿ, ನ್ಯಾಯಯುತ ಪರಿಹಾರ ಒದಗಿಸುವವರೆಗೆ ಹೋರಾಟದ ಧ್ವನಿಯನ್ನು ನಿರ್ಲಕ್ಷಿಸಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

       ನಮ್ಮ ಅಗತ್ಯ ರೈತ ಬೇಡಿಕೆಗಳನ್ನು ಈಡೇರಿಸಲೇಬೇಕು ಇಲ್ಲವಾದರೆ ನಮ್ಮ ರೈತ ದೇವರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕನ್ನೋಳ್ಳಿ ಟೋಲ್ ನಲ್ಲಿ ಹೆಚ್ಚಾಗುತ್ತಿದೆ. ಬರಗಾಲದ ಸ್ಥಿತಿಯಲ್ಲಿ ರೈತರ ಪರಿಸ್ಥಿತಿ ಹದಗೆಟ್ಟಿದೆ ಕೇಂದ್ರದ ಹಟವಾದಿ ಧೋರಣೆ ನಿಲ್ಲಬೇಕು. 5500 ರು. ಗಳು ದೊರೆಯುವಂತೆ ಎಂ.ಎಸ್‌.ಪಿ ನೀಡಲಿ , ನಿತ್ಯ ರೈತರಿಗೆ 7 ಗಂಟೆ ಕರೆಂಟ್ ಪೂರೈಸುವ ವ್ಯವಸ್ಥೆಯಾಗಬೇಕು ಎಂದರು. 

       ಕನ್ನೋಳ್ಳಿ ಟೋಲ ನಾಕಾದಲ್ಲಿ ಬಿಸಿಲಿನ ತಾಪವನ್ನು ಲೆಕ್ಕಿಸದೆ ಎಲ್ಲೆಡೆಯಿಂದ ರೈತರು ತಂಡೋಪ ತಂಡವಾಗಿ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದರು, ಯುವ ರೈತರು ಹಸಿರು ಟಾವಲ್ ಗಳನ್ನು ಗರಗರನೇ  ತಿರುಗಿಸಿ ಪ್ರತಿಭಟಿಸುತ್ತಿದ್ದರು 

       ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಪೀರು ಕೆರೂರ, ಸಿಂದಗಿ ತಾಲೂಕು ಅಧ್ಯಕ್ಷ ದಶರಥಸಿಂಗ್ ರಜಪೂತ, ತಾಲೂಕು ಉಪಾಧ್ಯಕ್ಷ ರಾಘವೇಂದ್ರ ಹೂಗಾರ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರಗೌಡ ಬಗಲಿ, ಮಲಕಣ್ಣ ಹಿರೇಕುರುಬರ, ಸಿದ್ದಣ್ಣ ಚೌದರಿ ಸೇರಿದಂತೆ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು. 


  


ಸುದ್ದಿ ಓದಿ