ಕಾಗವಾಡ

ಜನರ ಸಮಸ್ಯೆಗಳ ಪರಿಹಾರಕ್ಕೆ ಯೋಗ್ಯ ವೇದಿಕೆ: ರವೀಂದ್ರ ಹಾದಿಮನಿ

ಜನರ ಸಮಸ್ಯೆಗಳ ಪರಿಹಾರಕ್ಕೆ ಯೋಗ್ಯ ವೇದಿಕೆ: ರವೀಂದ್ರ ಹಾದಿಮನಿ

ಲೋಕದರ್ಶನ ವರದಿ 

ಕಾಗವಾಡ 17 :  ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಗಳ ಅಲೆದಾಟ ತಪ್ಪಿಸಲು ಮತ್ತು ಒಂದೇ ಸ್ಥಳದಲ್ಲಿ ಎಲ್ಲ ಇಲಾಖೆಯ ಸಮಸ್ಯೆಗಳ ಇತ್ಯರ್ಥಕ್ಕೆ ಸರ್ಕಾರದ ಪ್ರಜಾಸೇವೆ ಆಂದೋಲನ ವೇದಿಕೆಯಾಗಿದ್ದು, ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕೆಂದು ತಹಶೀಲ್ದಾರ ರವೀಂದ್ರ ಹಾದಿಮನಿ ತಿಳಿಸಿದ್ದಾರೆ.ಅವರು ಶನಿವಾರ ದಿ. 17 ರಂದು ತಾಲೂಕಿನ ಜುಗೂಳ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ನಡೆದ ಪ್ರಜಾಸೇವೆ ಆಂದೋಲದಲ್ಲಿ ಮಾತನಾಡುತ್ತಿದ್ದರು.


ಜುಗೂಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಜುಗೂಳ, ಮಂಗಾವತಿ ಮತ್ತು ಶಹಾಪೂರ ಗ್ರಾಮಸ್ಥರು ಸ್ಮಶಾನ ಭೂಮಿ, ಕೃಷ್ಣಾ ನದಿ ಮಹಾಪೂರದಲ್ಲಿ ಮನೆ ಕಳೆದಕೊಂಡವರಿಗೆ ಮನೆ ಹಂಚಿಕೆ, ಕಸ ವಿಲೇವಾರಿ, ಜೆಜೆಎಂ-ಕುಡಿಯುವ ನೀರು ಸರಬರಾಜು, ರಸ್ತೆ-ಗಟಾರು ಸಮಸ್ಯೆಗಳು, ಮೂಲಭೂತ ಸೌಕರ್ಯಗಳು, ರೈತರ್ ಪಂಪಸೆಟ್‌ಗಳಿಗೆ ನಿರಂತರ ವಿದ್ಯುತ್, ಇ-ಸ್ವತು ನೀಡುವ ಕುರಿತು ಹೀಗೆ ಹತ್ತು ಹಲವಾರು ಸಮಸ್ಯೆಗಳಿಗೆ ಸಾರ್ವಜನಿಕರು ಲಿಖಿತ ರೂಪದಲ್ಲಿ ತಮ್ಮ ಅವಹಾಲು ಸಲ್ಲಿಸಿದರು. ಸಂಬಂಧ ಪಟ್ಟ ಅಧಿಕಾರಿಗಳು ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ನೀಡುವಲ್ಲಿ ಯಶಸ್ವಿಯಾದರೇ ಇನ್ನೂ ಕೆಲವೊಂದು ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. 


ಈ ಸಮಯದಲ್ಲಿ ತಹಶೀಲ್ದಾರ ರವೀಂದ್ರ ಹಾದಿಮನಿ, ತಾ.ಪಂ. ಇಓ ವೀರಣ್ಣಾ ವಾಲಿ, ಗ್ರೆಡ್‌-2 ತಹಶೀಲ್ದಾರ ರಷ್ಮಿ ಜಕಾತಿ, ಸಿಡಿಪಿಓ ಸಂಜೀವಕುಮಾರ್ ಸದಲಗಿ, ಬಿಇಓ ಚನ್ನಿಗರಾಮಯ್ಯ, ತಾಲೂಕಾ ಆರೋಗ್ಯಾಧಿಕಾರಿ ಡಾ. ಬಸಗೌಡಾ ಕಾಗೆ, ಹೆಸ್ಕಾಂ ಎಇಇ ಎ.ಎಸ್‌. ಮಾಕಣಿ, ಎಡಿ ಅಲ್ಲಾವುದ್ದಿನ್ ಅನ್ಸಾರಿ, ಅನೀಲ ಕಡೋಲೆ, ಅನೀಲ ಸುಂಕೆ, ಅರುಣ ಗಣೇಶವಾಡಿ, ಉಮೇಶ ಪಾಟೀಲ, ರಾಜು ಕಡೋಲೆ, ಅಮೀನ ನಂದಗಾವೆ, ಅಸ್ಲಂ ಅಪರಾಜ, ಸುರೇಶ ಪಾಟೀಲ, ಬಸವರಾಜ ನಂದ್ಯಾಳೆ ಸೇರಿದಂತೆ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ಜುಗೂಳ, ಮಂಗಾವತಿ ಮತ್ತು ಶಹಾಪೂರ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