ಸಿಂಧಗಿ

ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡಲು ತಹಶೀಲ್ದಾರರಿಗೆ ಪದವಿ

ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡಲು ತಹಶೀಲ್ದಾರರಿಗೆ ಪದವಿ

ಲೋಕದರ್ಶನ ವರದಿ 


        ಸಿಂದಗಿ: ಬೇಸಿಗೆ ಕಾಲದಲ್ಲಿ ಭಾರತ ಸರ್ಕಾರ 2027ರ ಜನಗಣತಿ ಮನೆಪಟ್ಟಿ ಕಾರ್ಯ ಮಾಡಿರುವ ತಾಲ್ಲೂಕಿನ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡುವಂತೆ ಆದೇಶಿಸಬೇಕು ಎಂದು ಕರ್ನಾಟಕ ರಾಜ್ಯ ಪದವಿ ಶಿಕ್ಷಕರ (6 ರಿಂದ 8ನೇ ತರಗತಿ) ತಾಲ್ಲೂಕು ಘಟಕದವರು ತಹಶೀಲ್ದಾರ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಮಾಡಿದರು. 

      ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರು, ಬೇಸಿಗೆಯಲ್ಲಿ ತಾಲ್ಲೂಕಿನ ಶಿಕ್ಷಕರು ಭಾರತ ಜನ ಗಣತಿ 2027 ಮನೆಪಟ್ಟಿ ಕಾರ್ಯ ನಿರ್ವಹಿಸಿದ್ದು, ಆ ಶಿಕ್ಷಕರಿಗೆ ಒಂದು ವಾರದೊಳಗಾಗಿ ಗಳಿಕೆ ರಜೆ ಮಂಜೂರು ಹಾಗೂ ಹಾಜರಾತಿ ಕರ್ತವ್ಯ ಪ್ರಮಾಣ ಪತ್ರ ನೀಡಲಾಗುವದು ಎಂದು ಭರವಸೆ ನೀಡಿದರು. ಜೊತೆಗೆ ಕರ್ನಾಟಕ ರಾಜ್ಯ ಪದವಿ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ತಾಲ್ಲೂಕು ಆಡಳಿತದಲ್ಲಿ ನಡೆಯುವ ಸಮಾರಂಭಗಳಲ್ಲಿ ಆಹ್ವಾನ ನೀಡುವುದಾಗಿ ತಿಳಿಸಿದರು. 

       ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪದವಿ ಶಿಕ್ಷಕರ (6 ರಿಂದ 8) ತಾಲ್ಲೂಕು ಘಟಕದ ಅಧ್ಯಕ್ಷ ಮಡಿವಾಳಪ್ಪ ಪೂಜಾರಿ. ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಜಂತ್ರಿ ಹಾಗೂ ಖಜಾಂಚಿ ದೊಡ್ಡಪ್ಪ ಎಚ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು 


ಸುದ್ದಿ ಓದಿ