20 ರಂದು ನಂದಾ ದೀಪಾರಾಧನಾ ಮಹೋತ್ಸವ ; ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಲಕ್ಷ್ಮೇಶ್ವರ 18 : ಪಟ್ಟಣದ ಅಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನ (ರಿ) ವತಿಯಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿರುವ ನಂದಾ ದೀಪಾರಾಧನಾ ಮಹೋತ್ಸವವು ದಿ.20 (ಮಂಗಳವಾರ) ರಂದು ಸಾಯಂಕಾಲ 7 ಗಂಟೆಗೆ ಪಟ್ಟಣದ ಲಿಂಬಯ್ಯಸ್ವಾಮಿಮಠದ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಲಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದ ಲಿಂಬಯ್ಯ ಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷರಾದ ಶಿವಪ್ರಕಾಶ್ ಲಿಂಬಯ್ಯ ಸ್ವಾಮಿಮಠ ಅವರು ಮಾತನಾಡಿ ನಮ್ಮ ಲಿಂಬಯ್ಯ ಸ್ವಾಮಿಮಠದಿಂದ ಪ್ರತಿ ವರ್ಷ ಮಹಾನವಮಿ ಎಂದು ನಡೆದುಕೊಂಡು ಬರುತ್ತಿರುವ ನಂದಾ ದೀಪರಾದನಾಹಾಗೂ ಆವಿಷ್ಕಾರಗೊಂಡ ಸಪ್ತ ಚೇತನಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಮಠದ ಆವರಣದಲ್ಲಿ ಇದೇ 20 -ರಂದು ಸಾಯಂಕಾಲ 7:00ಗೆ ನಡೆಯಲಿದ್ದು ಈ ಒಂದು ಕಾರ್ಯಕ್ರಮದದಿವ್ಯ ಪಾವನ ಸಾನ್ನಿಧ್ಯವನ್ನು ಶಿರಹಟ್ಟಿ-ಬಾಲೇಹೊಸೂರಿನ ಭಾವೈಕ್ಯತಾ ಪೀಠದ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ತಾ.ಪಾ.ಮ.ಬ. ಲಕ್ಷ್ಮೇಶ್ವರದ ಕಾರ್ಯದರ್ಶಿಗಳಾದ ಜಯಲಕ್ಷ್ಮೀ ಜಿ. ಗಡ್ಡದೇವರಮಠ ವಹಿಸಲಿದ್ದು, ಪಟ್ಟಣದ ಅಧ್ಯಾತ್ಮ ಚಿಂತಕರಾದ ಚಂದ್ರಶೇಖರ ಎಸ್. ಮಹಾಜನಶೆಟ್ಟರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಸಾಧಕ ಚೇತನಗಳ ಆವಿಷ್ಕಾರ ಹಾಗೂ ವಿಶೇಷ ಸನ್ಮಾನಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸುಪ್ತ ಚೇತನಗಳಾದ ಪಟ್ಟಣದ ಆದರ್ಶ ಶಿವಶರಣೆ ನಿರ್ಮಲಾದೇವಿ ಬಸಣ್ಣನವರು ಹತ್ತಿಕಾಳ, ಹಂದಿಗನೂರಿನ ಕೃಷಿ ಮಹಿಳೆ ರಾಜೇಶ್ವರಿ ವಿ. ಪಾಟೀಲ ಹಾಗೂ ವಿಜಯಪುರ ಶಿಕ್ಷಣ ಸಿರಿ ಜಿ.ಎಲ್.ಡಿ.ಇ. ಸಂಸ್ಥೆ ಪ್ರಾಧ್ಯಾಪಕರು ಶಿಕ್ಷಣ ಸಿರಿ’ ಡಾ. ಉಷಾದೇವಿ ಉ. ಹಿರೇಮಠ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ ಆವಿಷ್ಕರಿಸಲಾಗುವುದು. ಹಾಗೂ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯದೇವ ಎಂ. ಮೆಣಸಗಿ ಅವರಿಗೆ ’ವಿಶೇಷ ಸನ್ಮಾನ’ ಸಲ್ಲಿಸಲಾಗುವುದು.
