ಗದಗ

ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದ ಮಳೆರಾಯ

ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದ ಮಳೆರಾಯ



ಲಕ್ಷ್ಮೇಶ್ವರ 17 : ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಗೆ ಕಳೆದ ಎರಡು ಮೂರು ತಿಂಗಳಿನಿಂದ ಮಳೆ ಬಾರದೆ ಕಂಗಾಲಾಗಿದ್ದ ಅನ್ನದಾತರಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಶನಿವಾರ ಸಾಯಂಕಾಲ 5: ಗಂಟೆಯ ಸುಮಾರಿಗೆ ಸುರಿದ ಮಳೆಯಿಂದ ತುಸು ನೆಮ್ಮದಿಯೊಂದಿಗೆ ತಂಪನೆಯ ವಾತಾವರಣ ನಿರ್ಮಾಣವಾಯಿತು ಕಳೆದ ಎರಡು ಮೂರು ತಿಂಗಳದಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಅನ್ನದಾತರಿಗೆ ಮುಂಗಾರು ಬೆಳೆ ಬಾರದೆ ಮುಂದೆ ನಮ್ಮ ಬದುಕು ಹೇಗೆ ಎಂಬ ಚಿಂತೆಯಲ್ಲಿ ಇದ್ದ ಅನ್ನದಾತರಿಗೆ ಶನಿವಾರ ಸುರಿದ ಮಳೆಯಿಂದ ತುಸು ನೆಮ್ಮದಿಯನ್ನು ತಂದಂತಾಗಿದೆ ಮುಂಗಾರು ಬೆಳೆಯನ್ನು ಕಳೆದುಕೊಂಡ ರೈತರಿಗೆ ಸುರಿದ ಮಳೆಯಿಂದ ಹಿಂಗಾರು ಬೆಳೆ ಬಿತ್ತನೆಯ ಆಶಾಭಾವನೆ ಮೂಡಿದಂತಾಗಿದೆ. 


ಸುದ್ದಿ ಓದಿ