ಹಾವೇರಿ

ದುರ್ಗೇಶ್ ಗೋಣೆಮ್ಮನವರಿಗೆ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ರಾಜ್ಯ ನಾಮನಿರ್ದೇಶನ ಸದಸ್ಯರಾಗಿ ನೇಮಕ

ದುರ್ಗೇಶ್ ಗೋಣೆಮ್ಮನವರಿಗೆ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ರಾಜ್ಯ ನಾಮನಿರ್ದೇಶನ ಸದಸ್ಯರಾಗಿ ನೇಮಕ
Durgesh Gonemma appointed as a state-nominated member of the Karnataka Adi Jambava Development Corp

ಲೋಕದರ್ಶನ ವರದಿ  

              ಹಾವೇರಿ 17: ಕಾಂಗ್ರೆಸ್ ಪಕ್ಷದ ಮುಖಂಡರು, ಸಮಾಜದ  ಹಿರಿಯರು ಹಾಗೂ ಬ್ಯಾಡಗಿ ಪುರಸಭೆ ಮಾಜಿಸದಸ್ಯರಾದ ದುರಗೇಶ ಗೋಣೆಮ್ಮನವರ ಅವರನ್ನು ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ರಾಜ್ಯ ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿದ ಸರ್ಕಾರಕ್ಕೆ ಹಾಗೂ ನೇಮಕ ಸಹಕಾರ ನೀಡಿದ ಬ್ಯಾಡಗಿ ಶಾಸಕರಾದ ಬಸವರಾಜ ಶಿವಣ್ಣನವರ ಅವರಿಗೆ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರು ಹಾಗೂ ಅಹಿಂದ ಸಂಘಟನೆಯ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಹೇಳಿದರು. 

      ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ,ಅಹಿಂದ ಸಂಘಟನೆ ಹಾಗೂ ಸಮಾಜದ ವತಿಯಿಂದ ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ  ರಾಜ್ಯ ನಾಮ ನಿರ್ದೇಶನ ಸದಸ್ಯರಾಗಿ ನೇಮಕವಾದ ದುರಗೇಶ ಗೋಣೆಮ್ಮನವರ ಅವರ ಗೌರವ ಸನ್ಮಾನ ಕಾರ್ಯಕ್ರಮದ ನೇತೃತ್ವವಹಿಸಿ ಅವರು ಶುಭ ಕೋರಿ ಮಾತನಾಡಿದರು.  

       ಸಮಾಜದ ನಾಯಕರಾದ ದುರಗೇಶ ಗೋಣೆಮ್ಮನವರ ಅವರು ಬ್ಯಾಡಗಿ ಪುರಸಭೆಗೆ ಎರಡು ಬಾರಿ ಸದಸ್ಯರಾಗಿ,ಆಶ್ರಯ ಸಮಿತಿ ಸದಸ್ಯರಾಗಿ ಉತ್ತಮ ಕೆಲಸ ಮಾಡಿದ್ದು,ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ  ರಾಜ್ಯ ನಾಮ ನಿರ್ದೇಶನ ಸದಸ್ಯರಾಗಿ ನೇಮಕವಾಗಿದ್ದು ಸಂತೋಷಕರ. ನೇಮಕವಾಗಲು ಹಿರಿಯ ಶಾಸಕರಾದ ಬಸವರಾಜ ಶಿವಣ್ಣನವರ ಅವರ ಶ್ರಮವಿದ್ದು,ಸಮಾಜದ ವತಿಯಿಂದ ಅವರಿಗೆ ಧನ್ಯವಾದಗಳನ್ನು ಸಲ್ಲಿಸಲಾಗುವುದು.ದುರಗೇಶ ಗೋಣೆಮ್ಮನವರ ಅವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಕೆಲಸ ಮಾಡಲಿ ಎಂದು ಉಡಚಪ್ಪ ಮಾಳಗಿ ಶುಭ ಕೋರಿದರು. 


ಸುದ್ದಿ ಓದಿ