ಜನಪದ ಸಂಗೀತ ಹಾಗೂ ಧರ್ಮದರ್ಶಿಗಳ ಸಾನ್ನಿಧ್ಯಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಹರ್ಲಾಪುರದ ಸಾಂಬಯ್ಯ ಹಿರೇಮಠ ಹಾಗೂ ಸಂಗಡಿಗರಿಂದ ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ" ಜಾನಪದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು. ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಹಿರಿಯರು ಹಾಗೂ ಮಾರ್ಗದರ್ಶಕರಾದ ಮಾಜಿ ಶಾಸಕ ಜಿ ಎಸ್ ಗಡ್ಡದೇವರಮಠ ಅವರು ಮಾತನಾಡಿ ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸುಪ್ತ ಚೇತನಗಳು ಎಂದು ಗುರುತಿಸಿ ಲಿಂಬಯ್ಯ ಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸುತ್ತಾ ಬಂದಿದ್ದು ಈ ಸಾರಿ ಮಹಿಳೆಯರಿಗೆ ಆದ್ಯತೆ ನೀಡಬೇಕೆಂಬ ಉದ್ದೇಶದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದರು.
ಈ ಸಮಯದಲ್ಲಿ ಲಿಂಬಯ್ಯ ಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷರಾದ ಶಿವಪ್ರಕಾಶ್ ಎಲ್. ಲಿಂಬಯ್ಯಸ್ವಾಮಿಮಠ, ಉಪಾಧ್ಯಕ್ಷರಾದ ಚಿದಾನಂದ ಎಲ್. ಅಂಬಯ್ಯಸ್ವಾಮಿಮಠ, ಈಶ್ವರ ಮೆಡ್ಲೇರಿ ಗೌರವ ಕಾರ್ಯದರ್ಶಿಗಳು ಪ್ರತಿಷ್ಠಾನದ ಧರ್ಮದರ್ಶಿಗಳು ಮಹೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದು, ’ನೇತ್ರದಾನ ಹಾಗೂ ದೇಹದಾನ’ ಪವಿತ್ರ ಅಭಿಯಾನಕ್ಕೆ ಕೈಜೋಡಿಸಲು ಇಚ್ಛಿಸುವ ದಾನಿಗಳು ಸಂಸ್ಥೆಯನ್ನು ಸಂಪರ್ಕಿಸುವಂತೆ ಕೋರಿದ್ದಾರೆ.ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪ್ರತಿಷ್ಠಾನ ಮನವಿ ಮಾಡಿದೆ. ಹಾಗೂ ಮ್ಯಾಗೇರಿ ಓಣಿಯ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದೆಂದು ತಿಳಿಸಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ ಎಸ್ ಗಡ್ಡದೇವರಮಠ,ಬಸವರಾಜ ಬೆಂಡಿಗೇರಿ, ವಿರುಪಾಕ್ಷಪ್ಪ ಪಡಗೇರಿ,ಬಸಣ್ಣ ಗಾಂಜಿ,ರಾಜೀವ ಕುಂಬಿ ಚಿದಾನಂದ ಲಿಂಬಯ್ಯ ಸ್ವಾಮಿಮಠ,ನಿರಂಜನ ಲಿಂಬಯ್ಯಸ್ವಾಮಿಮಠ, ಮಹೇಶ ಲಿಂಬಯ್ಯಸ್ವಾಮಿಮಠ,ಎಂ ಕೆ ಕಳ್ಳಿಮಠ, ಪ್ರವೀಣ ಬಾಳಿಕಾಯಿ,ನಿಂಗಪ್ಪ ಬನ್ನಿ ಈರಣ್ಣ ಅಂಕಲಕೋಟಿ,ಸಾಹೇಬಜಾನ ಹವಾಲ್ದಾರ, ಶರಣಪ್ಪ ಗುಳಗಣ್ಣನವರ ಶಾಂತಣ್ಣ ಓದುನವರ,ರಾಮಣ್ಣ ಪಡಗೇರಿ ನೀಲಪ್ಪ ಪೂಜಾರ,ಗಂಗಪ್ಪ ದುರಗಣ್ಣವರ ಕೃಷ್ಣಾ ಕುಲಕರ್ಣಿ ಸೇರಿದಂತೆ ಮ್ಯಾಗೇರಿ ಓಣಿಯ ಸಮಸ್ತ ಗುರು ಹಿರಿಯರು ಮುಖಂಡರು ಇತರರಿದ್ದರು.